ಸಾರಾಂಶ
ಮದ್ದೂರು ತಾಲೂಕು ರೈತ ಸಂಘವು ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಸಕಾ೯ರಿ ಆಸ್ಪತ್ರೆ ಹಾಗೂ ಸಹಕಾರ ಸಂಘದ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕನ್ನಡಪ್ರಭ ವಾರ್ತೆ ಮದ್ದೂರು
ಮೇಲುಕೋಟೆ ಕ್ಷೇತ್ರದ ಶಾಸಕರು, ರೈತ ಪ್ರತಿನಿಧಿಯೂ ಆದಂತಹ ದಶ೯ನ್ ಪುಟ್ಟಣ್ಣಯ್ಯ ರವರ 47ನೇ ವಷ೯ದ ಜನುಮ ದಿನದ ಪ್ರಯುಕ್ತ ಮದ್ದೂರು ತಾಲೂಕು ರೈತ ಸಂಘವು ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಸಕಾ೯ರಿ ಆಸ್ಪತ್ರೆ ಹಾಗೂ ಸಹಕಾರ ಸಂಘದ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರ ಜೊತೆಗೆ ಮದ್ದೂರಿನ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾದ ಕೆಂಪೂಗೌಡ, ಜಿ.ಎ.ಶಂಕರ್, ಬೋರಾಪುರ ಶಂಕರ್, ಉಮೇಶ್, ವಿನೋದ್ ಬಾಬು, ಅಲೋಕ್, ಸತೀಶ್, ಸಿದ್ದರಾಜು, ವೆಂಕಟೇಗೌಡ, ಮಾಯಿಗಯ್ಯ, ಶಂಕರೇಗೌಡ, ಸಿದ್ದೇಗೌಡ, ದೇವರಾಜು, ರಾಮಕೃಷ್ಣ ಅವಿನಾಶ್, ಸುನಿಲ್, ಅನಿಲ್, ವಳಗೆರೆಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರು ವಳಗೆರೆಹಳ್ಳಿ ಹಾಗೂ ಮದ್ದೂರು ತಾಲೂಕು ಆಸ್ಪತ್ರೆಯ ವೈದ್ಯರು ಸಿಬ್ಬಂದಿ ರೈತ ಸಂಘದ ಇತರೆ ಕಾರ್ಯಕರ್ತರು ಹಾಜರಿದ್ದರು.ಮಂಡ್ಯ ದಸರಾ: ಕಲಾತಂಡಗಳಿಗೆ ಆಹ್ವಾನಮಂಡ್ಯ:ಮಂಡ್ಯ ಯೂತ್ ಗ್ರೂಪ್ ವತಿಯಿಂದ ವಿಜಯದಶಮಿ ದಿನದಂದು ನಡೆಯಲಿರುವ ಮಂಡ್ಯ ದಸರಾ ಸಾಂಸ್ಕೃತಿಕ ಮಹೋತ್ಸವದಲ್ಲಿ ಭಾಗವಹಿಸಲು ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ ಎಂದು ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ತಿಳಿಸಿದ್ದಾರೆ. ದಸರಾ ಅಂಗವಾಗಿ ನಗರದ ಶ್ರೀಕಾಳಿಕಾಂಬ ದೇಗುಲದಿಂದ ಶ್ರೀಚಾಮುಂಡೇಶ್ವರಿ ದೇವಾಲಯದವರೆಗೆ ನಡೆಯಲಿರುವ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾ ತಂಡಗಳು ದರ್ಶನ್- ೯೯೬೪೬೧೧೬೪೮ ಸಂಪರ್ಕಿಸುವಂತೆ ತಿಳಿಸಲಾಗಿದೆ.