ಸಾರಾಂಶ
ಹೊನ್ನಾಳಿ ತಾಲೂಕಿನ ಗುಡ್ಡೆಹಳ್ಳಿ ಗ್ರಾಮದ ಭಗವಾನ್ ಬಾಯ್ಸ್ ವತಿಯಿಂದ ಭಗವಾನ್-226 ಹೆಸರಿನ ಹೋರಿಯ ಹುಟ್ಟು ಹಬ್ಬವನ್ನು ಭಾನುವಾರ ಗ್ರಾಮದಲ್ಲಿ 12 ಕೆ.ಜಿ.ಯ ಕೇಕ್ ಕಟ್ ಮಾಡುವ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
- ಭಗವಾನ್ ಬಾಯ್ಸ್ ನೇತೃತ್ವದಲ್ಲಿ 12 ಕೆಜಿ ಕೇಕ್ ಕತ್ತರಿಸಿ ಸಂಭ್ರಮ
- ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹಲವಾರು ಬಹುಮಾನ- ಹೋರಿ ಭಗವಾನ್‌ಗೆ ಹ್ಯಾಪಿ ಬರ್ತ್ ಡೇ ಹೇಳಿದ ಯುವಜನ, ಗ್ರಾಮಸ್ಥರಿಗೆ ಊಟ
- ದೀಪಾವಳಿ ಹಬ್ಬದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಯುವಕರು - - - ಕನ್ನಡಪ್ರಭ ವಾರ್ತೆ ಹೊನ್ನಾಳಿತಾಲೂಕಿನ ಗುಡ್ಡೆಹಳ್ಳಿ ಗ್ರಾಮದ ಭಗವಾನ್ ಬಾಯ್ಸ್ ವತಿಯಿಂದ ಭಗವಾನ್-226 ಹೆಸರಿನ ಹೋರಿಯ ಹುಟ್ಟು ಹಬ್ಬವನ್ನು ಭಾನುವಾರ ಗ್ರಾಮದಲ್ಲಿ 12 ಕೆ.ಜಿ.ಯ ಕೇಕ್ ಕಟ್ ಮಾಡುವ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
ತಮಿಳುನಾಡಿನಿಂದ ತಂದಿರುವ ಭಗವಾನ್ ಹೆಸರಿನ ಹೋರಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 4ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಭಗವಾನ್‍ಗೆ ಸ್ನಾನ ಮಾಡಿಸಿ ವಿವಿಧ ವಸ್ತುಗಳಿಂದ ಅಲಂಕಾರ ಮಾಡಲಾಯಿತು. ಬೃಹತ್ ಕೇಕ್ ಕಟ್ ಮಾಡಿದ ಭಗವಾನ್ ಬಾಯ್ಸನ ಹುಡುಗರು ಹೋರಿ ಭಗವಾನ್‌ಗೆ ಹ್ಯಾಪಿ ಬರ್ತ್ ಡೇ ಎಂದು ಹೇಳಿದರು. ಅಲ್ಲದೆ, ಗ್ರಾಮದಲ್ಲಿ ಜನರಿಗೆ ಊಟ ನೀಡಿ ಸಂಭ್ರಮಿಸಲಾಯಿತು.ಶುಭಾಶಯ:
ಗ್ರಾಮಸ್ಥರಾದ ಅರುಣ್‍ಕುಮಾರ್, ನಾಗರಾಜ್, ಶಿಕ್ಷಕ ಪ್ರಭು, ಉಮೇಶ್ ಕೆ.ಎನ್.. ಭಗವಾನ್ ಬಾಯ್ಸ್‌ನ ಯುವಕರಾದ ಕಾರ್ತಿಕ್, ಅಭಿಷೇಕ್, ಚೇತನ್, ಕಿರಣ್, ಪ್ರಮೋದ್, ಭಾನುಪ್ರಕಾಶ್, ಜೀವನ್, ಕರ್ಣ, ಗೂಳಿ ಬ್ರದರ್ಸ್, ಪ್ರೀತಮ್, ಸಂಜು, ದರ್ಶನ್, ಕುಮಾರ್, ಗಿರೀಶ್, ತನುಷ್, ರಾಹುಲ್, ಪುನೀತ್, ಭರತ, ಪ್ರಜ್ವಲ್, ವಿನಯ್ ಸಾಗರ್, ವಿಕಾಸ್, ಪವನ್, ಹೇಮಂತ್, ಸಂತೋಷ್, ದೇವು, ಕುಶಾಲ್ ಹಾಗೂ ಇತರರು ಹೋರಿಗೆ ಜನ್ಮದಿನ ಶುಭಾಷಯ ಹೇಳಿದರು. ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸುತ್ತೇವೆ ಎಂದೂ ಹೇಳಿದರು.- - - -ಹೋರಿ.226.ಜೆಪಿಜಿ: ಭಗವಾನ್-226 ಹೋರಿ.-14ಎಚ್.ಎಲ್.ಐ2.:
ಹೊನ್ನಾಳಿ ತಾಲೂಕು ಗುಡ್ಡೆಹಳ್ಳಿ ಗ್ರಾಮದ ಭಗವಾನ್ ಬಾಯ್ಸ್ ವತಿಯಿಂದ ಭಗವಾನ್-226 ಹೋರಿಯ ಹುಟ್ಟುಹಬ್ಬವನ್ನು ಯುವಕರು, ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು.