ಸಾರಾಂಶ
- ಜೋಡಿಲಿಂಗದಹಳ್ಳಿ ಮೊರಾರ್ಜಿ ಶಾಲೆಯ ಚಿನ್ಮಯ್.ಪಿ.ನಾಯಕ್ 622 ಅಂಕಗಳಿಸಿ ವಲಯಕ್ಕೆ ಅಗ್ರಸ್ಥಾನ
ಕನ್ನಡಪ್ರಭ ವಾರ್ತೆ ಬೀರೂರು2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಬೀರೂರು ಶೈಕ್ಷಣಿಕ ವಲಯಕ್ಕೆ ಶೇ.74 ಫಲಿತಾಂಶ ದೊರೆತಿದ್ದು, ಪರೀಕ್ಷೆ ಬರೆದ 1170ರ ಪೈಕಿ 878 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜೋಡಿಹೋಚಿಹಳ್ಳಿ ಮೊರಾರ್ಜಿ ಶಾಲೆಯ ಚಿನ್ಮಯ್.ಪಿ. ನಾಯಕ್ 622 ಅಂಕಗಳಿಸಿ ವಲಯಲ್ಲಿ ಅಗ್ರಸ್ಥಾನ ಪಡೆದಿದ್ದಾನೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶೇಖರಪ್ಪ ತಿಳಿಸಿದರು.ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು 608ರಲ್ಲಿ 483 ವಿದ್ಯಾರ್ಥಿನಿಯರು (ಶೇ.73.) ಮತ್ತು 614 ಬಾಲಕರಲ್ಲಿ 387 (ಶೇ. 63.17) ಫಲಿತಾಂಶ ಲಭಿಸಿದೆ.ಶೈಕ್ಷಣಿಕ ವಲಯದ 38 ಪ್ರೌಢ ಶಾಲೆಗಳ ಪೈಕಿ ಬೀರೂರಿನ ಕ್ರಮುಕ ಆಂಗ್ಲ ಮಾಧ್ಯಮ ಶಾಲೆ ಶೇ. 100 ಫಲಿತಾಂಶ ಗಳಿಸಿದೆ. ಪರೀಕ್ಷೆಗೆ ಕುಳಿತ 43ವಿದ್ಯಾರ್ಥಿಗಳಲ್ಲಿ 20ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ ಪಡೆದರೆ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆ ಗಳಿಸಿದ್ದಾರೆ. ಇದರಲ್ಲಿ ಗಾನವಿ. ಎಸ್.ವೈ 619ಅಂಕ, ದೀಪಕ್. ಎನ್ 618ಅಂಕ, ದೀಕ್ಷಾ ಎಚ್,ವಿ 617ಅಂಕ, ಬಾನು. ಯು. 614 ಅಂಕ, ಉದಯಚಂದ್ರ .ಜೆ 614ಅಂಕ ಪಡೆದುಕೊಂಡಿದ್ದಾರೆ.ಪಟ್ಟಣದ ಎ.ಎಂ.ಆರ್.ಬಾಲಕಿಯರ ಪ್ರೌಢಶಾಲೆ ಒಟ್ಟು 59 ವಿದ್ಯಾರ್ಥಿಗಳ ಪೈಕಿ 51 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 86.44 ಫಲಿತಾಂಶ ದೊರೆತಿದ್ದು, ಮೌಲ್ಯ.ಒ 616ಅಂಕ, ಗಾನವಿ.ಎಂ.ಬಿ.601 ಅಂಕಗಳಿಸಿದ್ದಾರೆ.ಸತತ ವಿದ್ಯಾಭ್ಯಾಸದಿಂದ ಉತ್ತಮ ಅಂಕ: ಚಿನ್ಮಯ್.ಪಿ.ನಾಯಕ್ಕಡೂರು ತಾಲೂಕಿನ ಕೆರೆಸಂತೆ ಗ್ರಾಮದ ಪ್ರಕಾಶ್ ನಾಯಕ್ ವೃತ್ತಿಯಲ್ಲಿ ವ್ಯವಸಾಯ ಮಾಡಿಕೊಂಡು ಮಗ ಚಿನ್ಮಯ್. ಪಿ.ನಾಯಕ್ ನನ್ನು ಬೀರೂರು ಶೈಕ್ಷಣಿಕ ವಲಯದ ಜೋಡಿಲಿಂಗದಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಸೇರಿಸಿದ್ದಾರೆ. ಅಲ್ಲಿ 6ನೇ ತರಗತಿ ಇಂದಲೂ ಓದಿನ ಕಡೆ ಹೆಚ್ಚು ಶ್ರಮವಹಿಸಿ, ಟಿವಿ, ಮೊಬೈಲ್ ನಂತಹ ವಸ್ತುಗಳಿಂದ ದೂರವಿದ್ದ ಕಾರಣ ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಸಹಾಯವಾಯಿತು ಎನ್ನುತ್ತಾರೆ ತಂದೆ ಪ್ರಕಾಶ್ ನಾಯ್ಕ್.--
ಕೋಟ್--ಪರೀಕ್ಷೆಗೂ 3ತಿಂಗಳ ಮುಂಚೆಯೇ ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಬೆಳಗ್ಗೆ ಬೇಗ ಎಬ್ಬಿಸಿ, ಓದಲು ಹೇಳುತ್ತಿದ್ದರು. ರಾತ್ರಿ 12ಗಂಟೆಯಲ್ಲೂ ಶಿಕ್ಷಕರು ವಿದ್ಯಾರ್ಥಿಗಳ ಜೊತೆಗಿದ್ದು ಕಠಿಣ ಪ್ರಶ್ನೆಗಳ ಬಗ್ಗೆ ಹೆಚ್ಚು ಒತ್ತು ನೀಡಿ ಅಭ್ಯಾಸ ಮಾಡುವಂತೆ ತಿಳಿಸಿದ ಕಾರಣ ನನಗೆ 622 ಅಂಕ ಗಳಿಸಲು ಕಾರಣವಾಯಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಳೆಂದರೆ ಮೂಗು ಮುರಿಯುವ ಪೋಷಕರಿಗೆ ಈ ಅಂಕ ಮಾದರಿಯಾಗಲಿ. ಉತ್ತಮ ಅಂಕ ಪಡೆಯಲು ಶ್ರಮಿಸಿದ ನನ್ನ ಶಾಲೆಯ ಎಲ್ಲಾ ಶಿಕ್ಷಕರಿಗೂ ಧನ್ಯವಾದ . - ಚಿನ್ಮಯ್.ಪಿ.ನಾಯ್ಕ್.
-ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಎಲ್ಲಾ ಪ್ರೌಢಶಾಲೆಗಳಿಗೂ ನಿಯಮಿತ ಭೇಟಿ ಮಾಡಿ, ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳು ಭಯ ಮುಕ್ತವಾಗಿ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ತುಂಬಲಾಗಿತ್ತು. ಎಲ್ಲಾ ಶಾಲೆಗಳಲ್ಲೂ ಪರೀಕ್ಷಾ ಕಾರ್ಯಾಗಾರ ನಡೆಸಲಾಗಿತ್ತು. ವಲಯದ ಎಲ್ಲಾ ಶಿಕ್ಷಕರು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ್ದಾರೆ. ನಮ್ಮ ಇಲಾಖೆಗೆ ವಾಹನ ವ್ಯವಸ್ಥೆ ಇರದಿದ್ದೆ ಫಲಿತಾಂಶ ಕಡಿಮೆಯಾಗಲು ಒಂದು ದೊಡ್ಡ ಕಾರಣ. ಮುಂದಿನ ದಿನಗಳಲ್ಲಾದರೂ ವಾಹನದ ವ್ಯವಸ್ಥೆ ನೀಡಿದರೆ ಶಾಲೆಗಳಿಗೆ ಭೇಟಿ ನೀಡಲು ಮತ್ತು ಫಲಿತಾಂಶ ಹೆಚ್ಚಿಸಲು ಸಹಕಾರವಾಗುತ್ತದೆ. - ಎನ್.ಶೇಖರಪ್ಪ
ಪ್ರಭಾರಿ ಬಿಇಒ2 ಬೀರೂರು 1ಚಿನ್ಮಯ್,ಪಿ.ನಾಯ್ಕ್ 622ಜೋಡಿಲಿಂಗದಹಳ್ಳಿ ಮುರಾರ್ಜಿ ಶಾಲೆ2 ಬೀರೂರು 2ಗಾನವಿ.ಎಸ್.ವಿ. 619ಕ್ರಮುಕ ಪ್ರೌಢ ಶಾಲೆ,ಬೀರೂರು.2 ಬೀರೂರು3ದೀಪಕ್. ಎನ್ 618ಅಂಕ,ಕ್ರಮುಕ ಪ್ರೌಢ ಶಾಲೆ,ಬೀರೂರು 2ಬೀರೂರು 4ದೀಕ್ಷಾ ಹೆಚ್,ವಿ 617ಅಂಕ,ಕ್ರಮುಕ ಪ್ರೌಢ ಶಾಲೆ,ಬೀರೂರು2ಬೀರೂರು5ಬಾನು.ಯು. 614 ಅಂಕ, ಕ್ರಮುಕ ಪ್ರೌಢ ಶಾಲೆ,ಬೀರೂರು 2ಬೀರೂರು 6ಉದಯಚಂದ್ರ .ಜೆ 614ಅಂಕ2ಬೀರೂರು 7ಗಾನವಿ ಎಂ.ಬಿ.ಎ.ಎಂ.ಆರ್.ಪ್ರೌಢಶಾಲೆ,ಬೀರೂರು.2 ಬೀರೂರು 8ಮೌಲ್ಯ.ಒ. 616ಅಂಕಎ.ಎಂ.ಆರ್.ಪ್ರೌಢಶಾಲೆ,ಬೀರೂರು.