ಬಿಟ್‌ ಕಾಯಿನ್‌ ಹಗರಣ: 3ನೇ ಇನ್ಸ್‌ಪೆಕ್ಟರ್‌ ಚಂದ್ರಾಧರ ಅರೆಸ್ಟ್‌

| Published : May 30 2024, 12:49 AM IST

ಬಿಟ್‌ ಕಾಯಿನ್‌ ಹಗರಣ: 3ನೇ ಇನ್ಸ್‌ಪೆಕ್ಟರ್‌ ಚಂದ್ರಾಧರ ಅರೆಸ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಚಾರಣೆ ನೆಪದಲ್ಲಿ ಆರೋಪಿ ಶ್ರೀಕಿಯನ್ನು ಪೊಲೀಸರು ಸಂತೋಷ್‌ ಮಾಲೀಕತ್ವದ ಜಿಸಿಐಡಿ ಟೆಕ್ನಾಲಜಿಸ್‌ ಕಂಪನಿಗೆ ಕರೆದೊಯ್ದು ಕ್ರಿಪ್ಟೋ ವ್ಯಾಲೆಟ್‌ಗಳನ್ನು ಅನಧಿಕೃತವಾಗಿ ಹ್ಯಾಕ್‌ ಮಾಡಿ ಭಾರೀ ಮೌಲ್ಯದ ಬಿಟ್‌ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಹುಕೋಟಿ ಮೌಲ್ಯದ ಬಿಟ್‌ ಕಾಯಿನ್‌ ಹಗರಣದ ತನಿಖೆಗೆ ವೇಗ ನೀಡಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಮತ್ತೊಬ್ಬ ಪೊಲೀಸ್‌ ಇನ್ಸ್‌ಪೆಕ್ಟರ್‌ನನ್ನು ಬಂಧಿಸಿದೆ.

ಬಂಧಿತ ಇನ್ಸ್‌ಪೆಕ್ಟರ್ ಚಂದ್ರಾಧರ ಈ ಹಿಂದೆ ಯಲಹಂಕದ ಪೊಲೀಸ್‌ ತರಬೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಟ್‌ ಕಾಯಿನ್‌ ಹಗರಣದಲ್ಲಿ ಇವರು ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿದ್ದರು. ಪ್ರಕರಣದಲ್ಲಿ ಚಂದ್ರಾಧರ್‌ ಪಾತ್ರ ಇರುವ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ್ದ ಎಸ್‌ಐಟಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಯ ಅಗತ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಬಿಟ್‌ ಕಾಯಿನ್‌ ಸಂಬಂಧ 2020ರಲ್ಲಿ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ವೇಳೆ ಸಿಸಿಬಿಯ ಅಂದಿನ ತನಿಖಾಧಿಕಾರಿಗಳಾಗಿದ್ದ ಇನ್ಸ್‌ಪೆಕ್ಟರ್‌ ಲಕ್ಷ್ಮೀಕಾಂತಯ್ಯ, ಶ್ರೀಧರ್‌ ಪೂಜಾರ್‌, ಪ್ರಶಾಂತ್‌ ಬಾಬು ಹಾಗೂ ಸೈಬರ್‌ ಠಾಣೆ ಇನ್ಸ್‌ಪೆಕ್ಟರ್‌ ಚಂದ್ರಾಧರ್‌ ಅವರು ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ, ರಾಬಿನ್‌ ಖಂಡೇವಾಲಾ, ಸಂತೋಷ್‌ ಎಂಬುವವರನ್ನು ಬಂಧಿಸಿದ್ದರು.

ಅಲ್ಲದೆ, ವಿವಿಧ ವೆಬ್‌ ಸೈಟ್‌ಗಳನ್ನು ಹ್ಯಾಕ್ ಮಾಡಿಸಿ ಲಕ್ಷಾಂತರ ರು. ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ಜತೆಗೆ ಈ ಪ್ರಕರಣ ಸಂಬಂಧ ಡಿಜಿಟಲ್‌ ಸಾಕ್ಷ್ಯಗಳನ್ನು ತಿರುಚಿದ ಹಾಗೂ ನಾಶಪಡಿಸಿದ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಎಸ್‌ಐಟಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಅಕ್ರಮ ಹ್ಯಾಕ್‌, ಸಾಕ್ಷ್ಯ ನಾಶದ ಆರೋಪ:

ವಿಚಾರಣೆ ನೆಪದಲ್ಲಿ ಆರೋಪಿ ಶ್ರೀಕಿಯನ್ನು ಪೊಲೀಸರು ಸಂತೋಷ್‌ ಮಾಲೀಕತ್ವದ ಜಿಸಿಐಡಿ ಟೆಕ್ನಾಲಜಿಸ್‌ ಕಂಪನಿಗೆ ಕರೆದೊಯ್ದು ಕ್ರಿಪ್ಟೋ ವ್ಯಾಲೆಟ್‌ಗಳನ್ನು ಅನಧಿಕೃತವಾಗಿ ಹ್ಯಾಕ್‌ ಮಾಡಿ ಭಾರೀ ಮೌಲ್ಯದ ಬಿಟ್‌ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದರು. ಅಲ್ಲದೆ, ವಿವಿಧ ವೆಬ್‌ ಸೈಟ್‌ಗಳನ್ನು ಹ್ಯಾಕ್ ಮಾಡಿಸಿ ಲಕ್ಷಾಂತರ ರು. ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು. ಜತೆಗೆ ಈ ಪ್ರಕರಣ ಸಂಬಂಧ ಡಿಜಿಟಲ್‌ ಸಾಕ್ಷ್ಯಗಳನ್ನು ತಿರುಚಿದ ಹಾಗೂ ನಾಶಪಡಿಸಿದ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಎಸ್‌ಐಟಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್‌ ಚಂದ್ರಾಧರ ಬಂಧನದೊಂದಿಗೆ ಈವರೆಗೆ ಇನ್ಸ್‌ಪೆಕ್ಟರ್‌ಗಳಾದ ಸಂತೋಷ್ ಬಾಬು, ಲಕ್ಷ್ಮೀಕಾಂತಯ್ಯ ಸೇರಿ ಆರು ಮಂದಿ ಆರೋಪಿಗಳನ್ನು ಎಸ್‌ಐಟಿ ಬಂಧಿಸಿದಂತಾಗಿದೆ.

ಪೊಲೀಸರ ಕಳ್ಳಾಟ!2020ರಲ್ಲಿ ಖಾಸಗಿ ಕಂಪನಿಯೊಂದು ನೀಡಿದ್ದ ಕ್ರಿಪ್ಟೋಕರೆನ್ಸಿ ಕಳವಿನ ದೂರಿನ ಅನ್ವಯ ಕೇಸ್‌ನಲ್ಲಿ ಹ್ಯಾಕರ್‌ ಶ್ರೀಕಿ ಎಂಬುವನನ್ನು ಬಂಧಿಸಿದ್ದ ಪೊಲೀಸರು, ಬಳಿಕ ಶ್ರೀಕಿ ಮೂಲಕವೇ ಬೇರೆ ಬೇರೆ ವೆಬ್‌ಸೈಟ್‌ ಹ್ಯಾಕ್‌ ಮಾಡಿಸಿ ಕ್ರಿಪ್ಟೋಕರೆನ್ಸಿಗಳನ್ನು ಕದ್ದಿದ್ದ ಪೊಲೀಸರು ಕಳ್ಳಾಟ ನಡೆಸಿರುವುದು ಬಯಲಿಗೆ ಬಂದಿದೆ.