ಸ್ವಾತಂತ್ರ್ಯ ಹೋರಾಟಕ್ಕಾಗಿ ಆರಂಭವಾದ ಕಾಂಗ್ರೆಸ್, ಈಗ ಭದ್ರತೆಗೆ ಅಪಾಯಕಾರಿಯಾದ ತುಕ್ಡೆ ಗ್ಯಾಂಗ್ ಜೊತೆ ಸೇರಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಠಿಸುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ, ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್ ಆರೋಪಿಸಿದರು.
ಉಡುಪಿ : ಸ್ವಾತಂತ್ರ್ಯ ಹೋರಾಟಕ್ಕಾಗಿ ಆರಂಭವಾದ ಕಾಂಗ್ರೆಸ್, ಈಗ ಭದ್ರತೆಗೆ ಅಪಾಯಕಾರಿಯಾದ ತುಕ್ಡೆ ಗ್ಯಾಂಗ್ ಜೊತೆ ಸೇರಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಠಿಸುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ, ವಿಧಾನ ಪರಿಷತ್ ಸದಸ್ಯ ಕೆ. ಎಸ್. ನವೀನ್ ಆರೋಪಿಸಿದರು.ಶುಕ್ರವಾಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಜಾತಂತ್ರ ಉಳಿಸಿ, ಅರಾಜಕತೆ ಅಳಿಸಿ ಎನ್ನುವ ಅಭಿಯಾನವನ್ನು ದೇಶದಾದ್ಯಂತ ನ. 1ರಿಂದ 30ರವರೆಗೆ ಪ್ರತಿ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಇದರಲ್ಲಿ ಸಮಾಜದ ವಿವಿಧ ಕ್ಷೇತ್ರದ ಪ್ರಮುಖರ ಜೊತೆ ಪಾದಯಾತ್ರೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಪತ್ರಕರ್ತರು, ವಕೀಲರು ಮುಂತಾದವರೊಂದಿಗೆ ಪ್ರಬುದ್ಧರ ಗೋಷ್ಠಿ, ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆ, ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ವರದಿ - ಲೇಖನಗಳ ಪ್ರಕಟಣೆ, ದೇಶಭಕ್ತ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಾಗೋಷ್ಠಿಗಳನ್ನು ನಡೆಸಲಾಗುತ್ತಿದೆ ಎಂದರು.ಭಯೋತ್ಪಾದಕರ, ದೇಶದ್ರೋಹಿಗಳ ಸಂಘಟನೆಗಳನ್ನು ಸೇರಿಸಿಕೊಂಡಾದರೂ ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ದೇಶಕ್ಕೆ ಕಂಟಕವಾಗುವ ಈ ಪ್ರಯತ್ನ ಸಫಲವಾಗಲು ಬಿಜೆಪಿ ಬಿಡುವುದಿಲ್ಲ ಎಂದವರು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಶ್ರೀಕಾಂತ ನಾಯಕ್, ರೇಶ್ಮ ಉದಯ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚ ಪ್ರ.ಕಾರ್ಯದರ್ಶಿ ಶಿಲ್ಪ ಸುವರ್ಣ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಆರ್ಥಿಕ ಪ್ರಕೋಷ್ಠ ಸಂಚಾಲಕ ದಿವಾಕರ ಕಲ್ಯಾ, ಜಿಲ್ಲಾ ವಕ್ತಾರ ಶಶಾಂಕ್ ಶಿವತ್ತಾಯ ಮುಂತಾದವರಿದ್ದರು.ಹೀಗೆ ಹಾಲಿನ ದರ ಏರಿಕೆ ಒಪ್ಪುವುದಿಲ್ಲ: ರಾಜ್ಯ ಸರ್ಕಾರ ಈ ರೀತಿ ಹಾಲಿನ ದರವನ್ನು ಏರಿಸಿರುವುದನ್ನು ಬಿಜೆಪಿ ಒಪ್ಪುವುದಿಲ್ಲ, ಏರಿಸಿದ ಎಲ್ಲಾ 8 ರು.ಗಳನ್ನು ಹೈನುಗಾರರಿಗೇ ನೀಡಬೇಕು, ಅವರಿಗೆ ನಾಲ್ಕೈದು ತಿಂಗಳಿಂದ ಬಾಕಿ ಇರುವ ಪ್ರೋತ್ಸಾಹಧನವನ್ನು ತಕ್ಷಣ ನೀಡಬೇಕು, ಆದರೆ ಸರ್ಕಾರದ ಬಳಿ ಹಣ ಇಲ್ಲ, ಅದಕ್ಕೆ ಹಾಲಿನ ಗ್ರಾಹಕರಿಂದ ಹಣ ಪಡೆದು ಅದನ್ನು ಹೈನುಗಾರರಿಗೆ ನೀಡುತಿದ್ದಾರೆ ಎಂದು ಕೆ. ಎಸ್. ನವೀನ್ ಹೇಳಿದರು.
ಸಿದ್ದರಾಮಯ್ಯ ಬಗ್ಗೆ ಬೇಸರವಾಗುತ್ತದೆ: ಕಾಂಗ್ರೆಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಚ್ ಹಾಕಿದರೆ ರಾತ್ರಿ ಬೆಳಗಾಗುವುದರೊಳಗೆ ಆರೆಸ್ಟ್ ಮಾಡಿ ಒಳಗೆ ಹಾಕುತ್ತಾರೆ, ಸ್ಟಿಂಗ್ ಆಪರೇಶನ್ ಬಗ್ಗೆ ಸಿದ್ದರಾಮಯ್ಯ ದೂರು ನೀಡಿ 25 ದಿನ ಆಯ್ತು, ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಸಿದ್ದರಾಮಯ್ಯ ಅವರ ಬಗ್ಗೆ ಬೇಸರವಾಗುತ್ತದೆ, ಇದು ಕಾಂಗ್ರೆಸ್ ಜಾಯಮಾನ ತೋರಿಸುತ್ತಿದೆ ಎಂದವರು ಟೀಕಿಸಿದರು.