ಒಗ್ಗಟ್ಟಿನಿಂದ ಮಾತ್ರ ಬಿಜೆಪಿ ಸೋಲಿಸಬಹುದು

| Published : Apr 15 2024, 01:19 AM IST

ಸಾರಾಂಶ

ಲೋಕಾಪುರ: ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ೨೦೦೪ರಿಂದ ಇಲ್ಲಿಯವರೆಗೆ ಕಾಂಗ್ರೆಸ್‌ ಸತತ ನಾಲ್ಕು ಬಾರಿ ಸೋತಿದೆ. ಈ ಸೋಲು ಮೆಟ್ಟಿ ನಿಲ್ಲಬೇಕಾದರೆ ನನ್ನ ಒಬ್ಬನಿಂದ ಸಾಧ್ಯವಿಲ್ಲ. ಎಲ್ಲಿಯವರೆಗೂ ತಾವೆಲ್ಲೂರು ಕೈಜೋಡಿಸಲು ಸಾಧ್ಯವಿಲ್ಲವೋ, ಅಲ್ಲಿಯವರೆಗೂ ಗೆಲುವು ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ಬಿಜೆಪಿ ಸೋಲಿಸಬಹುದು. ಈ ಬಾರಿ ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರರಷ್ಟು ಗೆಲುವಿನ ನಗೆ ಬಿರುವ ಭರವಸೆ ಮೂಡಿದೆ ಎಂದು ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ೨೦೦೪ರಿಂದ ಇಲ್ಲಿಯವರೆಗೆ ಕಾಂಗ್ರೆಸ್‌ ಸತತ ನಾಲ್ಕು ಬಾರಿ ಸೋತಿದೆ. ಈ ಸೋಲು ಮೆಟ್ಟಿ ನಿಲ್ಲಬೇಕಾದರೆ ನನ್ನ ಒಬ್ಬನಿಂದ ಸಾಧ್ಯವಿಲ್ಲ. ಎಲ್ಲಿಯವರೆಗೂ ತಾವೆಲ್ಲೂರು ಕೈಜೋಡಿಸಲು ಸಾಧ್ಯವಿಲ್ಲವೋ, ಅಲ್ಲಿಯವರೆಗೂ ಗೆಲುವು ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ಬಿಜೆಪಿ ಸೋಲಿಸಬಹುದು. ಈ ಬಾರಿ ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರರಷ್ಟು ಗೆಲುವಿನ ನಗೆ ಬಿರುವ ಭರವಸೆ ಮೂಡಿದೆ ಎಂದು ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಮುಖಂಡ ಕಾಶಿನಾಥ ಹುಡೇದ ಅವರ ನಿವಾಸದಲ್ಲಿ ಕಾಂಗ್ರೆಸ್‌ ಪಕ್ಷದ ಆಭ್ಯರ್ಥಿ ಸಂಯುಕ್ತಾ ಪಾಟೀಲ ಪರವಾಗಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಬೇಕು. ಕೆಲವೊಂದು ಸಮಸ್ಯೆಗಳನ್ನು ಕುಳಿತು ಮಾತನಾಡಿ ಬಗೆಹರಿಸಿ ಅಭ್ಯರ್ಥಿ ಗೆಲವಿಗೆ ಎಲ್ಲರೂ ಪಣತೊಡಬೇಕು. ಅಂದಾಗ ಮಾತ್ರ ಸಂಯುಕ್ತಾ ಪಾಟೀಲ ಗೆಲವು ಸಾಧಿಸಲು ಸಾಧ್ಯ. ಪ್ರತಿಯೊಂದು ಕ್ಷೇತ್ರದಲ್ಲಿ ಸಮಸ್ಯೆ ಇದ್ದಿದ್ದೆ. ಆ ಸಮಸ್ಯೆಯನ್ನು ಮೆಟ್ಟಿ ನಿಂತರೇ ಮಾತ್ರ ಅದನ್ನು ಎದುರಿಸಲು ಸಾಧ್ಯ ಎಂದು ಹೇಳಿದರು.

ನನ್ನ ರಾಜಕೀಯ ಜೀವನದಲ್ಲಿ ಈ ಮಟ್ಟಕ್ಕೆ ಬೆಳೆಯಲು ದಿ. ರಾಮಕೃಷ್ಣ ಹೆಗಡೆ ಕಾರಣ. ನನಗೆ ಒಂದು ಕ್ಷೇತ್ರದಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬೇರೆ ಕ್ಷೇತ್ರಕ್ಕೆ ನನ್ನ ನಿಲ್ಲಿಸಿ ವಿಜಯಶಾಲಿಯಾಗಿ ಮಾಡಿದ್ದು ರಾಮಕೃಷ್ಣ ಹೆಗಡೆ. ನಾಯಕತ್ವದ ಅರಿವು ಎಲ್ಲರಿಗೂ ಬೇಕು. ಹಾಗೆ ಕಾಶಿನಾಥ ಹುಡೇದ ಬೆಂಬಲಿಗರ, ಕಾರ್ಯಕರ್ತರ ಜವಾಬ್ದಾರಿ ನನ್ನ ಜವಾಬ್ದಾರಿ. ಯಾರು ಧೈರ್ಯ ಕಳೆದುಕೊಳ್ಳಬೇಡಿ. ಎಲ್ಲರೂ ಒಕ್ಕಟ್ಟಾಗಿ ಕೆಲಸ ಮಾಡಿದರೆ ಗೆಲವು ಸಾಧ್ಯ. ನಾಲ್ಕು ಬಾರಿ ಗೆದ್ದ ಬಿಜೆಪಿ ಅಭ್ಯರ್ಥಿಯ ಈ ಕ್ಷೇತ್ರದ ಕೊಡುಗೆ ಶೂನ್ಯ ಎಂಬ ವಿಚಾರ ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದರು.

ಇಡೀ ದೇಶದಲ್ಲಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕ ಮೊದಲು. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಗಾಲದ ಪರಿಹಾರ ನೀಡಲಿಲ್ಲ. ನಮ್ಮ ಪಾಲಿನ ಜಿಎಸ್‌ಟಿ ಪಾಲು ಸರಿಯಾಗಿ ನೀಡದೆ ಮಲತಾಯಿ ಧೋರಣೆ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ನಯಾ ಪೈಸಾ ನೀಡುತ್ತಿಲ್ಲ. ಸುಪ್ರೀಂ ಕೋರ್ಟಿಗೆ ಮನವಿ ನೀಡಿ ಕರ್ನಾಟಕ ಸರ್ಕಾರಕ್ಕೆ ಬರಬೇಕಾದ ಹಣ ನೀಡಲು ಒತ್ತಾಯಿಸಿದರು. ಇದರಿಂದ ಮೋದಿಯವರು ನೋಟಿಸ್ ಕಳುಹಿಸಬೇಡಿ ಕರ್ನಾಟಕಕ್ಕೆ ಕೊಡಬೇಕಾದ ಹಣ ನೀಡುತ್ತೇವೆ ಎಂದು ಕೋರ್ಟಿಗೆ ತಿಳಿಸಿದ್ದಾರೆ. ಇಂತಹ ಸಿದ್ದರಾಮಯ್ಯನವರಂತಹ ಮುಖ್ಯಮಂತ್ರಿಗಳನ್ನು ಪಡೆದ ನಾವೇ ಅದೃಷ್ಠವಂತರು ಎಂದರು.

ಕಾಂಗ್ರೆಸ್‌ ಮುಖಂಡ ಕಾಶಿನಾಥ ಹುಡೇದ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಸಂಯುಕ್ತಾ ಪಾಟೀಲ ಅವರನ್ನು ಅಧಿಕ ಮತಗಳಿಂದ ತರುವುದೇ ನಮ್ಮೆಲ್ಲರ ಗುರಿ. ಈ ಗುರಿ ಸಾಧಿಸಲು ಇಂದಿನಿಂದಲೇ ಕೆಲಸ ಪ್ರಾರಂಭಿಸೋಣ ಎಂದು ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಮನವಿ ಮಾಡಿದರು.

ಈ ವೇಳೆ ಸಚಿವ ಶಿವಾನಂದ ಪಾಟೀಲರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕಾಂಗ್ರೆಸ್‌ ಮುಖಂಡ ಮಂಜು ಮಂಟೂರ, ಸಂಗಪ್ಪ ಒಡೆಯರ, ರಮೇಶ ಕುಂಬಾರ, ದ್ಯಾವಪ್ಪ ನಾಯ್ಕ, ಶೆಟ್ಟೆಪ್ಪ ಮಾಳಿ, ಹಸನ ಡಂಗಿ, ಭೀಮಪ್ಪ ಬಿದರಿ, ಹಣಮಂತ ಪೂಜಾರ, ಲಕ್ಕಪ್ಪ ಹಂಚಿನಾಳ, ಸಿದ್ದು ಹೂಗಾರ ಅಪಾರ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು. ಕೋಟ್..

ಕಾಂಗ್ರೆಸ್‌ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಬೇಕು. ಕೆಲವೊಂದು ಸಮಸ್ಯೆಗಳನ್ನು ಕುಳಿತು ಮಾತನಾಡಿ ಬಗೆಹರಿಸಿ ಅಭ್ಯರ್ಥಿ ಗೆಲವಿಗೆ ಎಲ್ಲರೂ ಪಣತೊಡಬೇಕು. ಅಂದಾಗ ಮಾತ್ರ ಸಂಯುಕ್ತಾ ಪಾಟೀಲ ಗೆಲವು ಸಾಧಿಸಲು ಸಾಧ್ಯ. ಪ್ರತಿಯೊಂದು ಕ್ಷೇತ್ರದಲ್ಲಿ ಸಮಸ್ಯೆ ಇದ್ದಿದ್ದೆ. ಆ ಸಮಸ್ಯೆಯನ್ನು ಮೆಟ್ಟಿ ನಿಂತರೇ ಮಾತ್ರ ಅದನ್ನು ಎದುರಿಸಲು ಸಾಧ್ಯ.

ಶಿವಾನಂದ ಪಾಟೀಲ. ಸಚಿವ --