ಸಾರಾಂಶ
ಕಲಬುರಗಿ : ಇಲ್ಲಿನ ಲೋಕಸಭೆ ಬಿಜೆಪಿ ಹುರಿಯಾಳು ಡಾ. ಉಮೇಶ ಜಾಧವ್ ಇಂದು ಪಿಎಸ್‌ಐ ಹಗರಣದ ಆರೋಪಿ ಆರ್‌ಡಿ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಅಲ್ಲಿ ಅವರ ಸಹೋದರ ಮಹಾಂತೇಶ ಪಾಟೀಲರನ್ನು ಕಂಡು ಅವರೊಂದಿಗೆ ಬೆಳಗಿನ ಉಪಹಾರ ಸೇವನೆ ಮಾಡಿ ಮತ ಯಾಚಿಸಿ ಬೆಂಬಲ ಕೋರಿದ್ದಾರೆ.
ಡಾ. ಜಾಧವ್ ಅವರ ಈ ಭೇಟಿ ವಿವಾದಕ್ಕೆ ಕಾರಣವಾಗಿದೆ. ಹಗರಣದ ಆರೋಪಗಳನ್ನು ಹೊತ್ತಿರುವ ಆರ್‌ಡಿ ಪಾಟೀಲ್ ಜೈಲಲ್ಲಿದ್ದಾನೆ, ಅವರ ಹಿರಿ ಸಹೋದರ ಮಹಂತೇಶ ಪಾಟೀಲ ಕೂಡಾ ಹಗರಣದಲ್ಲಿ ಆರೋಪ ಹೊತ್ತು ಜೈಲು ಸೇರಿದ್ದರು. ಇದೀಗ ಡಾ. ದಜಾಧವ್ ಬುಧವಾರ ಬೆಳಗ್ಗೆ ಪಾಟೀಲರ ಮನೆಗೆ ಹೋಗಿ ಕೈ ಕುಲುಕಿ ಬೆಂಬಲ ಕೋರಿರಿರುವ ಫೋಟೋಗಳು, ವಿಡಿಯೋ ಸಾಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.
ಅಸೆಂಬ್ಲಿ ಚುನಾವಣೆಯಲ್ಲಿ ರ್ ಡಿ ಪಾಟೀಲ್ ಅಫಜಲ್ಪುರದಿಂದ ಕಣಕ್ಕಿಳಿದಿದ್ದರು. ಇದೀಗ ಜಾಧವ ಅವರು ಪಾಟೀಲ ಕುಟುಂಬದ ಬೆಂಬಲ ಕೋರಿರೋದು ಬಿಸಿ ಚರ್ಚೆಗೆ ಮುನ್ನುಡಿ ಬರೆದಿದೆ. ಹಗರಣದಲ್ಲಿ ಸಿಲುಕಿರುವ ಕುಟುಂಬದವರೊಂದಿಗೆ ಡಾ. ಜಾಧವ್ ಬೆಂಬಲ ಕೋರಬೇಕಿತ್ತು? ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಕಿಸುತ್ತಿದ್ದಾರೆ.