ಸಾರಾಂಶ
ಬಳ್ಳಾರಿ : ಸಂಡೂರು ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರ ಒಟ್ಟು ಆಸ್ತಿ ಮೌಲ್ಯ ₹18.58 ಕೋಟಿ.
ಇವರ ಬಳಿ ₹5 ಲಕ್ಷ ನಗದು ಇದೆ. ₹24.30 ಲಕ್ಷ ಮೌಲ್ಯದ ಫಾರ್ಚುನರ್ ಕಾರಿದೆ. ₹42 ಲಕ್ಷ ಮೌಲ್ಯದ ಜೆಸಿಬಿ, ₹7.50 ಲಕ್ಷ ಮೌಲ್ಯದ ಟ್ರ್ಯಾಕ್ಟರ್, ₹1.75 ಲಕ್ಷ ಮೌಲ್ಯದ ಬುಲೆಟ್ ಬೈಕ್‌ಗಳು ಇವೆ. ಇವರು ₹2 ಕೋಟಿ ಮೌಲ್ಯದ 2.5 ಕೆಜಿ ಬಂಗಾರ ಹಾಗೂ ₹20 ಲಕ್ಷ ಮೌಲ್ಯದ 25 ಕೆಜಿ ಬೆಳ್ಳಿಯೊಡೆಯರಾಗಿದ್ದಾರೆ. ಜೊತೆಗೆ, ₹2.54 ಕೋಟಿ ಸಾಲ ಮಾಡಿಕೊಂಡಿದ್ದಾರೆ.
ಮಂಗಳೂರಿನಲ್ಲಿ 1 ಕೋಟಿ ರು.ಮೌಲ್ಯದ ರೆಸಾರ್ಟ್ ಹೊಂದಿದ್ದಾರೆ. ಇವರು 54.11 ಎಕರೆ ಕೃಷಿ ಭೂಮಿಯಿದ್ದು, ಇದರ ಮೌಲ್ಯ ₹4 ಕೋಟಿ. ಜೊತೆಗೆ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿಯಲ್ಲಿ ಒಟ್ಟು 34 ವಸತಿ ಕಟ್ಟಡಗಳಿದ್ದು, ಇವುಗಳ ಒಟ್ಟು ಮೌಲ್ಯ ₹11 ಕೋಟಿ.
ಪತ್ನಿ ಬಳಿಯಿದೆ ಅರ್ಧ ಕೆಜಿ ಬಂಗಾರ:
ಬಂಗಾರು ಹನುಮಂತು ಪತ್ನಿ ರೂಪಾಶ್ರೀ ಬಳಿ ₹40 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣಗಳಿವೆ. ₹12 ಲಕ್ಷ ಮೌಲ್ಯದ 15 ಕೆಜಿಯಷ್ಟು ಬೆಳ್ಳಿಯ ವಸ್ತುಗಳಿವೆ. ದಾನವಾಗಿ ಬಂದಿರುವ 27.27 ಎಕರೆ ಕೃಷಿ ಭೂಮಿಯಿದೆ. ಇವರ ಹೆಸರಿನಲ್ಲಿ 11 ಕಟ್ಟಡಗಳಿದ್ದು, ಇವುಗಳ ಮೌಲ್ಯ ₹2.56 ಕೋಟಿ. ಇನ್ನು, ₹1.35 ಕೋಟಿ ಸಾಲ ಮಾಡಿಕೊಂಡಿದ್ದಾರೆ.