ಅಕ್ರಮವಾಗಿ ರೆಸಾರ್ಟ್ ಕಟ್ಟಡ ನಿರ್ಮಾಣ ಪೊಲೀಸರಿಗೆ ದೂರು
Jan 02 2025, 12:32 AM ISTಶ್ರೀರಂಗಪಟ್ಟಣದ ಹೊರವಲಯದ ಚಂದ್ರವನ ಆಶ್ರಮದ ಬಳಿ ಕಾವೇರಿ ನದಿ ತೀರ ಪ್ರದೇಶದಲ್ಲಿ ಕಾನೂನು ಬಾಹಿರ, ಅಕ್ರಮವಾಗಿ ಪರಿಸರಕ್ಕೆ ಧಕ್ಕೆ ಉಂಟಾಗುವ ರೀತಿ ರಿವರ್ ರಿಂಚ್ ರೆಸಾರ್ಟ್ ಕಟ್ಟಡ ನಿರ್ಮಿಸಲಾಗುತ್ತಿದೆ. ಪರಿಸರ ಮಾಲಿನ್ಯಕ್ಕೆ ಧಕ್ಕೆ ಉಂಟಾಗಿ, ರಾತ್ರಿ ವೇಳೆಯಲ್ಲಿ ನದಿ ತೀರದಲ್ಲಿ ಡಿ.ಜೆ. ಪಾರ್ಟಿಗಳ ನಡೆಸಿ ತ್ಯಾಜ್ಯಗಳ ನದಿಗೆ ಬಿಟ್ಟು ಪರಿಸರ ಹಾಳು ಮಾಡುತ್ತಿದ್ದಾರೆ.