ಸಿ.ಟಿ.ರವಿಗೆ ಜಾಮೀನು ಸಿಕ್ಕಿದಕ್ಕಾಗಿ ಬಿಜೆಪಿ ಸಂಭ್ರಮಾಚರಣೆ

| Published : Dec 21 2024, 01:15 AM IST

ಸಿ.ಟಿ.ರವಿಗೆ ಜಾಮೀನು ಸಿಕ್ಕಿದಕ್ಕಾಗಿ ಬಿಜೆಪಿ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ಆರೋಪದಡಿ ಬಂಧಿತರಾಗಿದ್ದ ವಿಪ ಸದಸ್ಯ ಸಿ.ಟಿ. ರವಿ ಅವರಿಗೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ದೊರೆತ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿ ಶುಕ್ರವಾರ ಸಂಜೆ ಪಕ್ಷದ ಮುಖಂಡರು, ಕಾರ್ಯಕರ್ತರು ಜಿಪಂ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಬೆಳಗಾವಿಯಿಂದ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದ್ದ ಸಿ.ಟಿ.ರವಿ ಮಧ್ಯಂತರ ಜಾಮೀನು ಆದೇಶದ ಪ್ರತಿ ಕೈಗೆ ಸಿಗುತ್ತಿದ್ದಂತೆ ಇಲ್ಲಿನ ಸರ್ಕ್ಯೂಟ್ ಹೌಸ್ ಬಳಿ ಬೆಳಗಾವಿ ಪೊಲೀಸರು ಶುಕ್ರವಾರ ಸಂಜೆ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತರ ಸಮಕ್ಷಮ ಬಿಡುಗಡೆ ಪ್ರಕ್ರಿಯೆ ಪೂರೈಸಿದರು.

ಪಕ್ಷದ ಮುಖಂಡರು, ಕಾರ್ಯಕರ್ತರು ಜೈಕಾರ ಕೂಗಿ, ಸಂಭ್ರಮಿಸಿದರು. ನಂತರ ಸಿ.ಟಿ.ರವಿ ಸುದ್ದಿಗೋಷ್ಟಿಯಲ್ಲಿ ಭಾಗಿಯಾದರು.

- - - -20ಕೆಡಿವಿಜಿ17, 18: