ಸಾರಾಂಶ
ಚಿಕ್ಕಮಗಳೂರು, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅತಿಹೆಚ್ಚು ಸ್ಥಾನ ಪಡೆದು ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅತಿಹೆಚ್ಚು ಸ್ಥಾನ ಪಡೆದು ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ವಿ.ಪಕ್ಷದ ಮುಖಂಡರುಗಳು ಮತಗಳ್ಳತನ ಹಾಗೂ ಹಣದ ಆಮಿಷವನ್ನೇ ಹರಿಸಿದರೂ, ಕೊನೆಗೂ ಮತದಾರರು ಆಮಿಷಕ್ಕೆ ಒಳಗಾ ಗದೇ ಎನ್‌ಡಿಎಗೆ ಸಂಪೂರ್ಣವಾಗಿ ಬೆಂಬಲಿಸಿ ಗೆಲುವನ್ನು ತಂದುಕೊಟ್ಟಿದ್ದಾರೆ ಎಂದರು.ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಭಾಗಿ ಯಾಗಿ ನೂರರ ಗೆಲುವು ಸಾಧಿಸಿದೆ. ಆದರೆ ರಾಹುಲ್‌ಗಾಂಧಿ ನೇತೃತ್ವದ ನಡೆದ ಚುನಾವಣೆಗಳಲ್ಲಿ ಸಂಪೂರ್ಣವಾಗಿ ಠೇವಣಿ ಕಳೆದುಕೊಂಡು ಸತತ ನೂರನೇ ಸೋಲಿಗೆ ಕಾರಣವಾಗಿದೆ ಎಂದು ಟೀಕಿಸಿದರು.ಇವಿಎಂ ಹ್ಯಾಕ್, ಮತಗಳ್ಳತನ ಎಂಬ ಸುಳ್ಳು ಸುದ್ದಿ ಹರಡುವ ಮೂಲಕವೇ ಜನರನ್ನು ದಿಕ್ಕುತಪ್ಪಿಸಲು ಯತ್ನಿಸಿದ ವಿ.ಪಕ್ಷದ ನಾಯಕರಿಗೆ ಬಿಹಾರ ರಾಜ್ಯದ ಮತದಾರರು ಎನ್‌ಡಿಗೆ ಬೆಂಬಲಿಸಿ ತಕ್ಕಉತ್ತರ ನೀಡಿದೆ. ಈ ತೀರ್ಪನ್ನು ಕಾಂಗ್ರೆಸ್ ಎಚ್ಚೆತ್ತು ಕೊಂಡು ಜನಸಾಮಾನ್ಯರ ನಡುವೆ ಅನುಕೂಲವಾಗುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಬಿಹಾರ ಚುನಾವಣೆಯಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡ, ಗೃಹ ಸಚಿವ ಅಮತ್‌ಶಾ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಗೆ ಜಿಲ್ಲಾ ಬಿಜೆಪಿ ಕಾರ್ಯಕರ್ತರು ತುಂಬು ಹೃದಯ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಮಾತನಾಡಿ ಕೇಂದ್ರದ ಮೋದಿ ಸರ್ಕಾರ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಸಾಧನೆಗಳೇ, ಈ ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಅತ್ಯಧಿಕ ಸ್ಥಾನ ಗಳಿಸಲು ಸಾಧ್ಯವಾಗಿದ್ದು, ಮುಂದೆ ಕರ್ನಾಟಕ ದಲ್ಲೂ ಜನತೆ ದೊಡ್ಡ ಬದಲಾವಣೆ ತಂದು ಬಿಜೆಪಿ ಗೆಲುವಿಗ ದೊಡ್ಡ ಕ್ರಾಂತಿ ಮಾಡಲಿದ್ದಾರೆ ಎಂದರು.ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ ಎನ್‌ಡಿಎ ನೇತೃತ್ವದ ಪಕ್ಷ ದೇಶದ ಎಲ್ಲಾ ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದೆ. ಇದಕ್ಕೆ ಅಂದಿನ ಸರ್ಕಾರದಲ್ಲಿ ನಡೆದ ದುರಾಡಳಿತವೇ ನೇರ ಕಾರಣ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ನಾರಾಯಣಗೌಡ, ವಕ್ತಾರ ಪುಟ್ಟಸ್ವಾಮಿ, ಕಾರ್ಯದರ್ಶಿ ಅರುಣ್, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರಾಧ್ಯಕ್ಷ ಜೀವನ್, ಮಾದ್ಯಮ ಪ್ರಮುಖ್ ದಿನೇಶ್, ಮುಖಂಡರಾದ ಹಂಪಯ್ಯ, ಕೌಶಿಕ್, ಎಚ್.ಕೆ.ಕೇಶವಮೂರ್ತಿ, ರೇವನಾಥ್, ಸೋಮಶೇಖರ್, ಸೀತರಾಮ ಭರಣ್ಯ ಇದ್ದರು.;Resize=(128,128))
;Resize=(128,128))
;Resize=(128,128))