ಚಿಕ್ಕಮಗಳೂರುಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಅನುದಾನ ಮಂಜೂರಾತಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆದಿದ್ದು, ನಡು ರಸ್ತೆಯಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯ ಕರ್ತರು ಕೈ ಕೈ ಮಿಲಾಯಿಸಿದ ಘಟನೆ ಗುರುವಾರ ನಡೆದಿದೆ.
ಕಾಮಗಾರಿಗೆ ಅನುದಾನ ಮಂಜೂರಾತಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಅನುದಾನ ಮಂಜೂರಾತಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆದಿದ್ದು, ನಡು ರಸ್ತೆಯಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯ ಕರ್ತರು ಕೈ ಕೈ ಮಿಲಾಯಿಸಿದ ಘಟನೆ ಗುರುವಾರ ನಡೆದಿದೆ.
ನಗರದ ಹೊರವಲಯದ ರಾಂಪುರದ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾರವಾಗಿ ಶಾಸಕ ಎಚ್.ಡಿ.ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನಡುವೆ ಜಟಾಪಟಿ ನಡೆಯುತ್ತಿದೆ. ಒಂದೆರಡು ದಿನಗಳ ಹಿಂದೆ ಶಾಸಕ ಎಚ್.ಡಿ.ತಮ್ಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಳಿಕ ಗುರುವಾರ ಕಾಮಗಾರಿ ವೀಕ್ಷಣೆಗೆ ಸಿ.ಟಿ.ರವಿ ತೆರಳಿದ್ದ, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಅವರನ್ನು ಅಡ್ಡಗಟ್ಟಿದ ಬಿಜೆಪಿ ಹಾಗೂ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.
ಜತೆಗೆ, ಕಳೆದ 20 ವರ್ಷ ಗಳಿಂದ ಶಾಸಕರಾಗಿದ್ದ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಮಾಡಲಿಲ್ಲ. ಈಗ ಕಾಂಗ್ರೆಸ್ ಶಾಸಕ ಎಚ್.ಡಿ. ತಮ್ಮಯ್ಯ ಆಸಕ್ತಿಯಿಂದ ಕಾಮಗಾರಿ ಕಾರ್ಯಾದೇಶವಾಗಿದೆ. ಈಗಲೂ ಕಾಮಗಾರಿ ಆರಂಭಿಸಲು ವಿಳಂಬ ಮಾಡ ಲಾಗುತ್ತಿದ್ದು, ಇದಕ್ಕೆ ಸಿ.ಟಿ.ರವಿ ಕಾರಣ ಎಂದು ಆರೋಪಿಸಿದರು.ಕಾಮಗಾರಿಗೆ ಅನುಮೋದನೆಗೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಆಗಮಿಸಿದ್ದ ಸಿ.ಟಿ.ರವಿ ಈ ಕಾಮಗಾರಿಗೆ ಮಂಜೂ ರಾತಿ ಕೊಡಿಸಿರುವುದು ನಾನೇ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಸಿಕ್ಕಿದೆ. ಆದರೆ, ಕಾಮಗಾರಿ ವಿಳಂಬಕ್ಕೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮತ್ತು ಶಾಸಕರು ಕಾರಣವಾಗಿದ್ದಾರೆ. 2022ರಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಈಗ ಕಾರ್ಯಾದೇಶ ನೀಡಲಾಗಿದೆ. ಹೀಗಾಗಿ, ವಿಳಂಬವಾಗಿದೆ ಎಂದು ಸಿ.ಟಿ.ರವಿ ಹೇಳಿದರು.ಸಿ,ಟಿ.ರವಿ ಅವರನ್ನು ಅಡ್ಡಗಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯ ಕರ್ತರು ಜಮಾಯಿಸಿ ಪರಸ್ಪರ ಧಿಕ್ಕಾರ ಕೂಗಿದರು. ನೂಕಾಟ, ತಳ್ಳಾಟ ನಡುವೆ ಕೈ ಕೈ ಮಿಲಾಯಿಸಿದರು.ಸ್ಥಳಕ್ಕೆ ಬಂದ ಪೊಲೀಸರು ಇರಡೂ ಕಡೆಯ ಕಾರ್ಯಕರ್ತರ ನಡುವೆ ನಿಂತು ಪರಿಸ್ಥಿತಿ ನಿಭಾಯಿಸಲು ಹರ ಸಾಹಸ ಪಡಬೇಕಾಯಿತು. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಭೇಟಿ ನೀಡಿ ಪರಿಶೀಲಿಸಿದ್ದಾರೆ.
-- ಬಾಕ್ಸ್--ಶಾಸಕರಿಗೆ ಕೆಟ್ಟಹೆಸರು ತರಲು ಯತ್ನ
ಇನ್ನೇನು ಮಳೆಗಾಲ ಹತ್ತಿರವಾಗುತ್ತಿದ್ದರೂ ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಊರಿನ ಕಡೆಯಿಂದ ಕಾಮಗಾರಿ ಆರಂಭಿಸದೆ ಕಾಡಿನ ಅಂಚಿನಿಂದ ಕಾಮಗಾರಿ ಆರಂಭಿಸಲಾಗಿದೆ. ಸಿ.ಟಿ.ರವಿ ಅವರ ಸಂಬಂಧಿಯೇ ಗುತ್ತಿಗೆದಾರರಾಗಿದ್ದು, ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಕೆಟ್ಟ ಹೆಸರು ತರುವುದು ಅವರ ಉದ್ದೇಶ. ಮಳೆ ಆರಂ ಭವಾಗಿ ಕಾಮಗಾರಿ ಸ್ಥಗಿತವಾದರೆ ಜನ ಶಾಸಕ ಎಚ್.ಡಿ,ತಮ್ಮಯ್ಯ ಅವರನ್ನು ದೂಷಿಸಲಿ ಎಂದು ಹೀಗೆ ಮಾಡಿದ್ದಾರೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪ.-- ಕೋಟ್ --ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿ ರಾಂಪುರ ರಸ್ತೆ ಕಾಮಗಾರಿಯನ್ನು ಶಾಸಕ ತಮ್ಮಯ್ಯ ಚಾಲನೆ ಮಾಡಿಸಿದ್ದರು. ಸೋತು ಹತಾಶೆ ಆಗಿರುವ ಸಿ.ಟಿ.ರವಿ ಅವರು, ಅಧಿಕಾರಿಗಳೊಂದಿಗೆ ಕಾಮಗಾರಿಗೆ ವೀಕ್ಷಣೆಗೆ ಬಾರದೇ ಗೂಂಡಾಗಳೊಂದಿಗೆ ಬಂದಿದ್ದಾರೆ. 20 ವರ್ಷ ಶಾಸಕರಾಗಿ ಒಂದು ಹಳ್ಳಿಗೆ ಉತ್ತಮ ರಸ್ತೆ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಕ್ಕೆ ಸಿ,ಟಿ,ರವಿ ಸಾಧ್ಯವಾಗಿಲ್ಲ.
ಮಂಜೇಗೌಡ, ಅಧ್ಯಕ್ಷ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರಫೋಟೋ
ಚಿಕ್ಕಮಗಳೂರಿನ ಹೊರ ವಲಯದ ರಾಂಪುರ ರಸ್ತೆ ಕಾಮಗಾರಿ ವೀಕ್ಷಣೆಗೆ ಗುರುವಾರ ಸಿ.ಟಿ.ರವಿ ತೆರಳಿದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಿಸ್ಪರ ಕೈ ಕೈ ಮಿಲಾಯಿಸಿ, ವಾಗ್ದಾದ ನಡೆಸಿ ಹೈಡ್ರಾಮ ಸೃಷ್ಟಿಸಿದರು.