ಸಾರಾಂಶ
ಮೈಸೂರು- ಕೊಡಗು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಪೊನ್ನಂಪೇಟೆಯಲ್ಲಿ ಭಾನುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಮೈಸೂರು-ಕೊಡಗು ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಪೊನ್ನಂಪೇಟೆಯಲ್ಲಿ ಭಾನುವಾರ ನಡೆಯಿತು.ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಯದುವೀರ್ ಒಡೆಯರ್ ಮಾತನಾಡಿ, ಜೀವನದಿ ಕಾವೇರಿ ಉಗಮ ಸ್ಥಳವಾದ ಕೊಡಗಿನಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರಕಿದ್ದು ಹಾಗೆ ವೀರ ಪರಂಪರೆಯ ನಾಡಿನಲ್ಲಿ ಸೇವೆಗೆ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿಗಳಾದ ಮೋದಿಯವರು ಹಲವು ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ ಇವತ್ತು ವಿಶ್ವದಲ್ಲೇ ಭಾರತವನ್ನು ಗುರುತಿಸುವ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ಇದುವರೆಗೂ ಆಗದ ಹಲವು ಜನಪರ ಕಾರ್ಯಕ್ರಮಗಳು ಮೋದಿಯವರ ಅವಧಿಯಲ್ಲಿ ಶೀಘ್ರಗತಿಯಲ್ಲಿ ಆಗಿರೋದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ದೇಶದ ಉನ್ನತಿಗಾಗಿ ದೇಶದ ಉಳಿವಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಮತ್ತೊಮ್ಮೆ ಪ್ರಧಾನಿಯಾಗಿ ಮೋದಿಯವರನ್ನು ಕಾಣಲು ಈ ಬಾರಿ ನನಗೆ ಮತವನ್ನು ನೀಡಿ ಹೆಚ್ಚಿನ ಬಹುಮತದಿಂದ ಆರಿಸಿ ಕಳಿಸುವಂತೆ ಮನವಿ ಮಾಡಿಕೊಂಡರು.ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಲಪ್ಪ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಜಿಲ್ಲಾಧ್ಯಕ್ಷ ರವಿಕಾಳಪ್ಪ, ತಾಲೂಕು ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲಿರ ಚಲನ್, ರೀನಾ ಪ್ರಕಾಶ್, ಪದ್ಮಿನಿ ಪೊನ್ನಪ್ಪ ಯಮುನಾ ಚೆಂಗಪ್ಪ, ಕವಿತಾ, ಮುದ್ದಿಯಾಡ ಮಂಜು, ಶಕ್ತಿ ಕೇಂದ್ರದ ಅಧ್ಯಕ್ಷರಾದ ಅಡ್ಡಂಡ ನೀಲನ್, ಮಧುಕುಮಾರ್, ಶಾಮ್ ಪೂಣಚ್ಚ, ಮಾಚಿಮಾಡ ರವೀಂದ್ರ, ಆಲೆಮಡ ಸುದಿ, ಕೋಟೆರ ಕಿಶನ್, ದಶಮಿ ಸದಾ, ಕಬೀರ್ ದಾಸ್ ಮತ್ತಿತರ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.