ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗುವ ಜತೆಗೆ ರಾಜ್ಯದಲ್ಲಿ ಬಿಜೆಪಿ ಪರ್ವ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗುವ ಜತೆಗೆ ರಾಜ್ಯದಲ್ಲಿ ಬಿಜೆಪಿ ಪರ್ವ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಜಯಶಾಲಿ ಆದ ಹಿನ್ನೆಲೆಯಲ್ಲಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಬಿಜೆಪಿಯಿಂದ ನಡೆದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ದುರಾಡಳಿತ, ಪಕ್ಷಪಾತ, ಭ್ರಷ್ಟಾಚಾರದಿಂದ ಬೇಸತ್ತು ಮತದಾರರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಈ ಮೂಲಕ ಬದಲಾವಣೆ ಪರ್ವ ಆರಂಭವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದು ನಿಶ್ಚಿತವಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಕಾಶ ಗೌಡ ಗೌಡರ, ರವಿಶಂಕರ ಬಾಳಿಕಾಯಿ, ಶಿವಕುಮಾರ್ ತಿಪ್ಪಶೆಟ್ಟಿ, ದುರಗೇಶ ತಿರಕಪ್ಪನವರ, ರುದ್ರೇಶ್ ಬೇತೂರು. ಬಸವರಾಜ ಚಿಂದಿ, ಜಗದೀಶ್ ದೊಡ್ಡಗೌಡ್ರ. ಉಮೇಶ್ ಬಣಕಾರ, ಬಸವರಾಜ ಕಾಲ್ವಿಹಳ್ಳಿ, ಹೊನ್ನಪ್ಪ ಸಾಲಿ, ಬಸಮ್ಮ ಅಬಲೂರ, ವಿಶಾಲಾ ಬಿಳಕಿ, ಮಂಜುಳಾ ಮುತ್ತಗಿ, ಮಂಜುಳಾ ಬಾಳಿಕಾಯಿ, ಸಿ.ಎಸ್.ಚಳಗೇರಿ, ಹುಚ್ಚಪ್ಪ ಚೌಟಗಿ, ಗಂಗಾಧರ ಬೋಗೇರ, ಲಕ್ಷ್ಮಣ ಪೂಜಾರ, ಮನೋಹರ ವಡ್ಡಿನಕಟ್ಟಿ, ನಿಂಗರಾಜ ದಂಡಗೀಹಳ್ಳಿ, ಪ್ರವೀಣ್ ತಳವಾರ, ಈರಣ್ಣ ಚಿಟ್ಟೂರ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.