ಮಂಡ್ಯ ಬಂದ್‌ಗೆ ಬಿಜೆಪಿ ಬೆಂಬಲವಿಲ್ಲ: ಬಿಜೆಪಿ ಮುಖಂಡ ಅಶೋಕ್ ಜಯರಾಂ

| Published : Feb 09 2024, 01:46 AM IST

ಮಂಡ್ಯ ಬಂದ್‌ಗೆ ಬಿಜೆಪಿ ಬೆಂಬಲವಿಲ್ಲ: ಬಿಜೆಪಿ ಮುಖಂಡ ಅಶೋಕ್ ಜಯರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಮನವಿ ಮೇರೆಗೆ ನಾವು ಬಂದ್‌ನ್ನು ಬೆಂಬಲಿಸುತ್ತಿಲ್ಲ. ಕೆಲವರು ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಶಾಂತಿಯುತ ಬಂದ್ ಮಾಡಿ, ಯಾರಿಗೂ ತೊಂದರೆ ಕೊಡುವುದು ಬೇಡ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿರುವ ಕಾರಣ ಅವರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರೆ ನಮ್ಮ ಯಾವುದೇ ಅಭ್ಯಂತರವಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯಕೆರಗೋಡಿನಲ್ಲಿ ಶ್ರೀಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀರಾಮ ಭಜನಾ ಮಂಡಳಿ ಕರೆ ನೀಡಿರುವ ಮಂಡ್ಯ ಬಂದ್‌ಗೆ ಭಾರತೀಯ ಜನತಾ ಪಕ್ಷದ ಬೆಂಬಲವಿಲ್ಲ. ಆದರೆ, ಬೈಕ್

ರ್‍ಯಾಲಿ ಮತ್ತು ಪಾದಯಾತ್ರೆಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಬಿಜೆಪಿ ಮುಖಂಡ ಅಶೋಕ್ ಜಯರಾಂ ತಿಳಿಸಿದರು.

ಜಿಲ್ಲಾಧಿಕಾರಿ ಮನವಿ ಮೇರೆಗೆ ನಾವು ಬಂದ್‌ನ್ನು ಬೆಂಬಲಿಸುತ್ತಿಲ್ಲ. ಕೆಲವರು ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಶಾಂತಿಯುತ ಬಂದ್ ಮಾಡಿ, ಯಾರಿಗೂ ತೊಂದರೆ ಕೊಡುವುದು ಬೇಡ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿರುವ ಕಾರಣ ಅವರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದೇವೆ ಎಂದರು.

ಸಾರ್ವಜನಿಕವಾಗಿ ಒತ್ತಾಯ ಪೂರ್ವಕವಾಗಿ ಬಾಗಿಲು ಹಾಕಿಸುವುದು, ಚಿತ್ರ ಮಂದಿರಗಳ ಬಂದ್ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಬಾರದು. ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರೆ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದರು.

ರ್‍ಯಾಲಿಯಲ್ಲಿ ನಾವೂ ಸಹ ಭಾಗವಹಿಸುತ್ತೇವೆ. ಪ್ರತಿಭಟನೆ ನಮ್ಮ ಹಕ್ಕು, ಅದು ಶಾಂತಿಯುತವಾಗಿರಲಿ ಎಂದ ಅವರು, ಹನುಮ ಧ್ವಜ ಹಾರಾಟ ವಿಚಾರವಾಗಿ ಕಾನೂನಾತ್ಮಕವಾದ ಹೋರಾಟ ನಡೆಸುತ್ತೇವೆ ಎಂದರು.

ಶ್ರೀರಾಮ ಭಜನಾ ಮಂಡಳಿಯ ವಿರೂಪಾಕ್ಷ, ಮಹೇಶ್, ಶ್ರೀನಿವಾಸ್, ಕೆ.ಎಲ್.ಕೃಷ್ಣ, ಬಸಂತ್, ಸಿದ್ದು ಗೋಷ್ಠಿಯಲ್ಲಿದ್ದರು.