ಬಿಜೆಪಿ ಅಭಿವೃದ್ಧಿ ವಿಚಾರದಿಂದ ಚುನಾವಣೆ ಎದುರಿಸಿಲ್ಲ

| Published : Apr 17 2024, 01:19 AM IST

ಬಿಜೆಪಿ ಅಭಿವೃದ್ಧಿ ವಿಚಾರದಿಂದ ಚುನಾವಣೆ ಎದುರಿಸಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಭಾವನಾತ್ಮಕವಾಗಿ ಚುನಾವಣೆಗಳನ್ನು ಎದುರಿಸಿದೆ ಹೊರತು ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿಲ್ಲ ಎಂದು ಕಲಬುರಗಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿ ಭಾವನಾತ್ಮಕವಾಗಿ ಚುನಾವಣೆಗಳನ್ನು ಎದುರಿಸಿದೆ ಹೊರತು ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿಲ್ಲ ಎಂದು ಕಲಬುರಗಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದರು.

ಕಲಬುರಗಿ ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಖಾನಾದಳ ಹಾಗೂ ಪಟ್ಟಣ ಸರ್ಕಲ್ ನಲ್ಲಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸಂಸದ ಉಮೇಶ ಜಾಧವ ಬಾಯಿ ಬಿಟ್ಟಿಲ್ಲ ಎಂದು ಅಲ್ಲಮ ಪ್ರಭು ಟೀಕಿಸಿದರು.

ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಎಲ್ಲರೂ ಮತ ಹಾಕಿ ಗೆಲ್ಲಿಸಿದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋದಾಗಿ ಹೇಳಿದರು.

ದಕ್ಷಿಣ ಕ್ಷೇತ್ರದ ಮತದಾರರು ಅಲ್ಲಮಪ್ರಭು ಪಾಟೀಲ ಅವರಿಗೆ ಬೆಂಬಲ ನೀಡಿದಂತೆ ತಮಗೂ ಆಶೀರ್ವಾದ ನೀಡಬೇಕು. ತಾವು ಗೆದ್ದರೆ ಕ್ಷೇತ್ರದ ಅಭಿವೃದ್ದಿ ಮಾಡುತ್ತೇನೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ನಿಮ್ಮ ಮನೆಗೆ ತಲುಪಿಸಿದ್ದೇವೆ. ಕೆಲಸ ಮಾಡಿದ್ದೇವೆ ಅದಕ್ಕೆ ಕೂಲಿ ಕೊಡಿ ಎಂದು ವಿನಂತಿಸುತ್ತಿದ್ದೇವೆ ಎಂದರು.

ಮುಖಂಡ ನೀಲಕಂಠರಾವ ಮೂಲಗೆ ಮಾತನಾಡಿ ಐದು ವರ್ಷದಲ್ಲಿ ಒಂದು ರೈಲು ಬಿಟ್ಟಿದ್ದೇ ಸಂಸದ ಉಮೇಶ ಜಾಧವ ಸಾಧನೆ. ಉಳಿದಂತೆ ಬರೀ ರೀಲೆ ಬಿಟ್ಟಿದ್ದಾರೆ ಎಂದರು.

ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ರಾಜಗೋಪಾಲರೆಡ್ಡಿ, ಪವನ ವಳಕೇರಿ, ಚಂದ್ರಲಾಪರಮೇಶ್ವರಿ, ಮಜರ್ ಖಾನ್, ಪ್ರವೀಣ್ ಹರವಾಳ, ಫಾರೂಕ್‌ಸೇಟ್ ಸೇರಿದಂತೆ ಹಲವರಿದ್ದರು.