ಸಾರಾಂಶ
ರಾಮಮಂದಿರ ಲೋಕಾರ್ಪಣೆಯಲ್ಲಿ ಬಿಜೆಪಿಯ ಪಾತ್ರ ಏನೂ ಇಲ್ಲ. ರಾಮಮಂದಿರವನ್ನು ಭಕ್ತಿಯ ವಿಷಯವನ್ನಾಗಿ ಅಲ್ಲಿನ ಟ್ರಸ್ಟ್‌ನವರು ಮಾಡಿಕೊಂಡ ನಿರ್ಧಾರದಂತೆ ಮಂದಿರ ಲೋಕಾರ್ಪಣೆಗೊಳ್ಳುತ್ತಿದೆ. ಇಲ್ಲಿ ಬಿಜೆಪಿ ಹಸ್ತಕ್ಷೇಪವಿಲ್ಲ.
ಕಾರಟಗಿ: ಬಿಜೆಪಿ ಎಂದಿಗೂ ರಾಮನ ವಿಷಯವಾಗಲಿ, ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ರಾಜಕೀಯ ಮಾಡಿದ್ದು ಕಾಂಗ್ರೆಸ್‌ನವರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಮಂತ್ರಾಲಯದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಭಾನುವಾರ ನೀಡಿದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್‌ನವರು ಸೋಮನಾಥ ದೇವಾಲಯ ಉದ್ಘಾಟನೆಯ ಕಾಲದಿಂದಲೂ ರಾಜಕೀಯ ಮಾಡುತ್ತಾ ಬಂದಿದ್ದಾರೆ. ಈಗ ರಾಮನ ದೇಗುಲದ ಲೋಕಾರ್ಪಣೆ ಸಂದರ್ಭದಲ್ಲೂ ಅವರು ರಾಜಕೀಯ ಮುಂದುವರಿಸಿದ್ದಾರೆ.
ರಾಮಮಂದಿರ ಲೋಕಾರ್ಪಣೆಯಲ್ಲಿ ಬಿಜೆಪಿಯ ಪಾತ್ರ ಏನೂ ಇಲ್ಲ. ರಾಮಮಂದಿರವನ್ನು ಭಕ್ತಿಯ ವಿಷಯವನ್ನಾಗಿ ಅಲ್ಲಿನ ಟ್ರಸ್ಟ್‌ನವರು ಮಾಡಿಕೊಂಡ ನಿರ್ಧಾರದಂತೆ ಮಂದಿರ ಲೋಕಾರ್ಪಣೆಗೊಳ್ಳುತ್ತಿದೆ.
ಇಲ್ಲಿ ಬಿಜೆಪಿ ಹಸ್ತಕ್ಷೇಪವಿಲ್ಲ. ಆದರೆ ಕಾಂಗ್ರೆಸ್‌ನವರು ಮೊದಲಿನಿಂದಲೂ ರಾಮ ದೇವರೇ ಅಲ್ಲ ಎಂದು ಪ್ರತಿಪಾದಿಸಿಕೊಂಡು ಬಂದವರು ಎಂದರು.ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂದಿರ, ಪುಲ್ವಾಮಾದಂತಹ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗುತ್ತಾರೆ ಎಂದು ಹೇಳುವ ಕಾಂಗ್ರೆಸ್‌ನವರು ಬಾಂಬೆ ದಾಳಿಗೊಳಗಾದಾಗ ಎಲ್ಲಿಗೆ ಹೋಗಿದ್ದರು? ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಾಕಿಸ್ತಾನವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಅಮರೇಶ್ ಕುಳಗಿ, ಪುರಸಭೆ ಸದಸ್ಯರಾದ ರಾಜಶೇಖರ ಸಿರಿಗೇರಿ, ಸೋಮಶೇಖರ ಬೇರಿಗೆ, ಬಸವರಾಜ ಕೊಪ್ಪದ್, ಪ್ರಮುಖರಾದ ಮೌನೇಶ್ ದಢೇಸೂಗೂರು, ಶರಣಪ್ಪ ಗದ್ದಿ, ಉಮೇಶ ಸಜ್ಜನ್, ಪ್ರಭುರಾಜ ಬೂದಿ, ಆನಂದ ಕುಲಕರ್ಣಿ, ಸೋಮನಾಥ್ ಉಡುಮಕಲ್, ಇನ್ನಿತರರು ಇದ್ದರು.