ಶೋಷಿತರ ಧ್ವನಿಯಾಗಿ ಕೆಲಸ ನಿರ್ವಹಿಸಿರುವುದು ಬಿಜೆಪಿ : ಶ್ರೀನಿವಾಸ್

| Published : Apr 18 2024, 02:23 AM IST

ಶೋಷಿತರ ಧ್ವನಿಯಾಗಿ ಕೆಲಸ ನಿರ್ವಹಿಸಿರುವುದು ಬಿಜೆಪಿ : ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂಗಳ ಆರಾಧ್ಯ ದೈವ ಬಾಲ ರಾಮನ ಮಂದಿರವನ್ನು ನಿರ್ಮಿಸಲು ಶ್ರಮಿಸಿದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಮತದಾರರು ಬಿಜೆಪಿಗೆ ಬೆಂಬಲಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಿಂದೂಗಳ ಆರಾಧ್ಯ ದೈವ ಬಾಲ ರಾಮನ ಮಂದಿರವನ್ನು ನಿರ್ಮಿಸಲು ಶ್ರಮಿಸಿದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಮತದಾರರು ಬಿಜೆಪಿಗೆ ಬೆಂಬಲಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ತಾಲೂಕಿನ ಸಖರಾಯಪಟ್ಟಣ ಹೋಬಳಿ ನಾಗೇನಹಳ್ಳಿ, ಹುಲಿಕೆರೆ ಹಾಗೂ ಪಿಳ್ಳೇನಹಳ್ಳಿ ಗ್ರಾಮಗಳಲ್ಲಿ ಬುಧವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಭವ್ಯ ಭಾರತ ನಿರ್ಮಿಸುವ ಸಂಕಲ್ಪ ಹೊಂದಿರುವ ನರೇಂದ್ರ ಮೋದಿಗೆ ಕೈ ಬಲಪಡಿಸಬೇಕು ಎಂದರು.

ದೇಶದಲ್ಲಿ ಹತ್ತು ವರ್ಷಗಳ ಕಾಲ ಶ್ರೀಸಾಮಾನ್ಯರು, ಬಡವರು, ದಲಿತರು ಹಾಗೂ ಶೋಷಿತರ ಧ್ವನಿಯಾಗಿ ಕಾರ್ಯ ನಿರ್ವಹಿಸಿದವರು ಕೇಂದ್ರದ ಬಿಜೆಪಿ ಸರ್ಕಾರ. ದೀನದಲಿತರ ಉದ್ಧಾರಕ್ಕಾಗಿ ಅನೇಕ ಸವಲತ್ತು ಹಾಗೂ ಯೋಜನೆಗಳನ್ನು ಜಾರಿಗೊಳಿಸಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸೌಲಭ್ಯ ಪಡೆಯದ ಫಲಾನುಭವಿಗಳಿಲ್ಲ ಎಂದು ಹೇಳಿದರು.ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ರಾಷ್ಟ್ರವನ್ನು ವಿಶ್ವದಲ್ಲೇ ಉನ್ನತ ಸ್ಥಾನಮಾನಗಳಿಸುವಲ್ಲಿ ಹಾಗೂ ಜನತೆ ಏಳಿಗೆಗಾಗಿ ಜೀವನ ಮುಡಿಪಾಗಿಟ್ಟವರು ಪ್ರಧಾನಿ ನರೇಂದ್ರ ಮೋದಿ. ಇಂಥ ಪ್ರಧಾನಿ ಭಾರತಕ್ಕೆ ದೊರೆತಿರುವುದು ನಮ್ಮೆಲ್ಲರ ಪುಣ್ಯ. ಹೀಗಾಗಿ ದೇಶವನ್ನು ಆರ್ಥಿಕ ಪ್ರಗತಿಯಿಂದ ಮುನ್ನೆಡೆಸುವ ಬಿಜೆಪಿ ಸರ್ಕಾರಕ್ಕೆ ಅಧಿಕಾರ ನೀಡಬೇಕಿದೆ ಎಂದು ತಿಳಿಸಿದರು.ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಸರಳ ಹಾಗೂ ಸಜ್ಜನ ವ್ಯಕ್ತಿ. ಕ್ಷೇತ್ರದ ರೈತರು, ಬೆಳೆಗಾರರು ಹಾಗೂ ಜನ ಸಾಮಾನ್ಯರಲ್ಲಿ ಸಂಪರ್ಕ ಹೊಂದಿರುವ ಇವರಿಗೆ ಅಮೂಲ್ಯ ಮತ ನೀಡಿ ಜಯಶೀಲರಾಗಿಸುವ ಜೊತೆಗೆ ದೇಶವನ್ನು ಸುಭದ್ರ ಆಡಳಿತ ನಡೆಸಲು ಮತದಾರರು ಅನುವು ಮಾಡಿಕೊಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ತಾಪಂ ಮಾಜಿ ಸದಸ್ಯ ಆನಂದ್‌ನಾಯ್ಕ್, ಮುಖಂಡರಾದ ಕೋಟೆ ರಂಗನಾಥ್, ಕೊಲ್ಲಾಬೋವಿ, ಉಮೇಶ್, ಮಾಲತೇಶ್ ಇದ್ದರು.

17 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಹೋಬಳಿ ನಾಗೇನಹಳ್ಳಿ, ಹುಲಿಕೆರೆ ಹಾಗೂ ಪಿಳ್ಳೇನಹಳ್ಳಿ ಗ್ರಾಮಗಳಲ್ಲಿ ಕೋಟಾ ಶ್ರೀನಿವಾಸ್‌ ಪೂಜಾರಿ ಬುಧವಾರ ಚುನಾವಣಾ ಪ್ರಚಾರ ನಡೆಸಿದರು. ಸಿ.ಟಿ. ರವಿ, ಕಲ್ಮರುಡಪ್ಪ ಇದ್ದರು.