ದೆಹಲಿಯಲ್ಲಿ ಬಜೆಪಿಗೆ ಅಧಿಕಾರ: ಶಿರಸಿಯಲ್ಲಿ ಸಂಭ್ರಮ

| Published : Feb 09 2025, 01:32 AM IST

ಸಾರಾಂಶ

ಆಪ್ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಚುನಾವಣೆಯಲ್ಲಿ ಸೋತಿದ್ದಾರೆ. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡಾ ಸೋತಿದ್ದಾರೆ. ಕಾಂಗ್ರೆಸ್ ಡಬಲ್ ಜೀರೋ ಸಾಧನೆ ಮಾಡಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ಶಿರಸಿ: ದೆಹಲಿಯಲ್ಲಿ ೨೭ ವರ್ಷಗಳ ನಂತರ ಬಜೆಪಿ ಸ್ಪಷ್ಟ ಬಹುತಮತದೊಂದಿಗೆ ಅಧಿಕಾರಕ್ಕೆ ಬಂದ ಹಿನ್ನೆಲೆ ಶಿರಸಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ನಗರದ ಅಂಚೆ ವೃತ್ತದ ಬಳಿ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ೪೮ ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ವಿಜಯ ದಾಖಲಿಸಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ದೆಹಲಿಯ ಜನ ಬೆಂಬಲಿಸಿದ್ದಾರೆ. ನಮ್ಮೆಲ್ಲ ನಾಯಕರು ಹಾಗೂ ದೆಹಲಿ ಬಿಜೆಪಿಯ ಕಾರ್ಯಕರ್ತರ ಶ್ರಮದಿಂದ ಫಲಿತಾಂಶ ಬರಲು ಕಾರಣವಾಗಿದೆ.

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬೇಕು ಎಂದು ದೆಹಲಿಯ ಮತದಾರರು ತೀರ್ಪು ನೀಡಿದ್ದಾರೆ. ಅರವಿಂದ ಕೇಜ್ರಿವಾಲ್ ಹಾಗೂ ಆಪ್ ಮಾಡಿರುವ ಅವಾಂತರಗಳನ್ನು ಬಿಜೆಪಿ ಸರಿಪಡಿಸಿ ಉತ್ತಮ ಆಡಳಿತವನ್ನು ಬಿಜೆಪಿ ನೀಡಲಿ ಎಂದು ಬಯಸಿ, ಜನಾದೇಶ ನೀಡಿದ್ದಾರೆ. ಅಣ್ಣಾ ಹಜಾರೆ ಅವರ ಆಂದೋಲನವನ್ನು ದುರ್ಬಳಕೆ ಮಾಡಿಕೊಂಡು, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಅಧಿಕಾರ ಹಿಡಿದ ಕೇಜ್ರಿವಾಲ್ ಹೇಗೆ ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿದರು ಎಂಬುದನ್ನು ದೆಹಲಿಯ ಮತದಾರರು ಅರ್ಥ ಮಾಡಿಕೊಂಡು ಈ ತೀರ್ಪು ನೀಡಿದ್ದಾರೆ ಎಂದರು.ಆಪ್ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಚುನಾವಣೆಯಲ್ಲಿ ಸೋತಿದ್ದಾರೆ. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡಾ ಸೋತಿದ್ದಾರೆ. ಕಾಂಗ್ರೆಸ್ ಡಬಲ್ ಜೀರೋ ಸಾಧನೆ ಮಾಡಿದೆ ಎಂದರು.ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮಹಾಂತೇಶ ಹಾದಿಮನಿ, ಶಿರಸಿ ನಗರಸಭೆಯ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಕಾಂತ ಬಳ್ಳಾರಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶ್ರೀರಾಮ ನಾಯ್ಕ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ರವಿಚಂದ್ರ ಶೆಟ್ಟಿ, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ್ ಶೆಟ್ಟಿ, ಪ್ರಮುಖರಾದ ಗಣಪತಿ ನಾಯ್ಕ, ನಂದನ ಸಾಗರ, ಶಿಲ್ಪಾ ಭಾಸ್ಕರ್ ನಾಯ್ಕ, ಹರೀಶ ಪಾಲೇಕರ್, ವಿಜಯ ಶೆಟ್ಟಿ, ಆನಂದ ಗಾಂವ್ಕರ್, ರವಿ ಗಾಂವ್ಕರ್, ನಾಗರಾಜ್ ನಾಯ್ಕ, ಸುದರ್ಶನ ವೈದ್ಯ, ನಗರಸಭಾ ಸದಸ್ಯರು, ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕರ್ತರು ಉಪಸ್ಥಿತರಿದ್ದರು.ದೆಹಲಿ ಗೆಲುವು: ಬಿಜೆಪಿ ವಿಜಯೋತ್ಸವ

ಮುಂಡಗೋಡ: ೨೭ ವರ್ಷದ ಬಳಿಕ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆ ತಾಲೂಕು ಬಿಜೆಪಿ ಕಾರ್ಯಕರ್ತರು ಶನಿವಾರ ಸಂಜೆ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ಪಪಂ ಸದಸ್ಯ ಶ್ರೀಕಾಂತ ಸಾನು, ಬಿಜೆಪಿ ಯುವ ಘಟಕದ ಅಧ್ಯಕ್ಷ ಬಸವರಾಜ ಠಣಕೆದಾರ, ಮಂಜುನಾಥ ಶೇಟ್, ಉಮೇಶ ಗಾಣಿಗೇರ, ಪಿ.ಜಿ. ತಂಗಚ್ಚನ್, ಚಂದ್ರು ಗಾಣಿಗೇರ, ಪ್ರಕಾಶ ಬಡಿಗೇರ, ತಂಗಮ್ ಚಿನ್ನನ್, ಭರತರಾಜ ಹದಳಗಿ, ಬಾಬು ವಾಲ್ಮಿಕಿ, ಲೋಕೇಶ ಹುಲಿಹೊಂಡ, ಪರಶುರಾಮ ಕೆಂದಲಗೇರಿ, ಗುಡ್ಡಪ್ಪ ತಳವಾರ, ಮಂಜುನಾಥ ಲಮಾಣಿ, ನಾಗರಾಜ ಕಾಳಗನಕೊಪ್ಪ ಮುಂತಾದವರು ಉಪಸ್ಥಿತರಿದ್ದರು.