ಶಿರಸಿಯ ಪಂಡಿತ ಆಸ್ಪತ್ರೆಯ ವಿಷಯದಲ್ಲಿ ಜನರಲ್ಲಿ ಅನಗತ್ಯ ಗೊಂದಲ ಬೇಡ: ಜಗದೀಶ ಗೌಡ

| Published : Feb 09 2025, 01:32 AM IST

ಶಿರಸಿಯ ಪಂಡಿತ ಆಸ್ಪತ್ರೆಯ ವಿಷಯದಲ್ಲಿ ಜನರಲ್ಲಿ ಅನಗತ್ಯ ಗೊಂದಲ ಬೇಡ: ಜಗದೀಶ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿಯ ಪಂಡಿತ ಆಸ್ಪತ್ರೆಯ ವಿಷಯವಾಗಿ ಸಾರ್ವಜನಿಕರಿಗೆ ಗೊಂದಲ ಮೂಡಿಸುವ ಹೇಳಿಕೆ, ಪ್ರತಿಭಟನೆ ನಡೆಯುತ್ತಿದೆ. ಇದನ್ನು ಮಲ್ಟಿ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂದು ಸರ್ಕಾರ ಎಲ್ಲಿಯೂ ಆದೇಶ ಮಾಡಿಲ್ಲ.

ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವಿಷಯದಲ್ಲಿ ಜನರಲ್ಲಿ ಅನಗತ್ಯ ಗೊಂದಲ ಹಾಗೂ ಅನುಮಾನ ಬೇಡ. ಹೈಟೆಕ್ ಆಸ್ಪತ್ರೆಯನ್ನಾಗಿಸಿ, ಜನರ ಸೇವೆಗೆ ಲಭ್ಯವಾಗುವುದಕ್ಕೆ ಎಷ್ಟು ಅನುದಾನ ಬೇಕೋ ಅಷ್ಟೂ ಹಣ ತರುವ ಸಾಮರ್ಥ್ಯವನ್ನು ಶಾಸಕ ಭೀಮಣ್ಣ ಹೊಂದಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆಯ ವಿಷಯವಾಗಿ ಸಾರ್ವಜನಿಕರಿಗೆ ಗೊಂದಲ ಮೂಡಿಸುವ ಹೇಳಿಕೆ, ಪ್ರತಿಭಟನೆ ನಡೆಯುತ್ತಿದೆ. ಇದನ್ನು ಮಲ್ಟಿ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂದು ಸರ್ಕಾರ ಎಲ್ಲಿಯೂ ಆದೇಶ ಮಾಡಿಲ್ಲ. ೨೫೦ ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಟ್ಟಡ ನಿರ್ಮಾಣ ಕಾಮಗಾರಿಗೆ ₹೧೪೦ ಕೋಟಿ ಕೈಗೊಳ್ಳುವುದಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ಆಸ್ಪತ್ರೆಯಲ್ಲಿ ಹೆಚ್ಚಿನ ವೈದ್ಯಕೀಯ ನೆರವು ಸಿಗಬೇಕು ಎಂದು ಜನರ ಭಾವನೆಯಿದೆ. ಅದಕ್ಕೆ ಪೂರಕವಾಗಿ ಆಸ್ಪತ್ರೆಯನ್ನು ರೂಪಿಸುವುದಕ್ಕೆ ಶಾಸಕರು ಪ್ರಯತ್ನಿಸುತ್ತಿದ್ದಾರೆ. ₹೧೪೦ ಕೋಟಿಯಲ್ಲಿ ₹೧೧೨ ಕೋಟಿ ಕಟ್ಟಡಕ್ಕೆ, ₹೩೦ ಕೋಟಿ ಯಂತ್ರೋಪಕರಣ ಹಾಗೂ ಪರಿಕರಗಳಿಗೆ ಎಂಬುದಿದೆ. ಅದರಲ್ಲಿ ₹೯೯.೧೦ ಕೋಟಿ ಟೆಂಡರ್ ಆಗಿದೆ. 2021ರ ಸೆ. ೮ರಂದು ಅಗ್ರಿಮೆಂಟ್ ಆಗಿದೆ. 2021ರ ಸೆ. ೧೮ರಂದು ಸೈಟ್ ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ ನಗರಸಭೆ ನೀರು ಸರಬರಾಜು ಪೈಪ್ ಕಾರಣದಿಂದ ಕಾಮಗಾರಿ ನಿಂತಿತ್ತು. ಹಳೆ ಕಟ್ಟಡ ತೆಗೆದು ಪೈಪ್‌ಲೈನ್ ಮಾಡಿದ ನಂತರ ೨೦೨೩ರ ಮುಖ್ಯ ಕಟ್ಟಡ ಕಾಮಗಾರಿ ಶುರು ಮಾಡಿದ್ದಾರೆ. ಶೇ. ೮೦ ಕೆಲಸ ಆಗಿದೆ ಎಂದರು.ಭೀಮಣ್ಣ ನಾಯ್ಕ ಶಾಸಕರಾಗುವ ಮೊದಲು ಗುತ್ತಿಗೆದಾರರಿಗೆ ₹೨೯ ಕೋಟಿ ಬಿಡುಗಡೆಯಾಗಿತ್ತು. ಆದರೆ ಭೀಮಣ್ಣ ನಾಯ್ಕ ಶಾಸಕರಾದ ನಂತರ ಹಂತ- ಹಂತವಾಗಿ ಮತ್ತೆ ₹೪೪.೭೭ಕೋಟಿ ಬಿಡುಗಡೆಯಾಗಿದೆ. ಇನ್ನು ₹೨೬ ಕೋಟಿ ಬರಬೇಕಿದೆ. ಸಾಮಾಜಿಕ ಹೋರಾಟಗಾರರು ಆಸ್ಪತ್ರೆಯ ಉಪಕರಣಗಳನ್ನು ಮಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆ ಪೇಪರ್ ಎಲ್ಲಿ ಸಿಕ್ಕಿತು ಗೊತ್ತಿಲ್ಲ. ಶಾಸಕರು, ಅಧಿಕಾರಿಗಳು ಯಾರೂ ಉಪಕರಣಗಳನ್ನು ಮಾಯ ಮಾಡಿಲ್ಲ. ₹೩೦ ಕೋಟಿಗೆ ಸಂಬಂಧಿಸಿದ ಉಪಕರಣಗಳ ಬಗ್ಗೆ ಪಟ್ಟಿ ಮಾಡಲು ಹೇಳಿದ್ದಾರೆ. ಅಧಿಕಾರಿಗಳ ತಪ್ಪು ನಿರ್ಧಾರದಿಂದ ಸಂವಹನ ಕೊರತೆ ಆಗಿರಬಹುದು. ಯಾವುದೇ ಗೊಂದಲ ಬೇಡ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದೀಪಕ ಹೆಗಡೆ ದೊಡ್ಡೂರು, ಪ್ರದೀಪ ಶೆಟ್ಟಿ, ಅಬ್ಬಾಸ್ ತೋನ್ಸೆ, ಗಣೇಶ ದಾವಣಗೆರೆ, ದೇವರಾಜ ಮರಾಠಿ ಮತ್ತಿತರರು ಇದ್ದರು.