ಸಾರಾಂಶ
ಪಾವಗಡ ಕಾಂಗ್ರೆಸ್ ನಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಪಾವಗಡ
ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕ ವ್ಯಕ್ತಿ. ಅವರ ಜನ ಸೇವೆ ಹಾಗೂ ಏಳಿಗೆ ಸಹಿಸದೇ ಮುಡಾ ನಿವೇಶನ ವಿಚಾರ ತೆಗೆದು ರಾಜ್ಯಪಾಲರ ಮೊರೆ ಹೋಗುವ ಮೂಲಕ ಬಿಜೆಪಿ ಜೆಡಿಎಸ್ ಷಡ್ಯಂತರ ರೂಪಿಸಿದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ಹೇಳಿದರು.ಪಟ್ಟಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೂ 10 ವರ್ಷಗಳ ಕಾಲ ಸುಭದ್ರವಾಗಿರಲಿದೆ. ರಾಜ್ಯದಲ್ಲಿ ಸರ್ಕಾರ ರಚಿಸಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಕನಸು ಕಾಣುತ್ತಿರಬೇಕು. ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ಬಡವರ್ಗದ ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ ಎಂದರು.
ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ರಾಜ್ಯಪಾಲರು ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದ್ದಾರೆ. ಇವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನ ಉರುಳಿಸಲು ಸಿದ್ದರಿದ್ದಂತೆ ಕಾಣುತ್ತಿದೆ. ಬಿಜೆಪಿ ಪಕ್ಷ ಎಂದೆಂದೂ ಮುಂದಿನ ಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ. ಬರೀ ಹಿಂಭಾಗಲಿಂದಲೇ ಬಂದು ಅಧಿಕಾರ ನಡೆಸಿದೆ ಎಂದರು. ತಾಲೂಕು ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್ ಬಾಬು ಮಾತನಾಡಿ, ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ ಷಡ್ಯಂತರಕ್ಕೆ ಮುಂದಾಗಿದೆ. ಇದರಿಂದ ಸರ್ಕಾರ ಹಾಗೂ ಸಿಎಂಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿರಲಿದೆ ಎಂದರು.ಪ್ರತಿಭಟನೆಯ ಜಾಥಾ ಬಳ್ಳಾರಿ ರಸ್ತೆಯ ಮೂಲಕ ಪಟ್ಟಣದ ಟೋಲ್ ಗೇಟ್‌ಗೆ ಆಗಮಿಸಿ ಅಲ್ಲಿನ ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ನೆರೆವೇರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ್ ಡಿ.ಎನ್.ವರದರಾಜುಗೆ ಮನವಿ ಪತ್ರ ಸಲ್ಲಿಸಿದರು.
ರಾಮಾಂಜಿನಪ್ಪ, ರಂಗೇಗೌಡ, ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ, ಶಂಕರರೆಡ್ಡಿ ಮಹಮ್ಮದ್ ಫಜುಲುಲ್ಲಾ, ನಾಗೇಂದ್ರರೆಡ್ಡಿ, ರವಿ, ಪಿ.ಎಚ್.ರಾಜೇಶ್, ಗುಮ್ಮಘಟ್ಟ ಶ್ರೀನಿವಾಸಲು, ಕೆ.ಎಸ್.ಪಾಪಣ್ಣ, ಮಾರಪ್ಪ, ಎನ್.ಆರ್. ಅಶ್ವಥ್‌ಕುಮಾರ್, ಅನಿಲ್ ಕುಮಾರ್, ಕನಿಕಲಬಂಡೆ ಅಕ್ಕಲಪ್ಪ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))