ಸಾರಾಂಶ
ದಾಬಸ್‌ಪೇಟೆ: ಪ್ರತಿ ಪಂಚಾಯತಿಗಳಲ್ಲಿ ಸೇರುತ್ತಿರುವ ಜನಸ್ತೋಮ ನೋಡಿದರೆ ಜನರು ಬದಲಾವಣೆ ಬಯಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹತಾಶೆ ಮನೋಭಾವ ಹೆಚ್ಚಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಹೇಳಿದರು.

ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಕಾಂಗ್ರೇಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಸುಳ್ಳಿನ ಮೇಲೆ ಆಳುತ್ತಿದ್ದಾರೆ. ರೈತರ ಕಾಳಜಿ ಹೊಂದಿಲ್ಲ. ರೈತರ ಸಾಲಮನ್ನಾ ಮಾಡಿಲ್ಲಾ ಮತ್ತು ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ನಮ್ಮ ಯುಪಿಎ ಸರಕಾರ ಬೆಂಬಲಿಸಿ, ಯುವಕರ ಕೈ ಹಿಡಿಯಿರಿ ಎಂದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಕಳೆದ ವರ್ಷ ನಡೆದ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಆಶೀರ್ವಾದ ಮಾಡಿದ್ದೀರಿ, ನೆಲಮಂಗಲ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ರಕ್ಷರಾಮಯ್ಯನವರಿಗೆ ಮತ ನೀಡಿ ಗೆಲ್ಲಿಸಿ, ನಾನು ಹಾಗೂ ರಕ್ಷಾರಾಮಯ್ಯ ಇಬ್ಬರೂ ಮುಂದಿನ ಐದು ವರ್ಷ ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ ಎಂದರು.
ಸೋಂಪುರ ಹೋಬಳಿ ಮುಖಂಡ ಅಗಳಕುಪ್ಪೆ ಗೋವಿಂದರಾಜು, ಜಿಲ್ಲಾಧ್ಯಕ್ಷ ಎಸ್.ಆರ್.ಗೌಡ, ಎನ್‌ಡಿಎ ಅಧ್ಯಕ್ಷ ನಾರಾಯಣಗೌಡ, ಬ್ಲಾಕ್ ಅಧ್ಯಕ್ಷ ನಾಗರಾಜು, ಜಗದೀಶ್, ಕಾಂಗ್ರೇಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು, ಗ್ರಾಪಂ ಅಧ್ಯಕ್ಷ ರಾಮಾಂಜಿನೇಯ, ಮಾಜಿ ಅಧ್ಯಕ್ಷರಾದ ಶಿವಕುಮಾರ್, ಸಿದ್ದರಾಜು, ಸುರೇಶ್, ಮುಖಂಡರಾದ ಅಂಚೆಮನೆ ಪ್ರಕಾಶ್, ಯೋಗಾನಂದೀಶ್, ನಾಗರುದ್ರಶರ್ಮ, ಚಂದ್ರಣ್ಣ ಇತರರಿದ್ದರು.