ರಾಷ್ಟ್ರೀಯ ಹಿತಚಿಂತನೆಯ ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ

| Published : Sep 01 2024, 01:45 AM IST

ರಾಷ್ಟ್ರೀಯ ಹಿತಚಿಂತನೆಯ ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಯಾವತ್ತೂ ರಾಷ್ಟ್ರದ ಪ್ರಗತಿ ಜತೆ-ಜತೆಗೆ ದೇಶವಾಸಿಗಳ ಏಳಿಗೆಯನ್ನೂ ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕವಾಗಿ ಹೆಜ್ಜೆ ಹಾಕುತ್ತಿದೆ. ರಾಷ್ಟ್ರೀಯ ಹಿತ ಚಿಂತನೆಯೊಂದಿಗೆ ಭಾರತವನ್ನು ಮುನ್ನಡೆಸುತ್ತಿದೆ.

ಕುಂದಗೋಳ:

ರಾಷ್ಟ್ರೀಯ ಹಿತಚಿಂತನೆಯುಳ್ಳ ಬಿಜೆಪಿ ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಪಟ್ಟಣದ ಮರಾಠಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಯಾವತ್ತೂ ರಾಷ್ಟ್ರದ ಪ್ರಗತಿ ಜತೆ-ಜತೆಗೆ ದೇಶವಾಸಿಗಳ ಏಳಿಗೆಯನ್ನೂ ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕವಾಗಿ ಹೆಜ್ಜೆ ಹಾಕುತ್ತಿದೆ. ರಾಷ್ಟ್ರೀಯ ಹಿತ ಚಿಂತನೆಯೊಂದಿಗೆ ಭಾರತವನ್ನು ಮುನ್ನಡೆಸುತ್ತಿದೆ. ಇದರ ಫಲವಾಗಿ ಬಿಜೆಪಿ ಇಂದು ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ಭಾರತವನ್ನು ವಿಶ್ವಗುರು ಸ್ಥಾನಕ್ಕೇರಿಸುವ ಧ್ಯೇಯದೊಂದಿಗೆ ಬಿಜೆಪಿ ದಾಪುಗಾಲು ಹಾಕುತ್ತಿದೆ. ಈ ಮಹತ್ತರ ಕಾರ್ಯದಲ್ಲಿ ಯುವ ಸಮುದಾಯ, ಸರ್ವರೂ ಭಾಗಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಿದೆ ಎಂದರು.

ನಾಳೆಯಿಂದ ಅಭಿಯಾನ:

ಬಿಜೆಪಿ ಸದಸ್ಯತ್ವ ಅಭಿಯಾನ ಸೆ. 2ರಿಂದ ಆರಂಭಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ರಾಷ್ಟ್ರೀಯತೆ, ಏಕತೆಯನ್ನು ಬೆಂಬಲಿಸಿ ಎಂದು ಜೋಶಿ ಕರೆ ನೀಡಿದರು.

ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಹಿಂದೆ ಬಿಜೆಪಿ ಸದಸ್ಯನ್ನಾಗಿಸಲು ಹಳ್ಳಿ-ಹಳ್ಳಿಗೆ ತೆರಳಿ ಜನರ ಮನವೊಲಿಸಿ, ಪಕ್ಷದ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿ ಸದಸ್ಯತ್ವ ಮಾಡಿಕೊಳ್ಳುವಂತೆ ಮನವಿ ಮಾಡುತ್ತಿದ್ದೆವು. ಆದರೆ, ಈಗ ಸರಳವಾಗಿದೆ. ಎಲ್ಲರ ಹತ್ತಿರ ಮೊಬೈಲ್ ಇದೆ. ಮೊ: 8800002024 ಸಂಖ್ಯೆಗೆ ಮಿಸ್ಡಕಾಲ್ ಮಾಡುವ ಮೂಲಕ, ತಮ್ಮ ಸ್ವ ವಿಳಾಸದ ಮಾಹಿತಿ ಹಾಕಿ ರಜಿಸ್ಚಾರ್‌ ಮಾಡಿಕೊಂಡ 5 ನಿಮಿಷದಲ್ಲೇ ಪಕ್ಷದ ಸದಸ್ಯತ್ವ ಹೊಂದಬಹುದಾಗಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಸದಸ್ಯತ್ವ ಮಾಡಲು ಶ್ರಮಿಸಬೇಕು ಎಂದು ಹೇಳಿದರು.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸಂಚಾಲಕ ಲಿಂಗರಾಜ ಪಾಟೀಲ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ, ಹುಬ್ಬಳ್ಳಿ ಮಂಡಳದ ಅಧ್ಯಕ್ಷ ಉಮೇಶ ಕುಸುಗಲ್ ಮಾತನಾಡಿದರು. ಈ ವೇಳೆ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮಾಲತೇಶ ಶ್ಯಾಗೋಟಿ, ಈರಣ್ಣ ಜಡಿ, ಎನ್.ಎನ್. ಪಾಟೀಲ, ಭರಮಪ್ಪ ಮುಗಳಿ, ಡಿ.ವೈ. ಲಕ್ಕನಗೌಡ, ಮಾಲತೇಶ ಶಾಗೋಟಿ, ಮಲ್ಲಿಕಾರ್ಜುನ ಸವದತ್ತಿ, ಎಂ.ಎಂ. ಕುಂದಗೋಳ, ಪ್ರಕಾಶಗೌಡ ಪಾಟೀಲ, ಯಶವಂತಗೌಡ ಪಾಟೀಲ, ನಾಗರಾಜ ದೇಶಪಾಂಡೆ ಸೇರಿದಂತೆ ಹಲವರಿದ್ದರು.