ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೇಲೆ ಬಿಜೆಪಿ ಹೊಟ್ಟೆಕಿಚ್ಚು: ಸಚಿವ

| Published : Apr 26 2024, 12:49 AM IST

ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೇಲೆ ಬಿಜೆಪಿ ಹೊಟ್ಟೆಕಿಚ್ಚು: ಸಚಿವ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೇಲೆ ಬಿಜೆಪಿ ಹೊಟ್ಟೆ ಕಿಚ್ಚು ಪಡುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿಕೆ । ಕುಕನೂರದಲ್ಲಿ ಕಾಂಗ್ರೆಸ್ ಬಹಿರಂಗ ಪ್ರಚಾರಕನ್ನಡಪ್ರಭ ವಾರ್ತೆ ಕುಕನೂರು

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೇಲೆ ಬಿಜೆಪಿ ಹೊಟ್ಟೆ ಕಿಚ್ಚು ಪಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ರಾತ್ರಿ ಜರುಗಿದ ಕಾಂಗ್ರೆಸ್ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನಪರ ಯೋಜನೆಗಳು ಜನಮಾನಸವಾಗಿವೆ. ಬಡವರ ಕಲ್ಯಾಣ ಆಗುತ್ತಿದೆ. ಇದನ್ನು ಕಂಡು ಬಿಜೆಪಿಗೆ ಹೊಟ್ಟೆ ಕಿಚ್ಚು. ಪ್ರಧಾನಿ ನರೇಂದ್ರ ಮೋದಿ ಏನು ಪ್ರಶ್ನಾತೀತ ನಾಯಕನಲ್ಲ. ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ನಾವು ಜನರ ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತೇವೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಜನನಾಯಕ ಆಗಲು ಸೇವೆ ಮಾಡಬೇಕು. ಬರೀ ಮೋದಿ ನೋಡಿ ಮತ ನೀಡುವುದು ತಪ್ಪು. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತಿದ್ದಾರೆ. ಅದು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂದರು.

ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ಕಾಂಗ್ರೆಸ್ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದ್ದು, ನಾನು ಸಹ ಹೆಚ್ಚು ಜನ ಸೇವೆ ಮಾಡಲು ಮತದಾರರು ಆಶೀರ್ವದಿಸಬೇಕು ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ದೇಶಕ್ಕೆ ಭವಿಷ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ದೇಶದ ಅಭಿವೃದ್ಧಿ ಮಾತಿಲ್ಲ. ಬರೀ ಹತಾಶೆ ಮನೋಭಾವದಿಂದ ಪ್ರಧಾನ ನರೇಂದ್ರ ಮೋದಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಗೌಡ ಚಂಡೂರು, ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ವೀರನಗೌಡ ಪಾಟೀಲ್, ಯಂಕಣ್ಣ ಯರಾಶ, ರಾಮಣ್ಣ ಭಜಂತ್ರಿ, ಖಾಸಿಂಸಾಬ್ ತಳಕಲ್, ಮಂಜುನಾಥ ಕಡೆಮನಿ, ಈರಪ್ಪ ಕುಡಗುಂಟಿ, ನಾರಾಯಣಪ್ಪ ಹರಪನ್ಹಳ್ಳಿ, ಪಪಂ ಸದಸ್ಯರಾದ ಸಿರಾಜ್ ಕರಮುಡಿ, ಗಗನ ನೋಟಗಾರ, ನೂರುದ್ದೀನ್ ಗುಡಿಹಿಂದಲ್, ಸಿದ್ದಯ್ಯ ಕಳ್ಳಿಮಠ, ಸಂಗಮೇಶ ಗುತ್ತಿ, ಬಿ.ಎಂ. ಶಿರೂರು, ಶಿವನಗೌಡ ದಾನರಡ್ಡಿ, ಸುಧೀರ ಕೊರ್ಲಹಳ್ಳಿ ಇತರರಿದ್ದರು.

ಮಂಗಳ ಸೂತ್ರ ಮುಟ್ಟಿದರೆ ಸುಮ್ಮನೆ ಬಿಡುತ್ತಾರೆಯೇ?:

ಮೋದಿಯವರೇ ಮಂಗಳಸೂತ್ರ ಅಂದರೆ ಅದು ಮಹಿಳೆಯರಿಗೆ ದೊಡ್ಡ ಶಕ್ತಿ. ಅದಕ್ಕೆ ಅದರದೇ ಆದ ಬೆಲೆ ಇದೆ. ಅದನ್ನು ಯಾರಾದರೂ ಮುಟ್ಟಲು ಸಾಧ್ಯವಿಲ್ಲ. ಚುನಾವಣೆ, ಮತಕ್ಕೆ ಈ ರೀತಿ ಮಾತನಾಡುವುದು ಸರಿಯಲ್ಲ. ಮಂಗಳಸೂತ್ರ ಯಾರಾದರೂ ಮುಟ್ಟಿದರೆ ಅವರಿಗೆ ... ಏಟು ಬೀಳುತ್ತವೆ. ಮಹಿಳೆಯರು ಮಂಗಳಸೂತ್ರದ ಕಡೆಗೆ ಹೋದರೆ ಸುಮ್ಮನೆ ಬಿಡುತ್ತಾರೆಯೇ? ಎಂದು ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.