ಸಾರಾಂಶ
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಖಂಡಿಸಿ ನಡೆದ ಹೋರಾಟ ವೇಳೆ ಶಾಸಕರ ಮನೆ ಮುಂದೆ ಹಾಗೂ ಕಾಂಪೌಂಡ್‌ಗೆ ಸೆಗಣಿ ಸಾರಿಸಿದ ಪ್ರಕಟಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ ಪಂಪಣ್ಣ, ಗಿರೀಶಗೌಡ ಬಿರಾದಾರ, ಸಂಜು ಬಾಗೇವಾಡಿ, ನಾಗೇಶ ಕವಡಿಮಟ್ಟಿಯವರು ಜಾಮೀನಿನ ಮೇಲೆ ಹೊರ ಬಂದರು. ಪಟ್ಟಣದ ಮಾರುತಿ ನಗರದಲ್ಲಿರುವ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಫಾರ್ಮ್ ಹೌಸ್‌ನಲ್ಲಿ ಹಸುಗಳಿಗೆ ಪೂಜೆ ನೆರೆವೇರಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಖಂಡಿಸಿ ನಡೆದ ಹೋರಾಟ ವೇಳೆ ಶಾಸಕರ ಮನೆ ಮುಂದೆ ಹಾಗೂ ಕಾಂಪೌಂಡ್‌ಗೆ ಸೆಗಣಿ ಸಾರಿಸಿದ ಪ್ರಕಟಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ ಪಂಪಣ್ಣ, ಗಿರೀಶಗೌಡ ಬಿರಾದಾರ, ಸಂಜು ಬಾಗೇವಾಡಿ, ನಾಗೇಶ ಕವಡಿಮಟ್ಟಿಯವರು ಜಾಮೀನಿನ ಮೇಲೆ ಹೊರ ಬಂದರು. ಪಟ್ಟಣದ ಮಾರುತಿ ನಗರದಲ್ಲಿರುವ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಫಾರ್ಮ್ ಹೌಸ್‌ನಲ್ಲಿ ಹಸುಗಳಿಗೆ ಪೂಜೆ ನೆರೆವೇರಿಸಿದರು.ಹಸುಗಳ ಕೆಚ್ಚಲು ಕೊಯ್ದ ಕೇಸ್ ಸಂಬಂಧಿಸಿದಂತೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಶಾಸಕ ಸಿ.ಎಸ್ ನಾಡಗೌಡ ಅವರ ಮನೆ ಹತ್ತಿರ ಮನವಿ ನೀಡಿ ಆರೋಪಿಗಳನ್ನು ಬಂಧಿಬೇಕು ಎಂದು ಆಗ್ರಹಕ್ಕೆ ಯೋಜನೆ ಹಾಕಿಕೊಂಡಿದ್ದರು. ಆದರೆ, ಶಾಸಕರ ಮನೆ ಮುಂದೆ ಹಾಗೂ ಕಾಂಪೌಂಡ್‌ಗೆ ಸೆಗಣಿ ಸಾರಿಸಿ ಇದು ಹಿಂದೂ ಧರ್ಮದ ಸಂಕೇತ ಎಂದು ಬಿಂಬಿಸದ್ದರು. ಈ ವೇಳೆ ಶಾಸಕರ ಖಾಸಗಿ ನಿವಾಸಕ್ಕೆ ಸೆಗಣಿ ಸಾರಿಸುವುದು ಅಪರಾಧ ಕಾನೂನು ವಿರುದ್ಧ ನಡೆದುಕೊಳ್ಳಲಾಗಿದೆ ಎಂದು ನಾಲ್ವರ ಮೇಲೆ ಕೇಸ್ ದಾಖಲಾಗಿ ಎರಡು ದಿನ ಜೈಲು ಕಂಡಿದ್ದರು. ಈಗ ಜಾಮೀನಿನ ಮೇಲೆ ಹೊರಬಂದ ಹಿನ್ನೆಲೆಯಲ್ಲಿ ನಾಲ್ವರು ಬಿಜೆಪಿ ಮುಖಂಡರು ಹಸುಗಳಿಗೆ ಪೂಜೆ ನೆರವೇರಿಸಿ, ಬಾಳೆಹಣ್ಣು, ಬೆಲ್ಲ, ಅಕ್ಕಿ ತಿನ್ನಿಸಿದರು.ನಾವು ಎಂದಿನಂತೆ ಮೌನವಾಗಿ ಶಾಸಕ ಸಿ.ಎಸ್. ನಾಡಗೌಡರ ಹತ್ತಿರ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನವಿ ಕೊಡಲು ಹೋಗಿದ್ದೇವು. ಅವತ್ತು ಸಂಕ್ರಾಂತಿ ಇರುವುದರಿಂದ ಹಿಂದೂಗಳ ಮನೆ ಮುಂದೆ ಸಂಪ್ರಾಯದಂತೆ ಸೆಗಣಿ ಸಾರಿಸಿ ಪೂಜೆ ಮಾಡುತ್ತಾರೆ. ಅದೇ ರೀತಿ ಶಾಸಕರ ಮನೆ ಮುಂದೆ ಸೆಗಣಿ ಸಾರಿಸಿ ಶಾಂತಯುತವಾಗಿ ಸಂಕ್ರಾತಿ ಶುಭಾಶಯ ಕೋರಿ ಮನವಿ ಸಲ್ಲಿಸುವವರಿದ್ದೇವು. ಇದಕ್ಕೆ ಬಿಡದೇ ಇದ್ದಾಗ ಅಲ್ಲಿಂದ ಹೊರಟು ಬರುವ ವೇಳೆಯಲ್ಲಿ ನಮ್ಮನ್ನು ಪೊಲೀಸರು ಬಂಧಿಸಿ ಕಾನೂನು ಧಿಕ್ಕರಿಸಿ ನಮ್ಮ ಮೇಲೆ ಇಲ್ಲಸಲ್ಲದ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದರು.
-ಜಗದೀಶ ಪಂಪಣ್ಣ, ತಾಲೂಕು ಬಿಜೆಪಿ ಅಧ್ಯಕ್ಷರು.ರಾಜಗುರು, ಭಗತ್ ಸಿಂಗ್, ವೀರ ಸಾವರ್ಕರ್ ದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಹಸುವಿನ ಸಂತತಿ ಉಳುವಿಗಾಗಿ ನಾವು ಜೈಲು ಕಂಡು ಬಂದಿರುವುದು ಹೆಮ್ಮೆ ಇದೆ. ನಮ್ಮದು ನಾಡಗೌಡರ ವಿರುದ್ಧ ಹೋರಾಟ ಆಗಿರಲಿಲ್ಲ. ಹಸುವಿನ ಕೆಚ್ಚಲು ಕೊಯ್ದ ಕಿಡಿಗೇಡಿಗಳನ್ನು ಬಂಧಿಸಬೇಕೆಂಬುವುದು ನಮ್ಮ ಹೋರಾಟವಾಗಿತ್ತು. ರಾಜಕೀಯ ದ್ವೇಷವಿಟ್ಟುಕೊಂಡು ಕೇಸ್ ಮಾಡಲಾಯಿತು. ನಮ್ಮ ಬಂಧನದಿಂದ ಮುಂದಿನ ಹೋರಾಟಗಳಿಗೆ ನಾಡಗೌಡರು ಪ್ರೊತ್ಸಾಹಿಸಿದಂತಿದೆ.
-ಸಂಜು ಬಾಗೇವಾಡಿ,
ಮುಖಂಡ.