ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಘಟಕದ ವತಿಯಿಂದ ದೀಪಾವಳಿ ಪ್ರಯುಕ್ತ ಗೋ ಪೂಜೆ ಕಾರ್ಯಕ್ರಮ ಶುಕ್ರವಾರ ಕಾರ್ಕಳದ ತೆಳ್ಳಾರು ವೆಂಕಟರಮಣ ಗೋಶಾಲೆಯಲ್ಲಿ ಜರುಗಿತು.

ಕಾರ್ಕಳ: ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಘಟಕದ ವತಿಯಿಂದ ದೀಪಾವಳಿ ಪ್ರಯುಕ್ತ ಗೋ ಪೂಜೆ ಕಾರ್ಯಕ್ರಮ ಶುಕ್ರವಾರ ಕಾರ್ಕಳದ ತೆಳ್ಳಾರು ವೆಂಕಟರಮಣ ಗೋಶಾಲೆಯಲ್ಲಿ ಜರುಗಿತು.

ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯ ಡಿ. ಬಂಗೇರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಗೋವುಗಳಿಗೆ ಪೂಜೆ ಸಲ್ಲಿಸಿ ತಿನಿಸು ನೀಡಿದರು. ಮಹಿಳಾ ಮೋರ್ಚಾ ವತಿಯಿಂದ ಸಂಗ್ರಹಿಸಲಾದ ಗೋಹುಂಡಿಯ ಕಾಣಿಕೆ ಸಮರ್ಪಿಸಲಾಯಿತು.ಕಾರ್ಯಕ್ರಮದಲ್ಲಿ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್‌, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಕಾರ್ಯದರ್ಶಿ ಕವಿತಾ ಹರೀಶ್‌, ತಾಲೂಕು ಉಪಾಧ್ಯಕ್ಷೆ ಭಾರತಿ ಅಮೀನ್‌ ಹಾಗೂ ಪಲ್ಲವಿ ಪ್ರವೀಣ್‌, ಕಾರ್ಯದರ್ಶಿಗಳಾದ ಲಕ್ಷ್ಮೀ ಶೆಟ್ಟಿ, ಲಕ್ಷ್ಮೀ ಕಿಣಿ, ಕೋಶಾಧಿಕಾರಿ ಸುಚಿತ್ರಾ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷೆಯರಾದ ಶುಭಾ ಪಿ. ಶೆಟ್ಟಿ, ಮಮತಾ ಸುವರ್ಣ ಮತ್ತು ಪ್ರಮೀಳಾ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪುರಸಭೆಯ ಮಾಜಿ ಅಧ್ಯಕ್ಷೆ ಸುಮಾ ಕೇಶವ್‌, ಪದಾಧಿಕಾರಿಗಳಾದ ಜ್ಯೋತಿ ರಮೇಶ್‌, ಗೀತಾ ದಾನಶಾಲೆ‌, ದೀಪಾ ನಾಯಕ್‌, ಜ್ಯೋತಿ ಬಬಿತಾ‌, ನಿರೀಕ್ಷಾ ರಾಜೇಶ್‌, ರಜನಿ ಹೆಗ್ಡೆ‌, ಸ್ವಾತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡಿದರು.