ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

| Published : Sep 13 2024, 01:32 AM IST

ಸಾರಾಂಶ

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಶಿರಾ ನರೇಂದ್ರಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಭಾರತ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಹೇಳಿದರು.ಅವರು ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ತರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಲಗುಂಟೆ, ಗೊಲ್ಲರಹಟ್ಟಿ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಮಂತ್ರಿ ಅನ್ನ ಯೋಜನೆ, ಉಜ್ವಲ ಯೋಜನೆ ಮತ್ತು ಆವಾಸ್ ಯೋಜನೆಗಳಂತಹ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕೃಷಿ ಕಾರ್ಮಿಕರ, ರೈತರ, ಯುವಕರ ಎಲ್ಲಾ ಕೂಲಿ ಕಾರ್ಮಿಕರ ಪರವಾದ ಆಡಳಿತ ನಡೆಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿ ೮೮೦೦೦೦೨೦೨೪ ಸಂಖ್ಯೆಗೆ ಡಯಲ್ ಮಾಡುವ ಮುಖಾಂತರ ಭಾರತೀಯ ಜನತಾ ಪಾರ್ಟಿಯ ಸದಸ್ಯರನ್ನಾಗಿ ಮಾಡಿ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಮುನಿರಾಜು, ಗ್ರಾ.ಪಂ. ಸದಸ್ಯರಾದ ಸತೀಶ್, ಬೋಜರಾಜು, ಚೆನ್ನಬಸಣ್ಣ, ಮಹೇಶ್, ಅಂಬಿಕ, ಬೊಮ್ಮೇಗೌಡ, ಜಗದೀಶ್, ಆನಂದಪ್ಪ, ಸಿದ್ದೇಶ್, ಮಹೇಶ್, ರಾಜಣ್ಣ, ರಂಗರಾಜು, ಸೋಮಶೇಖರ್, ಮಹದೇವಪ್ಪ, ಪ್ರಕಾಶ್, ಗಂಗಣ್ಣ, ನೀಲಕಂಠಪ್ಪ, ರೇಣುಕಯ್ಯ, ಆಶ್ವತಪ್ಪ, ನರಸಿಂಹಯ್ಯ, ಭರತ್, ಕುಮಾರ, ದಾಸೇಗೌಡ, ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.