ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತೀಯ ಜನತಾ ಪಾರ್ಟಿ ಒಂದು ಪಕ್ಷವಾಗಿ ಸಂಘಟನೆಯನ್ನು ಬಲಪಡಿಸಲು ಅನೇಕ ಆಂತರಿಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ನಡೆಸುತ್ತಿರುತ್ತದೆ. ಇದಕ್ಕಾಗಿಯೇ ಬಿಜೆಪಿಯನ್ನು ಪಾರ್ಟಿ ವಿಥ್ ಡಿಫರೆನ್ಸ್ ಎನ್ನುವುದು ಎಂದು ಭಾ.ಜ.ಪಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಹೇಳಿದರು.ನಗರದ ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಜಿಲ್ಲೆಯ ಕಚೇರಿಯಲ್ಲಿ ನಡೆದ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಸ್ಯತಾ ಅಭಿಯಾನವು ಅಂತಹ ಒಂದು ಸಂಘಟನಾತ್ಮಕ ಪ್ರಕ್ರಿಯೆಯಾಗಿದೆ. ಸೆ.2 ರಂದು ಸೋಮವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರು ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡುವರು. ಎಲ್ಲ ಪದಾಧಿಕಾರಿಗಳು ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ತಮ್ಮ ತಮ್ಮ ಮಂಡಲಗಳಲ್ಲಿ ತಮ್ಮ ತಮ್ಮ ಬೂತ್‌ಗಳಲ್ಲಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ ಈ ಸದಸ್ಯತಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಭಾರತೀಯ ಜನತಾ ಪಾರ್ಟಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ವಿವೇಕಾನಂದ ಡಬ್ಬಿ ಹಾಗೂ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಮಾತನಾಡಿ, ಭಾ.ಜ.ಪಾ ಸದಸ್ಯತಾ ಅಭಿಯಾನ ಪಕ್ಷದ ಬಲವರ್ದನೆಗೆ ಹಾಗೂ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.ಇದೇ ವೇಳೆ ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರ ತ್ಯಾಗ ಹಾಗೂ ಬಲಿದಾನದ ಬಗ್ಗೆ ಸ್ಮರಿಸಲಾಯಿತು. ಸದಸ್ಯತಾ ಅಭಿಯಾನದ ಬೆಳಗಾವಿ ಗ್ರಾಮಂತರ ಜಿಲ್ಲೆಯ ಪ್ರಭಾರಿಗಳಾದ ದಾದಾ ಗೌಡ ಬಿರಾದರ್ ಅವರು ಸದಸ್ಯತಾ ಅಭಿಯಾನದ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಸದಸ್ಯತಾ ಅಭಿಯಾನದ ಮಿಸ್ ಕಾಲ್ ನೀಡುವ ಮೊಬೈಲ್ ಸಂಖ್ಯೆಯನ್ನು ಬಿತ್ತಿ ಪತ್ರದ ಮೂಲಕ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ವಿ.ಪಾಟೀಲ್, ಸಂದೀಪ್ ದೇಶಪಾಂಡೆ, ಧನಶ್ರೀ ದೇಸಾಯಿ, ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ್ ಚೌಗಲೆ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈರಣ್ಣ ಅಂಗಡಿ, ಸೋನಾಲಿ ಸರ್ನೋಬತ್, ವಿರುಪಾಕ್ಷ ಮಾಮನಿ, ಸದಸ್ಯತಾ ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ ಪ್ರಶಾಂತ್ ಅಮ್ಮಿನಭಾವಿ, ಚೇತನ್ ಅಂಗಡಿ, ವೀರಭದ್ರ ಪೂಜಾರಿ, ಬಸವರಾಜ್ ನೇಸರಗಿ, ಮಹೇಶ್ ಮೋಹಿತೆ ಜಿಲ್ಲೆಯ ಹಾಗೂ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.