ಸ್ವಾವಿ ವಿವೇಕಾನಂದ ಬಡಾವಣೆಯ ಪಾಲಿಕೆ ಮಾಲೀಕತ್ವದ ಪಾರ್ಕನ್ನು ಶಾಬನೂರು ರಿ.ಸ.ನಂ.127/1ಎ1, 127/1ಎ2, 127/1ಎ3 ಸರ್ವೇ ನಂಬರ್‌ಗೆ ಸೇರಿಸಿ, ಏಕ ನಿವೇಶನ ಅನುಮೋದನೆ ಮಾಡಿರುವುದನ್ನು ತಕ್ಷಣ ರದ್ಧುಪಡಿಸಲು ಒತ್ತಾಯಿಸಿ ಬಿಜೆಪಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ದೂಡಾ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ವಾವಿ ವಿವೇಕಾನಂದ ಬಡಾವಣೆಯ ಪಾಲಿಕೆ ಮಾಲೀಕತ್ವದ ಪಾರ್ಕನ್ನು ಶಾಬನೂರು ರಿ.ಸ.ನಂ.127/1ಎ1, 127/1ಎ2, 127/1ಎ3 ಸರ್ವೇ ನಂಬರ್‌ಗೆ ಸೇರಿಸಿ, ಏಕ ನಿವೇಶನ ಅನುಮೋದನೆ ಮಾಡಿರುವುದನ್ನು ತಕ್ಷಣ ರದ್ಧುಪಡಿಸಲು ಒತ್ತಾಯಿಸಿ ಬಿಜೆಪಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ದೂಡಾ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ನಗರದ ದೇವರಾಜ ಅರಸು ಬಡಾವಣೆಯ ಸಂಗೊಳ್ಳ ರಾಯಣ್ಣ ವೃತ್ತದಿಂದ ದೂಡಾ ಕಚೇರಿವರೆಗೆ ಪಕ್ಷದ ಹಿರಿಯ ಮುಖಂಡರಾದ ಯಶವಂತರಾವ್ ಜಾಧವ್‌, ಶಿವನಹಳ್ಳಿ ರಮೇಶ, ರಾಜನಹಳ್ಳಿ ಶಿವಕುಮಾರ, ಬಿ.ಎಸ್.ಜಗದೀಶ, ಎಂ.ಹಾಲೇಶ ಇತರರ ನೇತೃತ್ವದಲ್ಲಿ ಘೋಷಣೆ ಕೂಗುತ್ತ, ದೂಡಾ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಸ್ವಾಮಿ ವಿವೇಕಾನಂದ ಬಡಾವಣೆಯ ಏಕ ನಿವೇಶನ ಅನುಮೋದನೆ ರದ್ಧುಪಡಿಸಲು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಇಲ್ಲಿನ ಸ್ವಾಮಿವಿವೇಕಾನಂದ ಬಡಾವಣೆಯ ಪಾಲಿಕೆ ಮಾಲೀಕತ್ವದ ಪಾರ್ಕನ್ನು ದೂಡಾದಿಂದ 1984ರ ಫೆ.13ರಲ್ಲಿ ಅನುಮೋದನೆ ಕೊಟ್ಟ ವಸತಿ ವಿನ್ಯಾಸದಲ್ಲಿ ಬರುತ್ತದೆ. ಆದರೂ, ಭೂ ಮಾಫಿಯಾದವರಿಗೆ ಪ್ರಾಧಿಕಾರವೇ ಏಕ ನಿವೇಶನ ಮಾಡಿಕೊಟ್ಟಿರುವುದು ಬೇಲಿಯೇ ಎದ್ದು, ಹೊಲ ಮೇಯ್ದಂತಾಗಿದೆ ಎಂದು ಟೀಕಿಸಿದರು.

ಪಾಲಿಕೆ ಮಾಲೀಕತ್ವದ ಪಾರ್ಕ್ ಅಳತೆ 200-220/2* ಅಡಿ ಇರುವುದು ಕಂಡು ಬಂದಿದೆ. 2024ರ ಆ.22ರಂದು ದೂಡಾ ಕಚೇರಿ ಅಭಿಯಂತರರು ಮತ್ತು ಪಾಲಿಕೆ ಕಚೇರಿ ಅಭಿಯಂತರರು ಜಂಟಿ ಪರಿಶೀಲನೆ ಮಾಡಿ, ಪಾಲಿಕೆ-ದೂಡಾ ಭೂ ಮಾಪಕರು ಡಿಜಿಪಿಎಸ್ ಸರ್ವೇ ಮಾಡಿ, ಸ್ಥಳ ಪರಿಶೀಲಿಸಿದಾಗ ಅಲ್ಲಿ ಪಾರ್ಕ್ ಇರುವುದು ಖಚಿತವಾಗಿದೆ ಎಂದು ಹೇಳಿದರು.

ಆದ್ದರಿಂದ ಸೆ.19ರಂದು ಪಾಲಿಕೆಯಿಂದ ದೂಡಾಗೆ ಪತ್ರ ಬರೆದು, ನೀವು ಕೊಟ್ಟಿರುವ ಮೂರು ವಸತಿ ವಿನ್ಯಾಸ ಏಕ ನಿವೇಶನ ಅನುಮೋದನೆ ರದ್ಧುಪಡಿಸಲು ಕೋರಿದ್ದಾರೆ. ಆದರೂ ನೀವು ಈವರೆಗೆ ಅನುಮೋದನೆ ರದ್ಧುಪಡಿಸಿಲ್ಲ. ವಿನ್ಯಾಸಕ್ಕೆ ಅನುಮೋದನೆ ನೀಡುವಾಗ ನಿಮ್ಮಲ್ಲಿರುವ 1984ರಲ್ಲೇ ಅನುಮೋದನೆಯಾದ ಸ.ನಂ127/1ಬಿ ಮತ್ತು 127/2 ಎಬಿಸಿರಲ್ಲಿ ಈ ಉದ್ಯಾನವನ ಇರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದರು.

ದೂಡಾ ಸಹ ವಸತಿ ವಿನ್ಯಾಸ ಏಕ ನಿವೇಶನ ಅನುಮೋದನೆ ರದ್ಧುಪಡಿಸದಿದ್ದರೆ ಈ ಭೂ ಮಾಫಿಯಾದ ಖಾಸಗಿ ವ್ಯಕ್ತಿಗೆ ಸಹಾಯ ಮಾಡಿದಂತಾಗುತ್ತದೆ. ತಕ್ಷಣವೇ ಅದನ್ನು ರದ್ಧುಪಡಿಸಲು ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಮೇಯರ್ ಎಸ್.ಟಿ.ವೀರೇಶ, ಮಾಜಿ ಸದಸ್ಯರಾದ ಎಂ.ಹಾಲೇಶ, ಆರ್.ಶಿವಾನಂದ, ಎಸ್.ಎಂ.ವೀರೇಶ ಹನಗವಾಡಿ. ಶ್ರೀನಿವಾಸ ಟಿ.ದಾಸಕರಿಯಪ್ಪ, ಬಿ.ರಮೇಶ ನಾಯ್ಕ, ಬಿ.ಎಂ.ಸತೀಶ ಕೊಳೇನಹಳ್ಳಿ, ಅಣಬೇರು ಜೀವನಮೂರ್ತಿ, ಹೊನ್ನಾಳಿ ಎಂ.ಆರ್.ಮಹೇಶ, ಎ.ಬಿ.ಹನುಮಂತಪ್ಪ ಅರಕೆರೆ, ಎಸ್.ಟಿ.ಯೋಗೇಶ, ತರಕಾರಿ ಶಿವು, ಗುರು ಸೋಗಿ, ಶಿವನ

ಗೌಡ ಪಾಟೀಲ, ಶಂಕರಗೌಡ ಬಿರಾದಾರ, ಎಂ.ಅಂಜಿನಪ್ಪ ಶಾಬನೂರು, ಬಿ.ಪುಲಿ, ವೀರೇಶ, ಎಚ್.ಸಿ.ಜಯಮ್ಮ, ಕಿರೀಟ್ ಸಿ.ಕಲಾಲ್‌, ಟಿಂಕರ್ ಮಂಜಣ್ಣ, ಬೇತೂರು ಬಸವರಾಜ, ಕೆಟಿಜೆ ನಗರ ಆನಂದ, ನಿಂಗರಾಜ ರೆಟ್ಟಿ, ಪಿ.ಎನ್.ಜಗದೀಶ ಕುಮಾರ ಪಿಸೆ, ಹನುಮಂತರಾವ್ ಆರ್.ಸುರ್ವೆ, ಎಚ್.ಬಿ.ಈರಣ್ಣ, ಕುಮಾರ, ಎಸ್.ಟಿ.ಶ್ರೀನಿವಾಸ, ಬಿ.ಆನಂದ, ಕೆ.ಎ.ಮಾಲತೇಶ, ಕುಮಾರ, ವಿ.ಕೃಷ್ಣ, ಹರೀಶ ಹೊನ್ನೂರು, ಯಲ್ಲಪ್ಪ ಪವಾರ್, ಜಿ.ಕಿಶೋರಕುಮಾರ, ಕೆಟಿಜೆ ನಗರ ಲೋಕೇಶ, ಗಿರೀಶ ಬೇತೂರು ಇತರರು ಇದ್ದರು.