ಸಾರಾಂಶ
ಪುತ್ತೂರು : ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಅನ್ಯಾಯ ನಡೆದ ಆರೋಪದ ವಿಚಾರದಲ್ಲಿ ಬಿಜೆಪಿ ಮತ್ತು ಹಿಂದು ಪರ ಸಂಘಟನೆಗಳು ಸುಮ್ಮನೆ ಕುಳಿತುಕೊಂಡಿಲ್ಲ. ಮದುವೆ ಮಾಡಿಕೊಡಬೇಕು ಎಂಬ ವಿಚಾರದಲ್ಲಿ ನಾವು ಹುಡುಗಿ ಪರವಾಗಿದ್ದೇವೆ. ಪ್ರಕರಣದ ವಿಚಾರದಲ್ಲಿ ನಮ್ಮ ಪೂರ್ಣ ಪ್ರಮಾಣದ ಯೋಚನೆಯು ಸಂತ್ರಸ್ತೆಯ ಪರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ, ಘಟನೆಯ ವಿಚಾರದಲ್ಲಿ ಬಿಜೆಪಿ ಹಾಗೂ ಪರಿವಾರ ಸಂಘಟನೆಯ ನಿಲುವು ಸ್ಪಷ್ಟವಿದೆ. ಹಿಂದೆ, ಇಂದು ಮತ್ತು ಮುಂದೆಯೂ ಪಕ್ಷವು ಸಂತ್ರಸ್ತೆಯ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ. ಈ ಬಗ್ಗೆ ಮುಖಂಡರ ಜತೆಗೆ ಪಕ್ಷದ ಕಡೆಯಿಂದ ಮಾತುಕತೆಗಳು ನಡೆದಿದ್ದು, ಕೊಟ್ಟಮಾತಿನಂತೆ ನಡೆದುಕೊಳ್ಳಲು ಸೂಚಿಸಲಾಗಿದೆ. ಇದಕ್ಕೆ ಅವರು ಒಪ್ಪಿಕೊಳ್ಳದಿದ್ದರೆ, ಅವರ ಮೇಲೆಯೂ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಶಾಸಕ ಸಂಜೀವ ಮಠಂದೂರು, ನಗರ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು.
ಹಿಂದು ಹೆಣ್ಣು ಮಗುವಿಗೆ ಸಮಸ್ಯೆಯಾಗಬಾರದು:
ಹೆಣ್ಣುಮಗಳಿಗೆ ಅನ್ಯಾಯವಾದ ವಿಚಾರ ಜೂ.18 ರಂದು ಗಮನಕ್ಕೆ ಬಂದಿದ್ದು, ಬಿಜೆಪಿ ಮುಖಂಡರದಲ್ಲಿ ಮಾತುಕತೆ ನಡೆಸಿದಾಗ ಮಗ ಒಪ್ಪುತ್ತಿಲ್ಲ ಎಂದಿದ್ದರು. ಜಾತಿ ವಿಚಾರ ಯಾವುದೂ ಇಲ್ಲ, ಹಿಂದು ಹೆಣ್ಣು ಮಗುವಿಗೆ ಸಮಸ್ಯೆಯಾಗವಾರದು ಎಂದಾಗ ಜೂ.೨೩ರ ಬಳಿಕ ಅವರಿಬ್ಬರ ನೊಂದಾವಣಿ ವಿವಾಹ ಮಾಡುವುದಾಗಿ ಒಪ್ಪಿಕೊಂಡಿದ್ದರು ಎಂದು ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ.ಸಂತ್ರಸ್ತೆಯ ತಾಯಿ ಮಾತನಾಡಿ, ನಾನು ಯಾವ ಸಂಘಟನೆಯಲ್ಲೂ ಇಲ್ಲ. ಮಗುವಿಗೆ ಅಪ್ಪನ ಸ್ಥಾನ ಕೊಡಿಸಿ ಎಂದು ಹೇಳುತ್ತಿದ್ದೇನೆ ಎಂದರು. ಈ ಸಂದರ್ಭ ಬಜರಂಗದಳ, ವಿಶ್ವಹಿಂದೂ ಪರಿಷದ್ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))