ಹಾವೇರಿ: ಇಲ್ಲಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಪಕ್ಷದ 47ನೇ ಸಂಸ್ಥಾಪನಾ ದಿನವನ್ನು ಧ್ವಜಾರೋಹಣ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ವಿಭಾಗೀಯ ಸಹ ಪ್ರಭಾರಿ ಭೋಜರಾಜ ಕರೂದಿ ಮಾತನಾಡಿ, ಪಕ್ಷದ ಏಳಿಗೆಗಾಗಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರ ಬಲಿದಾನದಿಂದ ಪಕ್ಷ ಗಟ್ಟಿನೆಲೆ ಪಡೆದುಕೊಂಡಿದೆ. ರಾಜಕೀಯ ಶಕ್ತಿಯಾಗಿ ದೇಶಾದ್ಯಂತ ಮತ್ತು ಕರ್ನಾಟಕದಲ್ಲಿಯೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ನಾಯಕತ್ವದಲ್ಲಿ ದೇಶದಲ್ಲಿ ಬಿಜೆಪಿ ಸದೃಢವಾಗಿದೆ. ಬಿಜೆಪಿ ಕಾರ್ಯಕರ್ತರ ಒಗ್ಗೂಡಿಕೆ ಹಾಗೂ ಸಂಘಟನಾತ್ಮಕ ಚಟುವಟಿಕೆಯಿಂದ ಪಕ್ಷವು ಮುಂಬರುವ ಎಲ್ಲ ಕಾರ್ಯಕರ್ತರ ಚುನಾವಣೆಯಲ್ಲಿ ಯಶ್ವಸಿಯಾಗಬೇಕೆಂದು ಕರೆ ನೀಡಿದರು.ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ದೇಶಾದ್ಯಂತ ಸಂಘಟನೆಯಲ್ಲಿ ಬಲವಿದೆ, ಸಂಘಾಟನಾತ್ಮಕ ಶಕ್ತಿ ಬಲ ಪಡಿಸೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯ ನಾಗೇಂದ್ರ ಕಟಕೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿರಣ ಕೋಣನವರ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಶೆಟ್ಟಿ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಪ್ಪ ಹರಿಜನ, ಹಾವೇರಿ ನಗರ ಮಂಡಲ ಅಧ್ಯಕ್ಷ ಕಿರಣ ಕೊಳ್ಳಿ, ರುದ್ರೇಶ ಚಿನ್ನಣ್ಣನವರ, ಗುಡ್ಡಪ್ಪ ಭರಡಿ, ನಾಗರಾಜ ಹರಿಗೋಲ, ಕೃಷ್ಣ ಲಮಾಣಿ, ಶ್ರೀಕಾಂತ ವಡ್ಡರ, ಮನೋಜ ಜಾಧವ, ಮೃತ್ಯುಂಜಯ ಮುಷ್ಠಿ, ಸುನೀಲ ರಾಯ್ಕರ್, ಸುನೀಲ ಬೇಟಗೇರಿ, ಶಂಭು ಹತ್ತಿ, ರಾಜಶೇಖರ ಮುಂಡಾಸದ, ಯಲ್ಲಪ್ಪ ಸಿರಗೇರಿ, ಕುಮಾರ, ಈರಣ್ಣ ಹೊನ್ನಾಳಿ, ವಿಜಯಲಕ್ಷ್ಮಿ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಘಟನೆಯಿಂದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಯಶ್ವಸಿಯಾಗಬೇಕು
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಪಕ್ಷದ 47ನೇ ಸಂಸ್ಥಾಪನಾ ದಿನವನ್ನು ಧ್ವಜಾರೋಹಣ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.