ಬಿಜೆಪಿ ಜಿಲ್ಲಾಧ್ಯಕ್ಷರ ಸ್ಥಾನ ಕುರುಬ ಜನಾಂಗಕ್ಕೆ ನೀಡಲಿ: ಕೆ.ಬಿ.ಸೋಮೇಶ್

| Published : Jan 24 2025, 12:47 AM IST

ಬಿಜೆಪಿ ಜಿಲ್ಲಾಧ್ಯಕ್ಷರ ಸ್ಥಾನ ಕುರುಬ ಜನಾಂಗಕ್ಕೆ ನೀಡಲಿ: ಕೆ.ಬಿ.ಸೋಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

BJP should give the post of district president to a Kuruba community: K.B. Somesh

ಕನ್ನಡಪ್ರಭವಾರ್ತೆ ಕಡೂರು

ಹಿಂದುಳಿದ ವರ್ಗಗಳ ಸಂಘಟನೆಯ ಹಿತದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಕುರುಬ ಸಮಾಜಕ್ಕೆ ನೀಡಬೇಕು ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಬಿ.ಸೋಮೇಶ್ ಒತ್ತಾಯಿಸಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಬಿಜೆಪಿ ಘಟಕದಿಂದ ಪ್ರತಿ ಜಿಲ್ಲೆಯ ಬಿಜೆಪಿ ಘಟಕದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷರ ಸ್ಥಾನವನ್ನು ತೆರವುಗೊಳಿಸಿ ನೂತನ ಅಧ್ಯಕ್ಷರಾಗಿ ಹಿಂದುಳಿದ ವರ್ಗವಾಗಿರುವ ಕುರುಬ ಸಮಾಜದವರಿಗೆ ನೀಡಿದರೆ ಬಿಜೆಪಿಗೆ ಹಿಂದುಳಿದವರನ್ನು ಸೆಳೆಯಲು ಅನುಕೂಲವಾಗಲಿದೆ. ಈ ಕುರಿತು ರಾಜ್ಯ ಮತ್ತು ಜಿಲ್ಲೆಯ ಬಿಜೆಪಿ ಮುಖಂಡರಿಗೆ ಮನವಿ ಮಾಡುವುದಾಗಿ ಸೋಮೇಶ್ ತಿಳಿಸಿದರು.

ಜಿಲ್ಲೆಯಲ್ಲಿ ಈ ಸಮಾಜದ ಅನೇಕರು ಬಿಜೆಪಿ ಪಕ್ಷ ಕಟ್ಟಲು ಶ್ರಮಿಸಿದ್ದು, ಸಂಘಟನೆಯಲ್ಲಿ ದಶಕಗಳ ಕಾಲ ದುಡಿದಿದ್ದಾರೆ ಅವರನ್ನು ಗುರುತಿಸಿ ಈ ಭಾರಿ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಲಿ. ಇದರಿಂದ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಂಕ್ ಮಂಜುನಾಥ್, ಕೆ.ಜಿ.ಲೋಕೇಶ್ವರ್, ಅಭಿಷೇಕ್, ಸಚ್ಚಿನ್, ಪುರಸಭೆ ಮಾಜಿ ಉಪಾಧ್ಯಕ್ಷ ಕೆ.ಜಿ.ಲೋಕೇಶ್ ಇದ್ದರು.

------

23ಕೆಕೆಡಿಯು3

ಕೆ.ಬಿ.ಸೋಮೇಶ್.