ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ 50ನೇ ವರ್ಷದ ಹುಟ್ಟುಹಬ್ಬ ಆಚರಣೆ

| Published : Nov 06 2025, 01:45 AM IST

ಸಾರಾಂಶ

ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಗರ್ಭಿಣಿ- ಬಾಣಂತಿಯರು ಮತ್ತು ಅಗತ್ಯಯುಳ್ಳವರಿಗೆ ಪೌಷ್ಟಿಕಾಹಾರ ವಿತರಣೆ ಮಾಡಲಾಯಿತು.

ಕಾರ್ಯಕರ್ತರಿಂದ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆ । ಭಾವಿಚಿತ್ರಕ್ಕೆ ಕ್ಷೀರಾಭಿಷೇಕ, ಗೋವುಗಳಿಗೆ ಮೇವು ವಿತರಣೆ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ 50ನೇ ವರ್ಷದ ಹುಟ್ಟುಹಬ್ಬದಂದು ವಿವಿಧ ಸಾಮಾಜಿಕ ಕಾರ್ಯಗಳನ್ನು ನಡೆಸಿದರು.

ನಗರದ ಶ್ರೀ ಕಾಳಿಕಾಂಬೆ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಜಕೀಯ ಭವಿಷ್ಯಕ್ಕಾಗಿ ಉರುಳು ಸೇವೆ ಮಾಡಿದರು.

ವಿಜಯೇಂದ್ರರ ಹುಟ್ಟುಹಬ್ಬ ಹಿನ್ನೆಲೆ ನಗರದಲ್ಲಿ ಬಿಜೆಪಿಯಿಂದ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮತ್ತು ಗೋ ಶಾಲೆಯಲ್ಲಿನ ಗೋವುಗಳಿಗೆ ಮೇವು ವಿತರಿಸಿ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಗರ್ಭಿಣಿ- ಬಾಣಂತಿಯರು ಮತ್ತು ಅಗತ್ಯಯುಳ್ಳವರಿಗೆ ಪೌಷ್ಟಿಕಾಹಾರ ವಿತರಣೆ ಮಾಡಲಾಯಿತು.

ವಿಜಯೇಂದ್ರ ಅವರು ತಮ್ಮ ಹುಟ್ಟುಹಬ್ಬವನ್ನು ಬಿಜೆಪಿ ಕಾರ್ಯಕರ್ತರು ವಿಜೃಂಭಣೆಯಿಂದ ಮಾಡಬಾರದು. ರೈತರ ಪ್ರತಿಭಟನೆಗೆ ನನ್ನ ಬೆಂಬಲ ಇರುವುದರಿಂದ ಅವರ ಜ್ವಲಂತ ಸಮಸ್ಯೆಗಳ ಬಗೆಹರಿವಿಗಾಗಿ ನಾನು ಬೆಂಬಲ ನೀಡುತ್ತಿದ್ದೇನೆ ಎಂದು ಹೇಳಿರುವುದರಿಂದ ನಾವು ಸರಳವಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಮುಂಬರುವ 2028ರ ಚುನಾವಣೆ ನೇತೃತ್ವವನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಾರಥ್ಯದಲ್ಲಿ ನಡೆದು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಿ ಬಿಜೆಪಿ ಹೈಕಮಾಂಡ್ ಅನ್ನು ಒತ್ತಾಯಿಸಿದರು.

ವಿವಿಧ ಸೇವಾ ಕಾರ್ಯಗಳೊಂದಿಗೆ ವಿಜಯೇಂದ್ರ ಅವರ ರಾಜಕೀಯ ಭವಿಷ್ಯ, ಆಯಸ್ಸು, ಆರೋಗ್ಯ ವೃದ್ಧಿಗಾಗಿ ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆ ಉರುಳು ಸೇವೆ ಯಶಸ್ವಿಯಾಗಿ ನಡೆದವು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಸಚ್ಚಿದಾನಂದ ಇಂಡವಾಳು, ರೈತಮೋರ್ಚಾ ಅಧ್ಯಕ್ಷ ಅಶೋಕ್‌ ಜಯರಾಂ, ಸಂಘದ ಅಧ್ಯಕ್ಷ ನೆರಳು ಕೃಷ್ಣ, ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ವಸಂತ್, ಶಿವಕುಮಾರ್ ಆರಾಧ್ಯ, ಕೆಂಪಬೋರಯ್ಯ, ಫುಟ್ ಬಾಲ್ ಮಂಜು, ವಿವೇಕ್, ಚಂದ್ರ, ನಂದೀಶ್, ಕೆ.ಎಲ್.ಆನಂದ್, ಭೀಮೇಶ್, ಆನಂದ್, ಹೊಸಹಳ್ಳಿ ಶಿವು, ಪ್ರಸನ್ನ, ಕೇಶವ್, ಡಾ.ಸದಾನಂದ, ನರಸಿಂಹಮೂರ್ತಿಗೌಡ, ಸಿ.ಟಿ.ಮಂಜುನಾಥ್, ವರದರಾಜು, ಕೆಂಪಬೋರಯ್ಯ, ಯೋಗೇಶ್ ಇದ್ದರು.