ಸಾರಾಂಶ
‘ಸತತ 3ನೇ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಕೂಟಗಳು ಗೆಲುವು ಕಾಣಲಿವೆ. ಈ ಮೂಲಕ ಕೇಂದ್ರದಲ್ಲಿ ಹ್ಯಾಟ್ರಿಕ್ ಅವಧಿಗೆ ಎನ್‌ಡಿಎ ಸರ್ಕಾರ ಪ್ರತಿಷ್ಠಾಪಿತವಾಗಲಿದೆ’ ಎಂದು ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ನವದೆಹಲಿ: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ ಎಂದು ಹೇಳಿವೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಭಾರಿ ಹಿನ್ನಡೆ ಕಾಣಲಿದೆ, ಆದರೆ ಕಳೆದ ಚುನಾವಣೆಗಿಂತ ಕಾಂಗ್ರೆಸ್ ಪಕ್ಷದ ಗಳಿಕೆ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿವೆ.
ನ್ಯೂಸ್ 18 ಮೆಗಾ ಎಕ್ಸಿಟ್ ಪೋಲ್ ಪ್ರಕಾರ, ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 23-26 ಸ್ಥಾನ ಬರಲಿದೆ. ಕಾಂಗ್ರೆಸ್ ಕೇವಲ 3-7 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಗೆಲುವು ದಾಖಲಿಸಬಹುದು ಎಂದು ಹೇಳಿದೆ.
ರಿಪಬ್ಲಿಕ್ ಟೀವಿ ಸಮೀಕ್ಷೆ ಪ್ರಕಾರ ಬಿಜೆಪಿ-ಜೆಡಿಎಸ್ 22, ಕಾಂಗ್ರೆಸ್ 6 ಸ್ಥಾನ ಗೆಲ್ಲಲಿವೆ.
ಇನ್ನು ಇಂಡಿಯಾ ಟುಡೇ ಹಾಗೂ ಎಬಿಪಿ ನ್ಯೂಸ್ ಸಮೀಕ್ಷೆಗಳು ಒಂದೇ ತೆರನಾದ ಭವಿಷ್ಯ ನುಡಿದಿವೆ. ಎರಡೂ ಸಮೀಕ್ಷೆಗಳು ಎನ್‌ಡಿಎಗೆ 23-25 ಹಾಗೂ ಕಾಂಗ್ರೆಸ್‌ಗೆ 3-5 ಸ್ಥಾನ ನೀಡಿವೆ.
ಇಂಡಿಯಾ ಟೀವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಜೆಡಿಎಸ್‌ಗೆ 1-3 ಹಾಗೂ ಬಿಜೆಪಿಗೆ 18-22 ಸ್ಥಾನದ ಭವಿಷ್ಯ ನುಡಿಯಲಾಗಿದೆ. ಕಾಂಗ್ರೆಸ್‌ಗೆ 4ರಿಂದ 8 ಸ್ಥಾನ ಬರಬಹುದು ಎನ್ನಲಾಗಿದೆ.
ಇನ್ನು ಚಾಣಕ್ಯ ಸಮೀಕ್ಷೆಯು ಎನ್‌ಡಿಎಗೆ 24 ಹಾಗೂ ಕಾಂಗ್ರೆಸ್ 4 ಸ್ಥಾನ ಗಳಿಸಲಿದೆ ಎಂದಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25, ಜೆಡಿಎಸ್ 1, ಕಾಂಗ್ರೆಸ್ 1 ಹಾಗೂ ಪಕ್ಷೇತರರು 1 ಸ್ಥಾನದಲ್ಲಿ ಗೆದ್ದಿದ್ದರು.
ಪೋಲ್ ಆಫ್ ಪೋಲ್ಸ್ (28 ಸ್ಥಾನ)
ಬಿಜೆಪಿ21
ಕಾಂಗ್ರೆಸ್5
ಜೆಡಿಎಸ್ 2