ಖಾಲಿ ಚೊಂಬು ಅಭಿಯಾನಕ್ಕೆ ಬಿಜೆಪಿ ಬೆದರಿದೆ: ಡಾ.ನಾಡಗೌಡ

| Published : May 06 2024, 12:34 AM IST

ಸಾರಾಂಶ

ರಬಕವಿ-ಬನಹಟ್ಟಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಅಧಿಕಾರ ಕೊಟ್ಟಿಲ್ಲವೆಂದು ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ದ್ವೇಷ ಸಾಧಿಸುವ ಕಾರ್ಯ ಮಾಡುತ್ತಿದೆ ಎಂದು ಡಾ.ಪದ್ಮಜೀತ ನಾಡಗೌಡ ಪಾಟೀಲ ಹೇಳಿದರು.

ರಬಕವಿ-ಬನಹಟ್ಟಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಅಧಿಕಾರ ಕೊಟ್ಟಿಲ್ಲವೆಂದು ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ದ್ವೇಷ ಸಾಧಿಸುವ ಕಾರ್ಯ ಮಾಡುತ್ತಿದೆ. ಕಾಂಗ್ರೆಸ್ ನಡೆಸುತ್ತಿರುವ ಖಾಲಿ ಚೊಂಬಿನ ಅಭಿಯಾನಕ್ಕೆ ಬಿಜೆಪಿ ಬೆದರಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ ನಾಡಗೌಡ ಪಾಟೀಲ ಹೇಳಿದರು.ರಬಕವಿ-ಬನಹಟ್ಟಿಯಲ್ಲಿ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ರಾಜ್ಯದ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದೇ ವೇಳೆ ರಾಜ್ಯದ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದರು.

ಶಂಕರ ಸೊರಗಾಂವಿ ಮಾತನಾಡಿ, ಬರ ಪರಿಹಾರ ವಿಚಾರದಲ್ಲೂ ಕೇಂದ್ರ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯಬಾರದಿತ್ತು. ರಾಜ್ಯದ ಜನರ ಹಿತದೃಷ್ಟಿಗಾಗಿ ನ್ಯಾಯಾಲಯ ಮೂಲಕ ಪರಿಹಾರ ಪಡೆಯಬೇಕಾಯಿತು. ಇಂತಹ ಪರಿಸ್ಥಿತಿ ಎಂದಿಗೂ ಯಾರಿಗೂ ಬಾರದಿರಲೆಂದು ಸೊರಗಾಂವಿ ಹೇಳಿದರು. ಮಾಳು ಹಿಪ್ಪರಗಿ, ರವೀಂದ್ರ ಬಾಡಗಿ, ಕುಬೇರ ಸಾರವಾಡ, ಸಂಜು ಅಮ್ಮಣಗಿಮಠ, ಕರಬಸು ಆರಗಿ, ಮಹೇಶ ಮಲಾಗುದ್ದಿ, ಶಂಕರ ಕೆಸರಗೊಪ್ಪ, ಓಂಪ್ರಕಾಶ ಮನಗೂಳಿ, ಮೆಹಬೂಬ ನದಾಫ್, ಪ್ರಶಾಂತ ನಾಯಕ, ಪ್ರಶಾಂತ ಶೆಟ್ಟಿ, ಕುತಬುದ್ದೀನ ಮುಲ್ಲಾ, ರಾಹುಲ್ ಎಕ್ಕೇಲಿ ಸೇರಿದಂತೆ ಅನೇಕರಿದ್ದರು.