ಜಿಗಜಿಣಗಿಯವರಿಗೆ ಬಿಜೆಪಿ ಟಿಕೆಟ್‌ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಮುನ್ನುಡಿ: ರವಿ

| Published : Mar 16 2024, 01:49 AM IST

ಜಿಗಜಿಣಗಿಯವರಿಗೆ ಬಿಜೆಪಿ ಟಿಕೆಟ್‌ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಮುನ್ನುಡಿ: ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ರಾಜಕಾರಣಿ ಹಾಗೂ ಸೋಲಿಲ್ಲದ ಸರದಾರವೆಂದೇ ಖ್ಯಾತರಾದ ಸಂಸದ ರಮೇಶ ಜಿಗಜಿಣಗಿ ಅವರಿಗೆ ವಿಜಯಪುರ (ಮೀಸಲು)ಲೋಕಸಭಾ ಕ್ಷೇತ್ರಕ್ಕೆ ವರಿಷ್ಠರು ಬಿಜೆಪಿ ಟಿಕೆಟ್ ನೀಡಿದ್ದು ಜಿಲ್ಲೆಯಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಮುನ್ನುಡಿ ಬರೆದಂತಾಗಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ, ತಾಲೂಕಿನ ಭುಯ್ಯಾರ ಗ್ರಾಮದ ಯುವ ಮುಖಂಡ ರವಿ ವಗ್ಗೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ

ಹಿರಿಯ ರಾಜಕಾರಣಿ ಹಾಗೂ ಸೋಲಿಲ್ಲದ ಸರದಾರವೆಂದೇ ಖ್ಯಾತರಾದ ಸಂಸದ ರಮೇಶ ಜಿಗಜಿಣಗಿ ಅವರಿಗೆ ವಿಜಯಪುರ (ಮೀಸಲು)

ಲೋಕಸಭಾ ಕ್ಷೇತ್ರಕ್ಕೆ ವರಿಷ್ಠರು ಬಿಜೆಪಿ ಟಿಕೆಟ್ ನೀಡಿದ್ದು ಜಿಲ್ಲೆಯಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಮುನ್ನುಡಿ ಬರೆದಂತಾಗಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ, ತಾಲೂಕಿನ ಭುಯ್ಯಾರ ಗ್ರಾಮದ ಯುವ ಮುಖಂಡ ರವಿ ವಗ್ಗೆ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಹರ್ಷ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಮೂಲಕ ಜಗತ್ತಿನಲ್ಲಿ ಭಾರತ ಆರ್ಥಿಕತೆಯಲ್ಲಿ ಮೂರನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕಳೆದ 10 ವರ್ಷಗಳಿಂದ ದೇಶದ ಸರ್ವರ ಹಿತ ಕಾಯುವ ನಿಟ್ಟಿನಲ್ಲಿ ಹಾಗೂ ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರಗಳಲ್ಲಿ ಭಾರತವೂ ಒಂದು ಎನ್ನುವುದನ್ನು ಮೋದಿಜೀ ಸಾಧಿಸಿ ತೊರಿಸಿದ್ದಾರೆ. ದೇಶಕ್ಕೆ ಮೋದಿಜೀ ಮತ್ತೊಮ್ಮೆ ಪ್ರಧಾನಿಯಾಗಲೆಂದು ಯುವಕರು ತುದಿಗಾಲಲ್ಲಿ ನಿಂತಿದ್ದು, ಇದಕ್ಕೆ ಪೂರಕವಾಗುವಂತೆ ಹಿರಿಯ ರಾಜಕಾರಣಿ ಜಿಗಜಿಣಗಿ ಸಾಹೇಬರು ಮತ್ತೊಮ್ಮೆ ಆಯ್ಕೆಯಾಗುವ ಮೂಲಕ ದೇಶದಲ್ಲಿ ಬಿಜೆಪಿ ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಹಾಲಿ ಸಂಸದ ರಮೇಶ ಜಿಗಜಿಣಗಿ ಸಾಹೇಬರ ಗೆಲುವು ನಿಶ್ಚಿತವಾಗಿದ್ದು, ಅತೀ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಬೇಕಾದ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿಜೀ ಹಾಗೂ ಸಂಸದ ಜಿಗಜಿಣಗಿ ಸಾಹೇಬರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಬಿಜೆಪಿ ಗೆಲ್ಲಿಸಲು ಶ್ರಮಿಸಬೇಕು.

-ರವಿ ವಗ್ಗೆ (ಭುಯ್ಯಾರ), ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷರು.