ಬಿಜೆಪಿಗೆ ಹಿಂದುತ್ವವನ್ನು ಬರೆದು ಕೊಟ್ಟಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು

| Published : Sep 02 2025, 01:00 AM IST

ಬಿಜೆಪಿಗೆ ಹಿಂದುತ್ವವನ್ನು ಬರೆದು ಕೊಟ್ಟಿಲ್ಲ: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುತ್ವದ ಹಣೆಪಟ್ಟಿ ಕಟ್ಟಿಕೊಂಡು ಧರ್ಮಸ್ಥಳಕ್ಕೆ ತೆರಳಿದ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಹಿಂದುತ್ವವನ್ನು ಅವರಿಗೆ ಬರೆದು ಕೊಟ್ಟಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಹಿಂದುತ್ವದ ಹಣೆಪಟ್ಟಿ ಕಟ್ಟಿಕೊಂಡು ಧರ್ಮಸ್ಥಳಕ್ಕೆ ತೆರಳಿದ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಹಿಂದುತ್ವವನ್ನು ಅವರಿಗೆ ಬರೆದು ಕೊಟ್ಟಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದರು.

ಇಲ್ಲಿಯ ಐಗಿನ ಬೈಲಿನಲ್ಲಿ ಭಾನುವಾರ ನಡೆದ ಸಾರ್ವಜನಿಕ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಧರ್ಮಸ್ಥಳದಲ್ಲಿ ಸೌಜನ್ಯ ಸಾವಿನ ಪ್ರಕರಣ ಕಳೆದ13 ವರ್ಷಗಳಿಂದ ಬಹಳಷ್ಟು ಗೊಂದಲಕ್ಕೆ ಸೃಷ್ಟಿಯಾದ ಹಿನ್ನೆಲೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿ ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತಂದ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಮೊದಲು ಎಸ್ಥೈಟಿ ತನಿಖೆಯನ್ನು ಸ್ವಾಗತಿಸಿದ ಬಿಜೆಪಿಯರೇ ಈಗ ಹಿಂದುತ್ವ ಹಿಂದುತ್ವ ಎಂದು ಹೋರಾಡುತ್ತಿದ್ದಾರೆ ಎಂದು ಅಣಕವಾಡಿದರು.

ಬಿಜೆಪಿಯವರು ಮಾತ್ರ ಹಿಂದುಗಳ, ನಾವು ಹಿಂದುಗಳಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿಗೆ ಹಿಂದುತ್ವವನ್ನು ಯಾರೂ ಬರೆದು ಕೊಟ್ಟಿಲ್ಲ, ಧರ್ಮಸ್ಥಳ ಕ್ಷೇತ್ರ ಅವರೊಬ್ಬರಿಗೆ ಸೇರಿದ ಹಾಗೆ ಮಾಡುತ್ತಿರುವುದು ಸರಿಯಲ್ಲ. ಈ ಪುಣ್ಯಕ್ಷೇತ್ರ ಸಾರ್ವಜನಿಕರ ಆಸ್ತಿ. ಇದನ್ನು ದೊಡ್ಡ ಮಟ್ಟದಲ್ಲಿ ಹಿಂದುತ್ವ ಎಂದು ಬಿಂಬಿಸಲು ಹೊರಟಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದರು.

ಎಸ್‌ಐಟಿ ನೇಮಕ ಮಾಡಿರುವುದೇ ಧರ್ಮಸ್ಥಳಕ್ಕೆ ಬಂದ ಕಳಂಕ ತೊಡೆದು ಹಾಕುವ ದೃಷ್ಟಿಯಿಂದ. ಇದರ ಬಗ್ಗೆ ಬಿಜೆಪಿಯವರು ಗೊಂದಲ ಸೃಷ್ಟಿಸಬಾರದು ಇದು ನಿಮಗೆ ಶೋಭೆ ತರುವಂತದ್ದಲ್ಲ ಎಂದರು.