ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಶಾಲಿಯಾಗಲಿದೆ. ಅದರೊಂದಿಗೆ ಬೀದರ್ ಕ್ಷೇತ್ರದಲ್ಲಿ ಈ ಬಾರಿ 2 ಲಕ್ಷ ಮತಗಳಿಂದ ಪಕ್ಷದ ಗೆಲವು ಖಚಿತ ಎಂದು ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜಸಿಂಗ ಚವ್ಹಾಣ ನುಡಿದರು.ಪಟ್ಟಣದ ಥೇರ್ ಮೈದಾನದಲ್ಲಿ ಬುಧವಾರ ಸಂಜೆ ನಡೆದ ಬೀದರ್ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೆ ಲೋಕತಂತ್ರ ಸಿಕ್ಕಿದೆ. ಅದು ಕೂಡ ಬಸವೇಶ್ವರರ ಈ ಭೂಮಿಯಿಂದ ಸಿಕ್ಕಿದೆ ಎಂದರು.
ಬಿಜೆಪಿ ಒಂದು ಕುಟುಂಬ ಇದ್ದಂತೆ. ನಮ್ಮ ಲಕ್ಷ ಶಕ್ತಿಶಾಲಿ ವಿಶ್ವಗುರು ಮಾಡುವ ಉದ್ದೇಶ ಹಾಗೂ ಜನರ ವಿಕಾಸಕ್ಕಾಗಿ ಪಕ್ಷ ಕೆಲಸ ಮಾಡುತ್ತಿದೆ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಎಂದರೆ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ ಅವರು. ಮೋದಿ ನೇತೃತ್ವದಲ್ಲಿ ವಿಶ್ವಗುರು ಆಗುವದರಲ್ಲಿ ಯಾವುದೇ ಸಂದೇಹವಿಲ್ಲ.ವಿಶ್ವದಲ್ಲಿ ಎಲ್ಲಾ ದೇಶಗಳು ಏನಾದರೂ ಆಗಲಿ ಭಾರತದ ಜೊತೆಗೆ ಉತ್ತಮ ಸಂಬಂದ ಇರಬೇಕು ಎಂದು ಹೇಳುತ್ತಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್ ಬಳಿ ಹಣ ಇಲ್ಲ ಎಂದರೆ ತಮ್ಮ ಹುದ್ದೆ ಬಿಡಲಿ. ಮೋದಿ ನೇತೃತ್ವದಲ್ಲಿ ಕರ್ನಾಟಕ ವಿಕಾಸದಲ್ಲಿ ಯಾವುದೇ ಯೋಜನೆಗಳು ಕೈ ಬಿಟ್ಟಿಲ್ಲ ಎಂದು ಹೇಳಿದರು.
ಚುನಾವಣೆಗಾಗಿ ಕೇವಲ 55 ದಿನ ಉಳಿದಿದೆ. ಅದಕ್ಕಾಗಿ ಬೂತ್‌ಮಟ್ಟದಲ್ಲಿ ಕಾರ್ಯಕರ್ತರು ರಾಜ್ಯದಲ್ಲಿ 28 ಸ್ಥಾನದಲ್ಲು ಬಿಜೆಪಿ ಗೆಲ್ಲಲು ಶ್ರಮಿಸಬೇಕು. ಇದಕ್ಕೆ ಗಾಂವ ಚಲೋ ಅಭಿಯಾನ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳು ಕುರಿತು ಮಾಹಿತಿ ನೀಡಬೇಕು. ಜತೆಗೆ ನಮ್ಮಿಂದ ದೂರ ಇರುವ ಮತದಾರರಿಗೂ ನಮ್ಮೊಂದಿಗೆ ಸೇರಿಸಲು ಅವರೊಂದಿಗೆ ಸಂಪರ್ಕಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.ಕೇಂದ್ರ ಸಚಿವ ಭಗವಂತ ಖೂಬಾ, ಕಲಬುರಗಿ ಸಂಸದ ಉಮೇಶ ಜಾಧವ, ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ್, ಶರಣು ಸಲಗರ, ಚಿಂಚೋಳಿ ಶಾಸಕ ಅವಿನಾಶ ಜಾಧವ, ಕಲಬುರಗಿ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪೂರೆ, ಬಿಎಸ್ಎಸ್ಕೆ ಅಧ್ಯಕ್ಷ ಮಾಜಿ ಶಾಸಕ ಸುಭಾಷ ಕಲ್ಲೂರ, ಪ್ರಕಾಶ ಖಂಡ್ರೆ, ಶಿವರಾಜ ಗಂದಗೆ, ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ರವಿಕುಮಾರ ಹೊಸಳ್ಳಿ, ರಮೇಶ ಕಲ್ಲೂರ, ಪದ್ಮಾಕರ ಪಾಟೀಲ್, ಗುರುನಾಥ ಜ್ಯಾಂತಿಕರ್, ಮತ್ತಿತರರು ಇದ್ದರು.