ಕಂಪ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

| Published : Nov 15 2025, 02:30 AM IST

ಕಂಪ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರ ಚುನಾವಣೆ ಫಲಿತಾಂಶ ಎಲ್ಲ ಎಕ್ಸಿಟ್ ಪೋಲ್‌ಗಳ ಅಂದಾಜುಗಳನ್ನು ಮೀರಿಸಿ, ಎನ್‌ಡಿಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದೆ.

ಕಂಪ್ಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಯು ಮೈತ್ರಿಕೂಟ ಬಹುಮತ ಸಾಧಿಸಿ ಅಧಿಕಾರಕ್ಕೆ ಮರಳಿದ ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ ಮಾತನಾಡಿ, ಬಿಹಾರ ಚುನಾವಣೆ ಫಲಿತಾಂಶ ಎಲ್ಲ ಎಕ್ಸಿಟ್ ಪೋಲ್‌ಗಳ ಅಂದಾಜುಗಳನ್ನು ಮೀರಿಸಿ, ಎನ್‌ಡಿಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದೆ. ಜನರು ಮಹಾಘಟಬಂಧನವನ್ನು ಸತತ ಸೋಲಿನ ನಿದ್ರೆಗೆ ಒಪ್ಪಿಸಿದ್ದಾರೆ. ಈ ಗೆಲುವು ಕೇವಲ ಚುನಾವಣಾ ಜಯವಲ್ಲ, ಇದು ಅಭಿವೃದ್ಧಿಯ ರಾಜಕೀಯಕ್ಕೆ ಮತ್ತು ಕಾರ್ಯಪರ ಆಡಳಿತಕ್ಕೆ ಜನ ನೀಡಿದ ಸ್ಪಷ್ಟ ಆದೇಶ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ನಡೆದಿರುವ ಯೋಜನೆಗಳು, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಸರ್ಕಾರ ಕೈಗೊಂಡ ನಿರ್ಧಾರಗಳು ಬಿಹಾರ ಮತದಾರರ ಮನ ಗೆದ್ದಿವೆ. ಬಿಹಾರದ ಸಾಮಾನ್ಯ ಜನರು ಮೋದಿಯವರ ಅಭಿವೃದ್ಧಿ ಮಾದರಿಯನ್ನು ವಿಶ್ವಾಸದಿಂದ ಸ್ವೀಕರಿಸಿ, ಅದಕ್ಕೆ ತಮ್ಮ ಮತಗಳ ಮುಖಾಂತರ ಆಶೀರ್ವಾದ ನೀಡಿದ್ದಾರೆ.

ಈ ಫಲಿತಾಂಶ ಭಾರತದ ರಾಜಕೀಯದಲ್ಲಿ ಧನಾತ್ಮಕತೆ, ಅಭಿವೃದ್ಧಿ, ದೃಢ ನಾಯಕತ್ವ ಮತ್ತು ರಾಷ್ಟ್ರಪ್ರಥಮ ತತ್ವಗಳಿಗೆ ಜನರು ಒಲವು ತೋರಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಬಿಹಾರದ ಜನತೆ ರಾಷ್ಟ್ರದ ಅಭಿವೃದ್ಧಿಯ ಮುಖ್ಯ ಪ್ರವಾಹಕ್ಕೆ ಕೈಜೋಡಿಸಿದ್ದು, ಈ ಜಯ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಟಿ.ವಿ. ಸುದರ್ಶನರೆಡ್ಡಿ, ನಗರ ಅಧ್ಯಕ್ಷ ವೈ. ಮುರುಳಿಮೋಹನರೆಡ್ಡಿ, ಪುರಸಭೆ ಸದಸ್ಯ ವಿ.ಎಲ್. ಬಾಬು, ಆಂಜಿನೇಯ, ಹೂಗಾರ ರಮೇಶ್, ಪ್ರಮುಖರಾದ ಜಿ. ಶ್ರೀನಿವಾಸ, ಬಿ. ರಮೇಶ್, ಕನಕಗಿರಿ ಪ್ರಶಾಂತ, ಇಟಗಿ ವಿರುಪಾಕ್ಷಿ ಸೇರಿದಂತೆ ವಿವಿಧ ಬಿಜೆಪಿ ಮೋರ್ಚಾ ಮತ್ತು ಘಟಕಗಳ ಪದಾಧಿಕಾರಿಗಳು ಇದ್ದರು.