ಸಾರಾಂಶ
ಲಕ್ಷ್ಮೇಶ್ವರ: ದೇಶದ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಹುವರ್ಷಗಳ ನಂತರ ಬಿಜೆಪಿ ಅಭೂತಪೂರ್ವ ಗೆಲವು ದಾಖಲಿಸುತ್ತಿದ್ದಂತೆ ಪಟ್ಟಣದ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ಶನಿವಾರ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಬಿಜೆಪಿ ಗದಗ ಜಿಲ್ಲಾ ಖಜಾಂಚಿ ನಾಗರಾಜ ಕುಲಕರ್ಣಿ, ಹಿರಿಯ ಮುಖಂಡ ಪೂರ್ಣಾಜಿ ಖರಾಟೆ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ ಮತ್ತಿತರರು ಮಾತನಾಡಿ, ರಾಜಧಾನಿ ದೆಹಲಿಯ ಮಧ್ಯಮ ವರ್ಗದ ಹಾಗೂ ಬಡ ಜನತೆಯು ಬಿಜೆಪಿ ಅಪ್ಪಿಕೊಂಡಿದ್ದಾರೆ. ದೆಹಲಿಯ ಪ್ರಜ್ಞಾವಂತ ಮತದಾರರು ಎಲ್ಲ ಪಕ್ಷಗಳನ್ನು ತಿರಸ್ಕರಿದ್ದು, ವಿರೋಧ ಪಕ್ಷಗಳ ಸುಳ್ಳು ಭರವಸೆಗಳಿಗೆ, ಗ್ಯಾರಂಟಿಗಳಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ,
ಕಳೆದ ೨೭ವರ್ಷಗಳ ನಂತರ ಬಿಜೆಪಿ ದೆಹಲಿ ಗದ್ದುಗೆ ಅಲಂಕರಿಸಿದ್ದು, ದೇಶದ ಪ್ರಗತಿಗೆ ಬಿಜೆಪಿ ಅವಶ್ಯ ಎನ್ನುವದನ್ನು ಜನ ನಂಬಿದ್ದು, ನರೇಂದ್ರ ಮೋದಿ ಪ್ರಧಾನಿ ಅವರಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಇದೊಂದು ಐತಿಹಾಸಿಕ ಗೆಲುವಾಗಿದೆ ಇದಕ್ಕಾಗಿ ದೆಹಲಿ ಮತದಾರರಿಗೆ ಧನ್ಯವಾದ ಅರ್ಪಿಸುವದಾಗಿ ಹೇಳಿದರು.ವಿಜಯೋತ್ಸವದಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಚಕ್ರಸಾಲಿ, ಶಿರಹಟ್ಟಿ ಮಂಡಳದ ಪ್ರ.ಕಾರ್ಯದರ್ಶಿ ಅನಿಲಕುಮಾರ ಮುಳುಗುಂದ, ಸೋಮೇಶ ಉಪನಾಳ, ಮಂಜುನಗೌಡ ಕೆಂಚನಗೌಡ್ರ, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ಪ್ರವೀಣ ಬೋಮಲೆ, ಶಕ್ತಿ ಕತ್ತಿ, ನವೀನ ಹಿರೇಮಠ, ರಾಮು ಪೂಜಾರ, ಶಾಂತವೀರಯ್ಯ ಮಠಪತಿ, ಮಂಜುನಾಥ ಬಸಾಪುರ, ನವೀನ ಕುಂಬಾರ, ವೀರೇಶ ಸಾಸಲವಾಡ, ಚಿನ್ನು ಹಾಳದೋಟದ, ಚಂದ್ರು ಲಮಾಣಿ, ರಾಜಶೇಖರ ಶಿಗ್ಲಿಮಠ, ಆಕಾಶ ಸೌದತ್ತಿ, ಉಳವೇಶಗೌಡ ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.