ಹಿರೇಕೆರೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚೋದನಾಕಾರಿ ಭಾಷಣ ಖಂಡಿಸಿ ಹಿರೇಕೆರೂರು ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ನಂತರ ಸಿಪಿಐ ಮಂಜುನಾಥ್ ಪಂಡಿತ್ ಹಾಗೂ ಪಿಎಸ್‌ಐ ನೀಲಪ್ಪ ನರನಾಳ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.ತಾಲೂಕು ಬಿಜೆಪಿ ಮಂಡಲದ ಅದ್ಯಕ್ಷೆ ಸಂಜೀವಯ್ಯ ಕಬ್ಬಿಣಕಂತಿಮಠ್ ಮಾತನಾಡಿ, ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಾಡುವ ಭರದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕೊಲ್ಲಬೇಕು ಎಂದು ಪ್ರಚೋದನಕಾರಿ ಭಾಷಣ ಮಾಡಿರುವುದು ದೇಶದಲ್ಲಿರುವ ಲಕ್ಷಾಂತರ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರ ಜೀವಕ್ಕೆ ಅಪಾಯ ತಂದೊಡ್ಡಿದೆ. ಇದೊಂದು ದಾಳಿ ಮಾಡುವ ಹೇಳಿಕೆಯಾಗಿದೆ. ಅದರಿಂದ ಅವರನ್ನು ಕೂಡಲೇ ಬಂಧಿಸಬೇಕು ಎಂದರು.ಯುವ ಮೋರ್ಚಾ ಅಧ್ಯಕ ಜಗದೇಶ ದೊಡ್ಡಗೌಡ್ರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ್ ಖರ್ಗೆ ರಾಜ್ಯದ ಸಚಿವ ಸ್ಥಾನದಲ್ಲಿದ್ದು, ಪದೇ ಪದೇ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಬಗ್ಗೆ ಹೇಳಿಕೆ ನೀಡುವುದು ಸಾಮಾನ್ಯವಾಗಿದೆ. ಅದರಿಂದ ಇಂತಹ ಸಮಜಘಾತುಕ ಶಕ್ತಿಗಳು ಕಾರ್ಯಕರ್ತರ ಮೇಲೆ ದಾಳಿ ಮಾಡುವ ಹಾಗೂ ಜೀವಕ್ಕೆ ಅಪಾಯ ಒಡ್ಡುವ ಸಾಧ್ಯತೆ ಇದೆ ಎಂದರು.
ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಶಿವು ಕುಮಾರ ತಿಪ್ಪಶಟ್ಟಿ, ಬಸಮ್ಮ ಅಬಲೂರು, ಮಂಜುಳಾ ಬಾಳಿಕಾಯಿ, ಲತಾ ಬಣಕಾರ, ಉಮೇಶ ಬಣಕಾರ, ಮದು ಪಾಟೀಲ, ವಿಜಿಯಾ ಮಡಿವಾಳರ, ನಾಗರಾಜ ಹಿರೇಮಠ್, ನಾಗನಗೌಡ ಮುದಿಗೌಡ್ರ, ಮಹಾಂತೇಶ ಸಂತೋಷ್ ವಾಲಿ, ಗಜೇಂದ್ರ ಕಮ್ಮಾರ್, ನಾಗರಾಜ ಹುಲ್ಲತ್ತಿ, ಜಿತೇಂದ್ರ ಅಂಗಡಿ, ಗುರು ಕಡದಕಟ್ಟಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚೋದನಾಕಾರಿ ಭಾಷಣ ಖಂಡಿಸಿ ಹಿರೇಕೆರೂರು ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ನಂತರ ಸಿಪಿಐ ಮಂಜುನಾಥ್ ಪಂಡಿತ್ ಹಾಗೂ ಪಿಎಸ್‌ಐ ನೀಲಪ್ಪ ನರನಾಳ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.