ವಕ್ಫ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

| Published : Nov 23 2024, 12:35 AM IST

ಸಾರಾಂಶ

ರಾಮನಗರ: ರೈತರ ಭೂಮಿ, ಮಠ ಮಂದಿರ, ಸರ್ಕಾರಿ ಶಾಲೆಯ ಭೂಮಿಯ ಮೇಲೆ ವಕ್ಫ್ ಆಸ್ತಿ ನೋಂದಾಯಿಸಿ ರೈತರ ಬದುಕನ್ನು ಕತ್ತಲೆಗೆ ದೂಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಮನಗರ: ರೈತರ ಭೂಮಿ, ಮಠ ಮಂದಿರ, ಸರ್ಕಾರಿ ಶಾಲೆಯ ಭೂಮಿಯ ಮೇಲೆ ವಕ್ಫ್ ಆಸ್ತಿ ನೋಂದಾಯಿಸಿ ರೈತರ ಬದುಕನ್ನು ಕತ್ತಲೆಗೆ ದೂಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯರ್ತಕರು ರಾಜ್ಯ ಸರ್ಕಾರ ಹಾಗೂ ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಸಚಿವ ಸಂಪುಟದಿಂದ ಜಮೀರ್ ಅಹಮ್ಮದ್ ಖಾನ್ ಅವರನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯ ನಂತರ ಐಜೂರು ವೃತ್ತದಿಂದ ಪಾದಯಾತ್ರೆಯಲ್ಲಿ ತಾಲೂಕು ಕಚೇರಿಗೆ ತೆರಳಿದ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪವಿಭಾಗಾಧಿಕಾರಿ ಬಿನೋಯ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್ ನಾರಾಯಣಗೌಡ ಮಾತನಾಡಿ, ರಾಜ್ಯ ಸರ್ಕಾರವು ವಕ್ಫ್ ಹೆಸರಿನಲ್ಲಿ ರೈತರ ಹಿಂದೂಗಳ ಮಠ, ಮಂದಿರಗಳ ಜಮೀನನ್ನು ವಶಕ್ಕೆ ಪಡೆಯುತ್ತಿದೆ. ಮತ್ತೊಂದೆಡೆ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡುವ ಮೂಲಕ ಬಡವರ ಅನ್ನ ಕಸಿಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಸರ್ಕಾರದ ತಪ್ಪು ಆದೇಶದಿಂದ ರೈತರು, ಹಿಂದೂ ಮಠ ಮಂದಿರಗಳು, ಭಕ್ತರು, ಸ್ವಾಮೀಜಿಗಳು ಆತಂಕದಲ್ಲಿದ್ದಾರೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ನೋಟಿಸನ್ನು ಹಿಂಪಡೆದರೆ ಸಾಲದು, ಜತೆಗೆ, 1974ರ ಗಜೆಟ್ ಅಧಿಸೂಚನೆಯನ್ನೂ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಬಿಪಿಎಲ್ ಪಡಿತರ ಚೀಟಿ ರದ್ಧತಿ ಹಾಗೂ ಎಪಿಎಲ್ ಕಾರ್ಡ್ ರದ್ಧತಿಯಿಂದ ಲಕ್ಷಾಂತರ ಜನರಿಗೆ ತೊಂದರೆ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಪಡಿತರಿಗೆ ಅಕ್ಕಿ ನೀಡುತ್ತಿದ್ದು , ಬಿಪಿಎಲ್ ಕಾರ್ಡ್ ರದ್ದತಿಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆ ಸಂಬಂಧಿತ ನೆರವೂ ಸಿಗದಿರುವ ಆತಂಕ ಜನರನ್ನು ಕಾಡುತ್ತಿದೆ ಎಂದು ಹೇಳಿದರು.

ಬಡವರಿಗೆ ಮೊದಲು ನೋಟಿಸ್ ಕೊಟ್ಟು ಅವರ ಪಡಿತರ ಚೀಟಿಯನ್ನು ಬಿಪಿಎಲ್ ಕಾರ್ಡ್ ನ್ನಾಗಿ ಪರಿವರ್ತಿಸುವ ಕಾರ್ಯ ನಡೆಸಬೇಕಿತ್ತು. ಆದರೆ, ಎಪಿಎಲ್ ನ್ನಾಗಿ ಮಾಡಿದ್ದು ತೀವ್ರ ಖಂಡನೀಯವಾಗಿದೆ. ಜಮೀನನ್ನು ಏಕಾಏಕಿ ಪಹಣಿಯಲ್ಲಿ ವಕ್ಫ್ ಎಂದು ಬದಲಿಸಿದ ಮಾದರಿಯಲ್ಲಿ ಬಡಜನರ ಅನ್ನ ಕಸಿಯುವ ಕಾರ್ಯ ನಡೆದಿದೆ ಎಂದು ಟೀಕಿಸಿದರು.

ಇಂತಹ ಜನವಿರೋಧಿ. ಬಡವರ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ರಾಜ್ಯ ಸರ್ಕಾರ ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕನರ್ಾಟಕದಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.

ವಕ್ಫ್ ರೈತರ ಆಸ್ತಿ ಕಬಳಿಕೆ, ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ರಾಜೀನಾಮೆ ನೀಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶವನ್ನು ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕಶನ್ ಅನ್ನು ಹಿಂಪಡೆಯಬೇಕು.

ಕೇಂದ್ರ ಸರ್ಕಾರ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕಳುಹಿಸಿಕೊಡಬೇಕು. ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಎಂ ದು ಘೋಷಿಸಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅಶ್ವತ್ಥ ನಾರಾಯಣಗೌಡ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೇಷ್ಮೆ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಗೌತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲೂಕು ಅಧ್ಯಕ್ಷ ಪಿ.ಎಸ್. ಜಗದೀಶ್, ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಎಸ್.ಆರ್.ನಾಗರಾಜು, ಎಚ್.ಎಸ್. ಮುರಳೀಧರ್, ಮುಖಂಡರಾದ ದೇವರಾಜು, ಪ್ರಸಾದ್ಗೌಡ, ಚಂದ್ರಶೇಖರ್, ದರ್ಶನ್ ರೆಡ್ಡಿ, ಕಾಳಯ್ಯ, ರುದ್ರದೇವರು, ಮಹದೇವಯ್ಯ, ಶಿವಮಾದು, ರಾಘವೇಂದ್ರ, ನಾಗಮ್ಮ, ಲಕ್ಷ್ಮೀ,ನಾಗೇಶ್, ಸಂಜಯ್, ರಾಜು,ಚಂದ್ರಶೇಖರ್ರೆಡ್ಡಿ, ಶಿವಾನಂದ್, ಚನ್ನಪ್ಪ, ಕೆಂಪರಾಜು, ಭರತ್ರಾಜ್, ದೇವಿಕಾ, ಚಂದ್ರಣ್ಣ, ರಮೇಶ್, ಭದ್ರಿನಾಥ್, ಚಂದನ್ ಮತ್ತಿತರರು ಭಾಗವಹಿಸಿದ್ದರು.

22ಕೆಆರ್ ಎಂಎನ್ 1,2.ಜೆಪಿಜಿ

1.ಬಿಜೆಪಿ ಕಾರ್ಯಕರ್ತರು ಉಪವಿಭಾಗಾಧಿಕಾರಿ ಬಿನೋಯ್ ಅವರಿಗೆ ಮನವಿ ಸಲ್ಲಿಸಿದರು.

2.ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.