ದಿಲ್ಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವು: ವಿಜಯೋತ್ಸವ

| Published : Feb 09 2025, 01:18 AM IST

ಸಾರಾಂಶ

ದಿಲ್ಲಿಯಲ್ಲಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಆಮ್‌ ಆದ್ಮಿ ಪಕ್ಷವನ್ನು ಬಿಜೆಪಿ ಪರಾಭವಗೊಳಿಸಿದೆ.

ಹೊಸಪೇಟೆ: ದಿಲ್ಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಶನಿವಾರ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಯಿತು.

ದಿಲ್ಲಿಯಲ್ಲಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಆಮ್‌ ಆದ್ಮಿ ಪಕ್ಷವನ್ನು ಬಿಜೆಪಿ ಪರಾಭವಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತವನ್ನು ಪರಿಗಣಿಸಿ ದಿಲ್ಲಿ ಜನತೆ ಅಭೂತಪೂರ್ವ ಜಯ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ಮಂಡಳ ಅಧ್ಯಕ್ಷ ಶಂಕರ್ ಮೇಟಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ್ ಜೀರೆ, ಕೆ.ಎಸ್. ರಾಘವೇಂದ್ರ, ರೇವಣ್ಣ ಸಿದ್ದಪ್ಪ, ಕಿಚಡಿ ಕೊಟ್ರೇಶ್, ಸಾಲಿಸಿದ್ದಯ್ಯ ಸ್ವಾಮಿ, ಸತ್ಯನಾರಾಯಣ, ಹೊನ್ನೂರಪ್ಪ, ಉಮಾ, ಪೂರ್ಣಿಮಾ, ಅನುರಾಧ, ಸಂಧ್ಯಾ, ಮಹಾದೇವಿ, ರಾಘವೇಂದ್ರ ಇದ್ದರು.

8ಎಚ್‌ಪಿಟಿ2ದಿಲ್ಲಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹೊಸಪೇಟೆಯ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಶನಿವಾರ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಯಿತು.