ಬ್ಲೇಜ್ ಮೂರ್ನಾಡು ಚಾಂಪಿಯನ್‌, ಡಿಬ್ಲರ್ಸ್‌ ಹಂಪ್‌ ರನ್ನರ್ಸ್‌

| Published : Dec 02 2024, 01:19 AM IST

ಸಾರಾಂಶ

ಬ್ಲೇಜ್‌ ಮೂರ್ನಾಡು ತಂಡವು ಡಿಬ್ಲರ್ಸ್‌ ಹಂಪ್‌ ತಂಡವನ್ನು 4- 1 ಗೋಲುಗಳಿಂದ ಸೋಲಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕುತ್ತುನಾಡು ಬೇರಳಿನಾಡು ಪ್ರೌಢಶಾಲೆಯ ವಜ್ರಮಹೋತ್ಸಹದ ಅಂಗವಾಗಿ ಭಾನುವಾರ ನಡೆದ ಹಾಕಿ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಬ್ಲೇಜ್‌ ಮೂರ್ನಾಡು ತಂಡವು ಡಿಬ್ಲರ್ಸ್‌ ಹಂಪ್‌ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಏಕ ಪಕ್ಷೀಯವಾಗಿ ನೆಡದ ಫೈನಲ್‌ ಬ್ಲೇಜ್‌ ಮೂರ್ನಾಡು ತಂಡವು ಡ್ರಿಬ್ಲರ್ಸ್ ಹಂಪ್ ತಂಡವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲವಿನೊಂದಿಗೆ ನೂತನ ಚಾಂಪಿಯನ್ ಪಟ್ಟ ಅಲಂಕರಿಸಿತು.

ಪ್ರಥಮಾರ್ಧದಲ್ಲಿ ಇತ್ತಂಡಗಳು ಗೋಲು ಗಳಿಸಲು ಹರಸಾಹಸಪಟ್ಟು ಗೋಲು ದಾಖಲಿಸಲು ವಿಫಲವಾದವು.

ದ್ವಿತಿಯಾರ್ಧದಲ್ಲಿ ಅತಿಥಿ ಆಟಗಾರ ಅಂಕುರ್ 26ನೇ ನಿಮಿಷ ಮತ್ತು ಹರ್ಪಾಲ್ 36ನೇ ನಿಮಿಷ, ಸಮೀರ್ 46ನೇ ನಿಮಿಷ ಮತ್ತು ಪ್ರಜ್ವಲ್ 50ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಬ್ಲೇಜ್‌ ಮುೂರ್ನಾಡು ತಂಡ ಗೆಲುವಿನ ನಗೆ ಬೀರಿತು. ಡ್ರಿಬ್ಲರ್ಸ್ ಹಂಪ್ ತಂಡದ ಪರವಾಗಿ ಡಾಕ್ಟರ್ ಕರಣ್ 57ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಮೂರನೇ ಸ್ಥಾನಕ್ಕೆ ನಡೆದ ಪಂದ್ಯ: ಹಾಕಿ ಪಂದ್ಯಾವಳಿಯ ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಮಾಹದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೆರಿ ತಂಡ ಜಯಗಳಿಸಿತು. ಬಲಂಬೆರಿ ತಂಡದ ನಾಯಕ ಸುಜಿತ್ 37ನೇ ನಿಮಿಷದಲ್ಲಿ ಗೋಲಿನಿಂದ ತಂಡುವ 1- 0 ಮುನ್ನಡೆ ಪಡೆದಕೊಂಡಿತು. ದ್ವಿತೀಯಾರ್ಧದಲ್ಲಿ ಕೋಣನಕಟ್ಟೆ ತಂಡದ ಪರವಾಗಿ ನೆರೇನ್ 40ನೇ ನಿಮಿಷದಲ್ಲಿ ಗೋಲು ಬಾರಿಸಿ 1-1 ಸಮಬಲ ಸಾಧಿಸಿದರು. ಕೊನೆಯ ಕ್ವಾರ್ಟರ್‌ನಲ್ಲಿ ಅತಿಥಿ ಆಟಗಾರ ನಹಿಮ್ 48 ಮತ್ತು 53ನೇ ನಿಮಿಷದಲ್ಲಿ ಗಳಿಸಿದ ಮಿಂಚಿನ ಅವಳಿ ಗೋಲಿನಿಂದ ಅಂತಿಮವಾಗಿ ಬಲಂಬೆರಿ ತಂಡು 3-1 ಗೋಲಿನಿಂದ ಜಯಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿತು. ಕೋಣನಕಟ್ಟೆ ನಾಲ್ಕನೇ ಸ್ಥಾನ ಪಡೆಯಿತು.

ವೈಯಕ್ತಿಯ ಪ್ರಶಸ್ತಿಗಳು: ಪಂದ್ಯದ ಅತ್ಯುತ್ತಮ ಗೋಲು ಕೀಪರ್ ಆಗಿ ಶಾನ್ ಮೋಣ್ಣಪ್ಪ (ಬ್ಲೇಜ್ ಮೂರ್ನಾಡು), ಅತ್ಯುತ್ತಮ

ಬ್ಯಾಕ್‌ವರ್ಡ್ ಆಟಗಾರ ಕುಶ್ಮನ್ ಸಿಂಗ್ (ಡ್ರಿಬ್ಲರ್ಸ್ ಹಂಪ್), ಅತ್ಯುತ್ತಮ ಮಧ್ಯಂತರ ಆಟಗಾರರ ಸೋಮಣ್ಣ (ಡ್ರಿಬ್ಲರ್ಸ್ ಹಂಪ್), ಅತ್ಯುತ್ತಮ ಮುನ್ನಡೆ ಆಟಗಾರ ನಹಿಮ್ (ಮಾಹದೇವ ಸ್ಪೋರ್ಟ್ಸ್ ಕ್ಲಬ್) ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಹರ್ಪಾಲ್( ಬ್ಲೆಜ್ ಮೂರ್ನಾಡು) ಪಡೆದರು.

ಹಗ್ಗಜಗ್ಗಾಟ: ಪುರುಷರ ಹಗ್ಗಜಗ್ಗಾಟದಲ್ಲಿ ಕುತ್ತುನಾಡು ಸ್ಟ್ರೈಕರ್‌ ಪ್ರಥಮ ಸ್ಥಾನ, ದೀತಿಯ ಸ್ಥಾನ ಕಂಡಗಾಲ ಮತ್ತು ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕುತ್ತುನಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ ದ್ವೀತಿಯ ಸ್ಥಾನವನ್ನು ಪೊವ್ವೇದಿ ಬಾಡಗ ತಂಡ ಪಡೆದುಕೊಂಡಿತು.

ಪಂದ್ಯಾವಳಿಯ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ, ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಕರವಂಡ ಅಪ್ಪಣ್ಣ, ವಿನೋದ್ ಕುಮಾರ್, ಮೂಕಚಂಡ ನಾಚ್ಚಪ್ಪ, ಕೊಂಡಿರ ಕೀರ್ತಿ, ಕುಪ್ಪಂಡ ದಿಲನ್ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಮಾಲೆಟಿರ ಶ್ರೀನಿವಾಸ್ ನೀಡಿದರು.

ಸಭಾ ಕಾರ್ಯಕ್ರಮ: ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಕಾರ ನೀಡಿ ದೇಶದ ಉತ್ತಮ ಪ್ರಜೆಗಾಳಗಿ ರೂಪಿಸುವುದರೊಂದಿಗೆ ಅವರ ಬದುಕನ್ನುಸುಂದರವಾಗಿ ರೂಪಿಸಲು ಶಿಕ್ಷಣ ಸಂಸ್ಥೆಗಳು ಶ್ರಮಿಸುತ್ತಿವೆ ಎಂದು ಡಿಡಿಪಿಐ ರಂಗಧಾಮಪ್ಪ ಹೇಳಿದರು.

ಕುತ್ತುನಾಡು ಬೇರಳಿನಾಡು ಪ್ರೌಢಶಾಲೆಯ ವಜ್ರಮಹೋತ್ಸಹದ ಅಂಗವಾಗಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕಂಜಿತಂಡ ಮಂದಣ್ಣ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಬದುಕು ರೂಪಿಸಿಕೊಳ್ಳಲು ನಮ್ಮ ಹಿರಿಯರು ಮುಂದಲೋಚನೆಯಿಂದ ಕಟ್ಟಿದ ವಿದ್ಯಾಸಂಸ್ಥೆ ಇಂದು 63 ವರ್ಷಗಳನ್ನು ಪೂರೈಸಿದೆ. ಇಂದಿನ ದಿನಗಳಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಪೈಪೋಟಿ ನಡುವೆಯೂ ಉತ್ತಮ ಶಿಕ್ಷಣ ಮತ್ತು ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯ ಒದಗಿಸುತ್ತ ಹಂತಹಂತವಾಗಿ ಸಂಸ್ಥೆ ಬೆಳೆಯುತ್ತಿರುವುದು ಸಂತೋಷದ ವಿಚಾರ ಎಂದರು.

ಮುಖ್ಯ ಶಿಕ್ಷಕಿ ಎಚ್‌.ಎಂ. ದೀಪಾ , ಗ್ರಾಸ್‌ ರೂಟ್‌ ಸಂಸ್ಥೆಯ ವ್ಯವಸ್ಥಾಪಕ ಸ್ಯಾಮಿಲ್ ವಿಲ್ಸನ್, ಸಂಸ್ಥೆಯ ಮುಖ್ಯಸ್ಥ ಸಿ.ಎಂ. ಕಾರ್ಯಪ್ಪ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಟ್ರೋಫಿ ದಾನಿಗಳಾದ ಕೊಲ್ಲಿರ ಉಷಾ ಚೋಂದಮ್ಮ ಮತ್ತು ಜೀತ್‌ ಪೂಣಚ್ಚ, ಮುಂಡಂಡ ಗಣಪತಿ, ನಾಮೇರ ಗಣಪತಿ, ಕಳ್ಳಿಚಂಡ ಚೋಂದಮ್ಮ, ಚೇರಂಡ ಮೋಹನ್ ಕುಶಾಲಪ್ಪ ಹಾಜರಿದ್ದರು.