ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬಿಎಲ್‌ಡಿಇ ಸಂಸ್ಥೆಯ ಎ.ಎಸ್.ಪಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಲಿತ 1984-85ನೇ ಸಾಲಿನ ಬಿಕಾಂ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. 40 ವರ್ಷಗಳ ಬಳಿಕ ವಿದ್ಯಾರ್ಥಿಗಳು ತಾವು ಓದಿದ ಕಾಲೇಜಿನಲ್ಲಿ ಸೇರಿ ವಿದ್ಯೆ ಕಲಿಸಿದ ಅಧ್ಯಾಪಕರಿಗೆ ಭಕ್ತಿಯಿಂದ ನಮಿಸಿ ಗುರುವಂದನೆಯ ಕಾಣಿಕೆಯೊಂದಿಗೆ ಗೌರವಾರ್ಪಣೆ ಸಲ್ಲಿಸಿ ಧನ್ಯತೆ ಮೆರೆದರು. ಗುರು-ಶಿಷ್ಯರ ಈ ಅಪೂರ್ವ ಸಮಾಗಮ ಅಪರೂಪಮಯವಾಗಿ ಕಣ್ಮನ ಮನಭಾವ ಸೆಳೆಯಿತು.ನಿವೃತ್ತ ಪ್ರಾಚಾರ್ಯ ವೈ.ಬಿ.ಪಟ್ಟಣಶೆಟ್ಟಿ, ವಿಶ್ರಾಂತ ಪ್ರಾಧ್ಯಾಪಕ ಜಿ.ಆರ್.ಕುಲಕರ್ಣಿ, ನಿವೃತ್ತ ದೈಹಿಕ ಶಿಕ್ಷಕ ಎಸ್.ಎಸ್.ಕೋರಿ ಮಾತನಾಡಿ, 40 ವರ್ಷಗಳ ನಂತರವೂ ಶಿಷ್ಯರ ಹಳೆ ಪಡೆ ಅತ್ಯಂತ ಪ್ರೀತಿ, ವಿಶ್ವಾಸದಿಂದ ನಮಗೆ ಈ ಇಳಿವಯಸ್ಸಿನಲ್ಲೂ ಆಹ್ವಾನಿಸಿ, ಗೌರವಾಧಾರದಿಂದ ಗುರುವಂದನೆ ಸಲ್ಲಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಸಾವಿರಾರು ವಿದ್ಯಾರ್ಥಿಗಳು ನಮ್ಮ ಕೈಯಲ್ಲಿ ಕಲಿತು ವಿವಿಧ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವದು ಸಂತಸವಾಗಿದೆ. ಈ ವಿದ್ಯಾರ್ಥಿಗಳ ಸುಸಂಸ್ಕೃತ ನಡೆನುಡಿ ಭಾವಾಭಿಮಾನ ನಮಗೆ ಸಂತೃಪ್ತಿ ತಂದಿದೆ ಎಂದರು.ಬಿಡಿಎ ಮಾಜಿ ಅಧ್ಯಕ್ಷ, ಖ್ಯಾತ ಹೋಟೆಲ್ ಉದ್ಯಮಿ ಚಂದ್ರಕಾಂತ ಶೆಟ್ಚಿ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಮ್ಮ ಜೀವನದ ಭವ್ಯತೆ ಬೆಳಕು ಕಾಣಲು ಸಾಧ್ಯ. ಅಧ್ಯಾಪಕರು ಜೀವನ ಪರಿವರ್ತನೆಗೆ ದಾರಿ ತೋರಿದ್ದಾರೆ. ಗುರುಗಳ ನಿಷ್ಕಲ್ಮಶ ಪ್ರೀತಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಅಂದು ನಮ್ಮಲ್ಲಿ ಓದುವ ಶಕ್ತಿಗೆ ಗುರುಜೀಗಳು ಗರಿಗೆದರಿದ್ದಾರೆ. ಆತ್ಮವಿಶ್ವಾಸ ಮೂಡಿಸಿ ಜೀವನಕ್ಕೆ ಹೊಸರೂಪ ನೀಡಿದ್ದಾರೆ ಎಂದರು.ಎಚ್.ಎಸ್.ಸುರೇಂದ್ರ, ಉಲ್ಲಾಸ ಅರಕೇರಿ, ಸಂಜಯ ಲೋಕಾಪುರ, ಎಸ್.ಜಿ.ಕಕ್ಕಳಮೇಲಿ, ಎಂ.ಜಿ.ದೇಶಪಾಂಡೆ, ಡಿ.ಐ.ಬೆನಕನಹಳ್ಳಿ, ಎಸ್.ಟಿ.ದೇಶಕುಲಕಣಿ೯, ರೋಹಿಣಿ ಜೋಶಿ, ಸುರೇಖಾ ಜೋಶಿ, ವಿದ್ಯಾ ಕುಲಕರ್ಣಿ ಮಾತನಾಡಿ, ಗುರುಗಳ ಜ್ಞಾನ ದೀವಿಗೆಯಿಂದ ನಮ್ಮೆಲ್ಲರ ಬದುಕು ಹಸನಾಗಿದೆ. ಉತ್ತಮ ಅಧ್ಯಾಪಕರನ್ನು ಪಡೆದ ಭಾಗ್ಯ ನಮ್ಮದು. ಗುರುಗಳ ಅನುಗ್ರಹ, ಆಶೀರ್ವಾದ, ಉಪದೇಶದಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದೆವೆ. ನಮ್ಮ ಈ ಗುರುಗಳು ಸದಾ ಹೃದಯದಲ್ಲಿ ಆಜರಾಮರು. ಅವರುಗಳ ಸೇವಾಭಾವ ಸ್ಮರಣೀಯ ಎಂದು ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸಿದರು.
ನಿವೃತ್ತ ಅಧ್ಯಾಪಕರಾದ ಎಂ.ಎಸ್.ಝಳಕಿ, ಸಿ.ಜಿ.ಸಜ್ಜನರ, ಎಸ್.ಬಿ.ಹಳ್ಳೂರ, ಶಿವಲೀಲಾ ಕಲ್ಮಠ, ಎಸ್.ಜಿ.ತಾಳಿಕೋಟಿಯನ್ನು ಶಿಷ್ಯರು ಸನ್ಮಾನಿಸಿ, ಗೌರವಿಸಿದರು.ಹಳೆಯ ವಿದ್ಯಾರ್ಥಿಗಳಾದ ನರೇಂದ್ರ ಬಳಂಬಗಿ, ಡಿ.ಐ.ಬೆನಕನಹಳ್ಳಿ, ಜಿ.ಎಲ್.ಕುಲಕರ್ಣಿ, ಶಿವು ನಿಂಬರಗಿ, ಸಿ.ಬಿ.ಕಳಕಿ, ಶಶಿ ಪೂಜಾರಿ, ಶ್ರೀಪಾದದೇಶ ಕುಲಕರ್ಣಿ, ಅಶೋಕ ಸೋಲಾಪುರ, ವಿಜಯಾ ನಂದರಗಿ, ಸುರೇಖಾ ಜೋಶಿ, ವೀಣಾ ಮುದ್ದೇಬಿಹಾಳ, ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ನಿರೂಪಿಸಿದರು. ಸಿ.ಬಿ.ಇಕ್ಕಲಕಿ ಸ್ವಾಗತಿಸಿದರು. ಅಶೋಕ ಸೋಲಾಪುರ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))