ಸಾರಾಂಶ
ಶಿಗ್ಗಾಂವಿ: ಕಾಂಗ್ರೆಸ್‌ಗೆ ಆಶೀರ್ವದಿಸಿ ಸೇವೆ ಮಾಡಲು ಅವಕಾಶ ಮಾಡಿಕೊಡಿ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ವಿಕಾಸಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.
ಅವರು ಭಾನುವಾರ ತಡಸ ಹಾಗೂ ಕುನ್ನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ವಿಕಾಸಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವೆ. ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಯಾಗಿದೆ. ಗೆಲ್ಲುವ ಪೂರ್ಣ ವಿಶ್ವಾಸವಿದೆ ಎಂದರು.ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ೬೦ ತಿಂಗಳು ಕಾಲವಕಾಶ ಕೇಳಿ ಬಣ್ಣದ ಮಾತುಗಳನ್ನಾಡಿ, ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಅಧಿಕಾರ ಹಿಡಿದ ಬಳಿಕ ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ಯುವಕರಿಗೆ ಉದ್ಯೋಗ ನೀಡಲಿಲ್ಲ, ಸಂಕದಷ್ಟದಲ್ಲಿರುವ ಮಹಿಳೆಯರಿಗೆ ಶಕ್ತಿ ತುಂಬಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಯಾಸೀರಖಾನ್ ಪಠಾಣ, ಸೋಮಣ್ಣ ಬೇವಿನಮರದ ಮಾತನಾಡಿ, ಜನವಿರೋಧಿ ಬಿಜೆಪಿಗೆ ತಕ್ಕ ಉತ್ತರ ನೀಡುವ ಸಮಯ ಬಂದಿದೆ. ಎಲ್ಲರೂ ಒಂದಾಗಿ ಬಿಜೆಪಿ ಸೋಲಿಸಿ, ಸಂವಿಧಾನದ ಉಳಿವಿಗೆ ಮುಂದಾಗಬೇಕಿದೆ ಎಂದರು.ಶಿಗ್ಗಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಪಾಟೀಲ, ಗ್ರಾಪಂ ಅಧ್ಯಕ್ಷೆ ರಜಿಯಾ ಅರಳಿಗಟ್ಟಿ, ಮುಖಂಡರಾದ ಶಾಕೀರ್ ಸನದಿ, ರಾಜೇಶ್ವರಿ ಪಾಟೀಲ, ಲ್ಯಾಂಡ್ ಲಾರ್ಡ್ ಕಿರಣ ಎಂ. ಪಾಟೀಲ, ಭೀಮಣ್ಣ ದೊಡ್ಡಮನಿ, ತಿಪ್ಪಣ್ಣ ಚವ್ಹಾಣ, ಶಿವಾನಂದ ರಾಮಗಿರಿ, ಸಿ.ಎಸ್. ಪಾಟೀಲ, ಚಂದ್ರಣ್ಣ, ಗುಡ್ಡಪ್ಪ ಜಲದಿ, ಪರಶುರಾಮ ಕಾಳೆ, ಪರಶುರಾಮ ಹರಿಜನ, ಯುಸೂಫಸಾಬ್ ಬಾವಿಕಟ್ಟಿ, ಮಲ್ಲಮ್ಮ ಸೋಮನಕಟ್ಟಿ, ಖಾಜಾಮೊಹಿದ್ದೀನ್ ಅರಳಿಕಟ್ಟಿ, ಡಿ.ಆರ್. ಬೊಮ್ಮನಹಳ್ಳಿ , ಪಿ.ಡಿ. ಕಾಳಿ, ಸುಧೀರ್ ಲಮಾಣಿ, ಈಶ್ವರಗೌಡ ಪಾಟೀಲ, ಮಹದೇವಪ್ಪ ಕಾಗೆ, ಚಂದ್ರಣ್ಣ ನಡುವಿನಮನಿ, ಮಹೇಶ, ಶಿವಣ್ಣ ಬಂಡಿವಡ್ಡರ ಇದ್ದರು.
ತಡಸ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಸಮ್ಮುಖದಲ್ಲಿ ಹಲವರು ಕಾಂಗ್ರೆಸ್ ಸೇರ್ಪಡೆಯಾದರು.;Resize=(128,128))
;Resize=(128,128))
;Resize=(128,128))
;Resize=(128,128))