ಜನರ ಆಶೀರ್ವಾದ ನನ್ನ ಮೇಲಿದೆ: ಸಂಯುಕ್ತಾ

| Published : May 08 2024, 01:00 AM IST / Updated: May 08 2024, 01:01 AM IST

ಸಾರಾಂಶ

ಬಾಗಲಕೋಟೆ ಮತಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡುತ್ತಿದ್ದು, ಗೆಲುವು ನಿಶ್ಚಿತ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಬಾಗಲಕೋಟೆ ಮತಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡುತ್ತಿದ್ದಾರೆ. ಪ್ರತಿಯೊಂದು ಮತ ಕ್ಷೇತ್ರಗಳಿಗೆ ಹೋದಾಗ ಮತದಾರರು ತುಂಬು ನಗುವಿನ ಸ್ವಾಗತ ಕೋರಿ ಆಶೀರ್ವಾದ ಮಾಡಿದ್ದಾರೆ. ನನ್ನ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.ಮಂಗಳವಾರ ಇಳಕಲ್ಲ ನಗರಸಭೆಯಲ್ಲಿನ ಸಖಿ ಮತಗಟ್ಟೆ ವೀಕ್ಷಣೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಲಿಮ್ರಾ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ರಜಾಕ್‌ ತಟಗಾರ, ನಗರಸಭೆ ಸದಸ್ಯ ಸುರೇಶ ಜಂಗ್ಲಿ, ವಕೀಲರಾದ ಮಹಾಂತೇಶ ಅವಾರಿ, ವಿಜಯಗೌಡ ಪಾಟೀಲ, ಇತರರು ಉಪಸ್ಥಿತರಿದ್ದರು.