ಅಘೋರಿಗಳಿಂದ ಎನ್‌ಡಿಎ ಅಭ್ಯರ್ಥಿ ಯದುವೀರ್ ಗೆ ಆಶೀರ್ವಾದ

| Published : Apr 19 2024, 01:08 AM IST / Updated: Apr 19 2024, 12:58 PM IST

ಸಾರಾಂಶ

 ಯದುವೀರ್ ಅವರು ಕೃಷ್ಣರಾಜ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು. ಅಶೋಕಪುರಂನಲ್ಲಿ ಯದುವೀರ್ ಅವರನ್ನು ಆರತಿ ಬೆಳಗಿ ತಿಲಕವನ್ನಿಟ್ಟು , ಪುಷ್ಪಾರ್ಚನೆ ಮಾಡುವ ಮೂಲಕ ಮನೆ ಮಗನಂತೆ ಬರಮಾಡಿಕೊಂಡರು.

 ಮೈಸೂರು :  ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ಶೋ ಮೂಲಕ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಯದುವೀರ ಅವರನ್ನು ಅಘೋರಿಗಳು ಆಶೀರ್ವದಿಸಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಯದುವೀರ್ ಅವರು ಕೃಷ್ಣರಾಜ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.

ಅಶೋಕಪುರಂನಲ್ಲಿ ಬಾಬಾ ಸಾಬ್ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಅಶೋಕಪುರಂನಲ್ಲಿ ಯದುವೀರ್ ಅವರನ್ನು ಆರತಿ ಬೆಳಗಿ ತಿಲಕವನ್ನಿಟ್ಟು , ಪುಷ್ಪಾರ್ಚನೆ ಮಾಡುವ ಮೂಲಕ ಮನೆ ಮಗನಂತೆ ಬರಮಾಡಿಕೊಂಡರು.

ಪ್ರಚಾರದ ವೇಳೆ ಶಿವನ ಆಧಾರಕರಾದ ಅಘೋರಿಗಳುಯದುವೀರ್ ಅವರ ಬಳಿ ಬಂದು ಆಶೀರ್ವಾದ ಮಾಡಿದ್ದು ವಿಶೇಷವಾಗಿತ್ತು, ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಮೊದಲಾದವರು ಇದ್ದರು.

ಮಂಚೇಗೌಡನಕೊಪ್ಪಲಿನಲ್ಲಿ ಯದುವೀರ ಪರ ಜಿಟಿಡಿ ಮತಯಾಚನೆ

 ಮೈಸೂರು :  ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇಗೌಡನಕೊಪ್ಪಲಿನಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪರವಾಗಿ ಶಾಸಕ ಜಿ.ಟಿ. ದೇವೇಗೌಡ ಅವರು ಗುರುವಾರ ಮತಯಾಚಿಸಿದರು.

ಗ್ರಾಮ ದೇವತೆ ಹರಿಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಅವರೊಂದಿಗೆ ಜಿ.ಟಿ. ದೇವೇಗೌಡರು ಚುನಾವಣಾ ಪ್ರಚಾರ ಕೈಗೊಂಡರು.ನಗರ ಪಾಲಿಕೆ ಮಾಜಿ ಸದಸ್ಯೆ ಪ್ರೇಮಾ ಶಂಕರೇಗೌಡ, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.