ಇತ್ತೀಚೆಗೆ ಟಿ-20 ಕ್ರಿಕೆಟ್ ವಿಶ್ವಕಪ್ ಗೆದ್ದ ಅಂಧರ ರಾಷ್ಟ್ರೀಯ ಮಹಿಳಾ ತಂಡದ ಸದಸ್ಯೆಯರು ಶನಿವಾರ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಮಠದ ಆಡಳಿತದವರು ವಿಜೇತ ತಂಡವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಆಟಗಾರ್ತಿಯರು ಭಕ್ತಿ ಶ್ರದ್ಧೆಯಿಂದ ಕನಕ ಕಿಂಡಿ ಮೂಲಕ ಕೈ ಮುಗಿದು ಶ್ರೀ ಕೃಷ್ಣನ ದರ್ಶನ ಪಡೆದರು.
ಉಡುಪಿ: ಇತ್ತೀಚೆಗೆ ಟಿ-20 ಕ್ರಿಕೆಟ್ ವಿಶ್ವಕಪ್ ಗೆದ್ದ ಅಂಧರ ರಾಷ್ಟ್ರೀಯ ಮಹಿಳಾ ತಂಡದ ಸದಸ್ಯೆಯರು ಶನಿವಾರ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಮಠದ ಆಡಳಿತದವರು ವಿಜೇತ ತಂಡವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಆಟಗಾರ್ತಿಯರು ಭಕ್ತಿ ಶ್ರದ್ಧೆಯಿಂದ ಕನಕ ಕಿಂಡಿ ಮೂಲಕ ಕೈ ಮುಗಿದು ಶ್ರೀ ಕೃಷ್ಣನ ದರ್ಶನ ಪಡೆದರು.
ನಂತರ ಪರ್ಯಾಯ ಶ್ರೀ ಶಿರೂರು ಮಠದ ವೇದವರ್ಧನ ತೀರ್ಥರು ಈ ತಂಡದ ಸದಸ್ಯೆಯರೊಂದಿಗೆ ಸಮಾಲೋಚನೆ ನಡೆಸಿ ಅವರ ಆಟದ ಅನುಭವಗಳನ್ನು ಕುತೂಹಲದಿಂದ ಆಲಿಸಿದರು, ನಂತರ ಈ ಸಾಧಕಿಯರನ್ನು ಅಭಿನಂದಿಸಿ ಮಂತ್ರಾಕ್ಷತೆ ನೀಡಿ ಹರಿಸಿದರು. ಪರ್ಯಾಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಉಡುಪಿ ಶಾಶಕ ಯಶ್‌ಪಾಲ್ ಸುವರ್ಣ ಅವರು ಸಾಧಕ ತಂಡದ ಸದಸ್ಯೆಯರನ್ನು ಭೇಟಿಯಾಗಿ ಶುಭ ಹಾರೈಸಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಮೋಹನ್ ಭಟ್ ಉಪಸ್ಥಿತರಿದ್ದರು.ಬಳಿಕ ಕೃಷ್ಣಮಠದಲ್ಲಿ ಪ್ರಸಾದ ಸ್ವೀಕರಿಸಿದ ಈ ತಂಡವು ಮಣಿಪಾಲಕ್ಕೆ ತೆರಳಿತು. ಮಣಿಪಾಲ ಮಾಹೆ ವತಿಯಿಂದ ಭಾನುವಾರ ನಡೆಯಲಿರುವ ಮಣಿಪಾಲ್ ಮ್ಯಾರಥಾನ್ ನಲ್ಲಿ ಭಾಗವಹಿಸಲಿದೆ.