ಹುಬ್ಬಳ್ಳಿ:

ಲೋಂಡಾ ಯಾರ್ಡ್‌ನಲ್ಲಿ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ ಬ್ಲಾಕ್‌ ಬರ್ಸ್ಟ್‌ ಆದಕಾರಣ ಈ ಮಾರ್ಗವಾಗಿ ಸಂಚರಿಸಬೇಕಾದ ಬರೋಬ್ಬರಿ 12 ರೈಲುಗಳು ತಡವಾಗಿ ಚಲಿಸಿವೆ.

ಲೋಂಡಾ ಯಾರ್ಡ್‌ನಲ್ಲಿ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಮೊದಲು ಎರಡಿದ್ದ ಫ್ಲಾರ್ಟ್‌ಫಾರ್ಮ್‌ನ್ನು ಮೂರಕ್ಕೇರಿಸಲಾಗುತ್ತಿದೆ. ನಿಗದಿತ ಕಾಮಗಾರಿ ವೇಳೆ ಅನಿರೀಕ್ಷಿತವಾಗಿ 8 ಗಂಟೆ ತಡವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ರೈಲು ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಹಲವು ರೈಲುಗಳು ಅಲ್ಲಲ್ಲಿ ನಿಲುಗಡೆಯಾಗಿದ್ದರೆ, ಮತ್ತೆ ಕೆಲ ರೈಲುಗಳ ವೇಳಾಪಟ್ಟಿಯನ್ನೇ ಬದಲಾಯಿಸಲಾಗಿದೆ. 12 ರೈಲುಗಳ ವಿಳಂಬ:

ನಿಜಾಮುದ್ದೀನ್‌-ವಾಸ್ಕೋಡಿಗಾಮಾ ಎಕ್ಸ್‌ಪ್ರೆಸ್- 221 ನಿಮಿಷ, ದಾದರ-ಹುಬ್ಬಳ್ಳಿ ಎಕ್ಸ್‌ಪ್ರೆಸ್- 221 ನಿಮಿಷ, ಬೆಂಗಳೂರು-ಬೆಳಗಾವಿ ಎಕ್ಸ್‌ಪ್ರೆಸ್-355 ನಿಮಿಷ, ಬೆಂಗಳೂರು-ಸಾಂಗ್ಲಿ ಎಕ್ಸ್‌ಪ್ರೆಸ್ -222 ನಿಮಿಷ, ಬೆಂಗಳೂರು-ಜೋಧಪುರ ಎಕ್ಸ್‌ಪ್ರೆಸ್- 237 ನಿಮಿಷ, ಮೈಸೂರು-ಬೆಳಗಾವಿ -245 ನಿಮಿಷ, ದಾದರ-ಪುದುಚೇರಿ ಎಕ್ಸ್‌ಪ್ರೆಸ್ -165 ನಿಮಿಷ, ಮಿರಜ್‌- ಹುಬ್ಬಳ್ಳಿ ಪ್ಯಾಸೆಂಜರ್‌-147 ನಿಮಿಷ, ಸಿಕಂದರಾಬಾದ್‌- ಬೆಳಗಾವಿ -222 ನಿಮಿಷ, ವಾಸ್ಕೋಡಿಗಾಮಾ-ಶಾಲಿಮಾರ್‌ ಎಕ್ಸ್‌ಪ್ರೆಸ್ -123 ನಿಮಿಷ, ತಿರುಪತಿ-ಛತ್ರಪತಿ ಶಾಹು ಮಹಾರಾಜ ಟರ್ಮಿನಲ್‌ ಎಕ್ಸ್‌ಪ್ರೆಸ್ -184 ನಿಮಿಷ, ಅಜ್ಮೀರ್‌-ಬೆಂಗಳೂರು ಎಕ್ಸ್‌ಪ್ರೆಸ್- 158 ನಿಮಿಷ ತಡೆ ಹಿಡಿಯಲಾಗಿತ್ತು.

ಇದಲ್ಲದೇ, ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲನ್ನು -150 ನಿಮಿಷ ತಡವಾಗಿ ಮರು ನಿಗದಿಪಡಿಸಲಾಗಿತ್ತು. ಆದರೆ ಬೆಳಗಾವಿಯಿಂದ -192 ನಿಮಿಷ ತಡವಾಗಿ ಚಲಿಸಿತು. ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲು ಬೆಳಗಾವಿಯಿಂದಲೇ -235 ನಿಮಿಷ ತಡವಾಗಿ ಚಲಿಸಿತು.


ರದ್ದತಿ:

ಈ ನಡುವೆ ಸೋಲ್ಲಾಪುರ- ಧಾರವಾಡ ಪ್ಯಾಸೆಂಜರ್‌ನ್ನು ನವಲೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಿದ್ದರೆ, ಪಂಡರಾಪುರ-ಧಾರವಾಡ ರೈಲನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಮಧ್ಯಾಹ್ನದ ನಂತರ ಸುಗಮ ಸಂಚಾರ ಶುರುವಾಯಿತು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.